×
ADVERTISEMENT
ಈ ಕ್ಷಣ :

Schools Reopen

ADVERTISEMENT

ಸಲಹಾ ಸಮಿತಿ ಅನುಮತಿ ನೀಡಿದರೆ ತರಗತಿ ಮತ್ತೆ ಆರಂಭ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್

ಬೆಂಗಳೂರು: ‘ತಾಂತ್ರಿಕ ಸಲಹಾ ಸಮಿತಿ ಅನುಮತಿ ನೀಡಿದರೆ ತರಗತಿಗಳನ್ನು ಮತ್ತೆ ತೆರೆಯಲಾಗುವುದು‘ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗುರುವಾರ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ತಾಂತ್ರಿಕ ಸಲಹಾ ಸಮಿತಿ ಶಿಫಾರಸಿನಂತೆ ಕೆಲ ನಗರಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಶುಕ್ರವಾರದ ಸಭೆಯಲ್ಲಿ ಸಮಿತಿ ಸಲಹೆಯಂತೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು. ‘ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ್ದಾರೆ. ಅಂತಿಮವಾಗಿ ಅವರೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
Last Updated 20 ಜನವರಿ 2022, 18:18 IST
ಸಲಹಾ ಸಮಿತಿ ಅನುಮತಿ ನೀಡಿದರೆ ತರಗತಿ ಮತ್ತೆ ಆರಂಭ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್

ನಿಗದಿಯಂತೆ ಶಾಲೆ ಆರಂಭಕ್ಕೆ ಎನ್‌ಸಿಇಇ ಆಗ್ರಹ

ಪ್ರಜಾವಾಣಿ ವಾರ್ತೆ ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಈ ಹಿಂದೆ ಘೋಷಿಸಿರುವಂತೆ ಅಕ್ಟೋಬರ್‌ 21ರಿಂದ ಕಿರಿಯ ಪ್ರಾಥಮಿಕ ಶಾಲೆಗಳ ತರಗತಿ ಆರಂಭಿಸಬೇಕು ಎಂದು ಶಿಕ್ಷಣ ತುರ್ತು ಪರಿಸ್ಥಿತಿಗಾಗಿ ರಾಷ್ಟ್ರೀಯ ಒಕ್ಕೂಟ (ಎನ್‌ಸಿಇಇ) ಆಗ್ರಹಿಸಿದೆ. ‘ಅ.21ರಿಂದ ಕಿರಿಯ ಪ್ರಾಥಮಿಕ ಶಾಲೆಗಳ ತರಗತಿ ಆರಂಭಿಸುವುದಾಗಿ ಸಚಿವರು ಘೋಷಿಸಿದ್ದರು. ಈಗ, ಪುನಃ ತರಗತಿ ಆರಂಭದ ಕುರಿತು ಪೋಷಕರ ಜತೆ ಚರ್ಚಿಸುವುದಾಗಿ ಹೇಳಿರುವುದು ನಿರಾಶಾ ದಾಯಕ ಬೆಳವಣಿಗೆ. ಸರ್ಕಾರ ಇನ್ನು ವಿಳಂಬ ಮಾಡಬಾರದು. ನಿಗದಿ ಯಂತೆಯೇ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೂ ತರಗತಿ ಆರಂಭಿಸಬೇಕು’ ಎಂದು ಒಕ್ಕೂಟದ ಸದಸ್ಯರಾದ ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ ಮತ್ತು ಗುರುಮೂರ್ತಿ ಕಾಶಿನಾಥನ್‌ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
Last Updated 15 ಅಕ್ಟೋಬರ್ 2021, 19:50 IST
fallback

ಜಾಗತಿಕವಾಗಿ ಶೇ 50ರಷ್ಟು ಶಾಲೆಗಳಲ್ಲಿ ಭೌತಿಕ ತರಗತಿ ಆರಂಭ

‘ಕೋವಿಡ್‌–19 ಗ್ಲೋಬಲ್ ಎಜುಕೇಷನ್ ರಿಕವರಿ ಟ್ರ್ಯಾಕರ್‌’ನ ಮಾಹಿತಿ
Last Updated 10 ಅಕ್ಟೋಬರ್ 2021, 8:20 IST
ಜಾಗತಿಕವಾಗಿ ಶೇ 50ರಷ್ಟು ಶಾಲೆಗಳಲ್ಲಿ ಭೌತಿಕ ತರಗತಿ ಆರಂಭ
ADVERTISEMENT
ADVERTISEMENT
ADVERTISEMENT
ADVERTISEMENT