ನವದೆಹಲಿ: ಕೋವಿಡ್–19 ಪಿಡುಗು ಕಾಣಿಸಿಕೊಂಡ ಒಂದೂವರೆ ವರ್ಷದ ನಂತರ ಜಾಗತಿಕವಾಗಿ ಶೇ 50ರಷ್ಟು ಶಾಲೆಗಳಲ್ಲಿ ಮಾತ್ರ ಭೌತಿಕವಾಗಿ ಕಲಿಕೆ–ಬೋಧನಾ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಶೇ 34ರಷ್ಟು ಶಾಲೆಗಳು ಈಗಲೂ ‘ಹೈಬ್ರಿಡ್ ವಿಧಾನ’ದ (ಆಫ್‌ಲೈನ್ ಹಾಗೂ ಭೌತಿಕ ತರಗತಿ) ಕಲಿಕೆ–ಬೋಧನಾ ಪ್ರಕ್ರಿಯೆಯ ಮೊರೆ ಹೋಗಿವೆ ಎಂದು ‘ಕೋವಿಡ್–19 ಗ್ಲೋಬಲ್ ಎಜುಕೇಷನ್ ರಿಕವರಿ ಟ್ರ್ಯಾಕರ್’ನ ಅಂಕಿ–ಅಂಶಗಳು ಹೇಳುತ್ತವೆ.

ಅಮೆರಿಕದ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ, ವಿಶ್ವ ಬ್ಯಾಂಕ್ ಹಾಗೂ ಯುನಿಸೆಫ್ ಜಂಟಿಯಾಗಿ ಈ ‘ಟ್ರ್ಯಾಕರ್’ ಆರಂಭಿಸಿವೆ.

ಕೋವಿಡ್–19 ಪ್ರಕರಣಗಳು ಕಡಿಮೆಯಾದ ನಂತರ ಯೋಜನೆಗಳನ್ನು ರೂಪಿಸಲು, ಶಾಲೆಗಳನ್ನು ಪುನರಾರಂಭಿಸುವ ಸಂಬಂಧ ನಿರ್ಧಾರ ಕೈಗೊಳ್ಳುವುದಕ್ಕೆ ಅನುಕೂಲವಾಗಲು ವಿವಿಧ ಆಯಾಮಗಳ ಅಂಕಿ–ಅಂಶಗಳನ್ನು ಸಂಗ್ರಹಿಸಿ, ಕ್ರೋಡೀಕರಿಸಲು ಈ ‘ಟ್ರ್ಯಾಕರ್’ ರೂಪಿಸಲಾಗಿದೆ. ಸದ್ಯ, 200ಕ್ಕೂ ಅಧಿಕ ರಾಷ್ಟ್ರಗಳು ಈ ‘ಟ್ರ್ಯಾಕರ್’ನ ನೆರವು ಪಡೆಯುತ್ತಿವೆ.

ಶೇ 53ರಷ್ಟು ದೇಶಗಳು ಶಿಕ್ಷಕರಿಗೆ ಕೋವಿಡ್ ಲಸಿಕೆ ನೀಡಲು ಆದ್ಯತೆ ನೀಡಿರುವುದು ಈ ‘ಟ್ರ್ಯಾಕರ್’ನ ಅಂಕಿ–ಅಂಶಗಳಿಂದ ತಿಳಿದುಬರುತ್ತದೆ.

‘ಪುನರಾರಂಭಗೊಂಡಿರುವ ಶಾಲೆಗಳು ತಮ್ಮ ಪರಿಸರದಲ್ಲಿ ಕೊರೊನಾ ಸೋಂಕು ಪ್ರಸರಣ ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿವೆ. ಮಾಸ್ಕ್ ಧಾರಣೆ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ವಾತಾಯನ ವ್ಯವಸ್ಥೆಯಂತಹ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ’ ಎಂದು ವಿವರಿಸಲಾಗಿದೆ.

ಕೋವಿಡ್–19 ಪಿಡುಗು ಕಾಣಿಸಿಕೊಂಡ ಒಂದೂವರೆ ವರ್ಷದ ನಂತರ ಜಾಗತಿಕವಾಗಿ ಶೇ 50ರಷ್ಟು ಶಾಲೆಗಳಲ್ಲಿ ಮಾತ್ರ ಭೌತಿಕ ಕಲಿಕೆ–ಬೋಧನೆಗೆ ಚಾಲನೆ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.