ನವದೆಹಲಿ: ಈಗಿನ ಪರಿಸ್ಥಿತಿಯಲ್ಲಿ ದೇಶದಲ್ಲಿ ಕೋವಿಡ್-19 ಸೋಂಕಿಗೆ ಬೂಸ್ಟರ್ ಡೋಸ್ ನೀಡುವ ಕುರಿತು ಯಾವುದೇ ಯೋಜನೆ ಹೊಂದಿಲ್ಲ ಎಂದು ನೀತಿ ಆಯೋಗ ಹೇಳಿದೆ.

ಸರ್ಕಾರದ ಮುಖ್ಯ ಕೋವಿಡ್-19 ಸಲಹೆಗಾರರಾಗಿರುವ ಡಾ. ವಿನೋದ್ ಕೆ. ಪಾಲ್ ಅವರು, ಭಾರತವು 100 ಕೋಟಿ ಲಸಿಕೆ ನೀಡಿಕೆಯತ್ತ ಸಾಗುತ್ತಿದೆ. ಲಸಿಕೆ ಉತ್ಪಾದನೆ ಹೆಚ್ಚಿಸಲಾಗಿದೆ. ಹೀಗಾಗಿ ಬೂಸ್ಟರ್ ಡೋಸ್ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ.

ಈಗ ದೇಶಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಯಾಗುತ್ತಿದ್ದು, ಇಲ್ಲಿ ಬಳಕೆಗೆ ಲಭ್ಯವಾದ ಬಳಿಕ, ಮುಂದಿನ ವರ್ಷದಿಂದ ರಫ್ತು ಮಾಡುವ ಗುರಿ ಇದೆ ಎಂದು ಡಾ. ವಿನೋದ್ ತಿಳಿಸಿದ್ದಾರೆ.

ಈಗಾಗಲೇ ಜಾಗತಿಕವಾಗಿ ಇಸ್ರೇಲ್, ಫ್ರಾನ್ಸ್, ಇಟಲಿ ಮತ್ತು ಜರ್ಮನಿ ಸಹಿತ 15ಕ್ಕೂ ಅಧಿಕ ರಾಷ್ಟ್ರಗಳು ಹಿರಿಯ ನಾಗರಿಕರಿಗೆ ಕೋವಿಡ್ 19 ತಡೆಗೆ ಮೂರನೇ ಡೋಸ್ ಲಸಿಕೆ ನೀಡಲಾರಂಭಿಸಿವೆ.

ಅಂತಿಮ ಒಪ್ಪಿಗೆ ಸಿಕ್ಕ ಕೂಡಲೇ ಮಕ್ಕಳಿಗೆ ಲಸಿಕೆ: ಬಸವರಾಜ ಬೊಮ್ಮಾಯಿ

ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆ ಪ್ರಕಾರ, ಮೂರನೇ ಡೋಸ್ ಲಸಿಕೆ ನೀಡುವ ಕುರಿತಂತೆ ಯಾವುದೇ ಸ್ಪಷ್ಟ ಅಧಿಸೂಚನೆ ಲಭ್ಯವಾಗಿಲ್ಲ, ಹೀಗಾಗಿ ದೇಶದಲ್ಲಿ ಬೂಸ್ಟರ್ ಡೋಸ್ ಲಸಿಕೆ ನೀಡುವ ಬಗ್ಗೆ ಯೋಜನೆ ರೂಪಿಸಿಲ್ಲ ಎಂದು ನೀತಿ ಆಯೋಗ ಹೇಳಿದೆ.

ಬ್ರಿಟನ್ನಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ವಿನಾಯಿತಿ: ಕೇಂದ್ರ ಸರ್ಕಾರ

ಭಾರತವು 100 ಕೋಟಿ ಲಸಿಕೆ ನೀಡಿಕೆಯತ್ತ ಸಾಗುತ್ತಿದೆ. ಲಸಿಕೆ ಉತ್ಪಾದನೆ ಹೆಚ್ಚಿಸಲಾಗಿದೆ. ಹೀಗಾಗಿ ಬೂಸ್ಟರ್ ಡೋಸ್ ಪ್ರಸ್ತಾಪವಿಲ್ಲ..

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.