×
ADVERTISEMENT
ಈ ಕ್ಷಣ :
ADVERTISEMENT

Fact check: ಸೇನಾ ಕೆಲಸಕ್ಕೆ ರೈತರು ಅಡ್ಡಿಪಡಿಸಿದರೇ?

Published : 10 ಅಕ್ಟೋಬರ್ 2021, 19:31 IST
ಫಾಲೋ ಮಾಡಿ
Comments

ಭಾರತ–ಚೀನಾ ಗಡಿಯತ್ತ ಸಾಗುತ್ತಿದ್ದ ಸೇನಾ ಬೆಂಗಾವಲು ಪಡೆಗೆ ರೈತರು ತಡೆ ಒಡ್ಡಿದರೇ? ವೈರಲ್ ಆಗಿರುವ ವಿಡಿಯೊ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಸೇನಾ ಸಮವಸ್ತ್ರದಲ್ಲಿರುವ ವ್ಯಕ್ತಿಯೊಬ್ಬರು ರೈತರ ಗುಂಪಿನ ಜೊತೆ ಮಾತುಕತೆ ನಡೆಸುತ್ತಿರುವ ದೃಶ್ಯ ಇದರಲ್ಲಿದೆ. ಪ್ರತಿಭಟನೆ ನಡೆಸುತ್ತಿರುವ ರೈತರು ಸೇನಾ ಕರ್ತವ್ಯಕ್ಕೆ ಅಡ್ಡಿಪಡಿಸುವ ಮೂಲಕ ಅಪಮಾನ ಮಾಡಿದ್ದಾರೆ ಎಂದು ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸಿದ್ದಾರೆ. 

ಈ ವಿಡಿಯೊ ಬಗ್ಗೆ ಸೇನೆಯೇ ಸ್ಪಷ್ಟೀಕರಣ ನೀಡಿದೆ. ಇದು ಸೆ. 27ರಂದು ಭಾರತ್‌ ಬಂದ್‌ನಂದು ಚಿತ್ರೀಕರಿಸಿದ ವಿಡಿಯೊ.  ದೈನದಿಂದ ಕಾರ್ಯಾಚರಣೆಯ ಭಾಗವಾಗಿ, 20 ಸೇನಾ ವಾಹನಗಳು ಕಪುರ್ತಲಾದಿಂದ ಬೀರ್ ಸಾರಂಗ್‌ವಾಲ್ ಕಡೆಗೆ ಸಂಚರಿಸುತ್ತಿದ್ದವು. ಅಂದರೆ, ಗಡಿಯೊಳಗೇ ಪ್ರಯಾಣಿಸುತ್ತಿದ್ದವು. ಮಾರ್ಗಮಧ್ಯೆ, ‘ಜಲಂಧರ್ ಸಮೀಪ ಬೆಂಗಾವಲು ವಾಹನದಲ್ಲಿದ್ದ ಸಿಬ್ಬಂದಿ ಹಾಗೂ ರೈತರ ನಡುವೆ 20 ನಿಮಿಷ ಚರ್ಚೆ ನಡೆಯಿತು. ರೈತರು ವಿನಯಶೀಲರಾಗಿದ್ದರು ಮತ್ತು ನಿರ್ಗಮಿಸುವಾಗ ಕೈಕುಲುಕಿದರು. ಆದರೆ ಈ ದೃಶ್ಯವನ್ನು ವೈರಲ್ ವೀಡಿಯೊದಲ್ಲಿ ತೋರಿಸಲಾಗಿಲ್ಲ’ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈತರ ಪ್ರತಿಭಟನೆಗೆ ಮಸಿ ಬಳಿಯಲು ಮಾಡಿದ ಮತ್ತೊಂದು ಯತ್ನವಿದು ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.

ಭಾರತ–ಚೀನಾ ಗಡಿಯತ್ತ ಸಾಗುತ್ತಿದ್ದ ಸೇನಾ ಬೆಂಗಾವಲು ಪಡೆಗೆ ರೈತರು ತಡೆ ಒಡ್ಡಿದರೇ? ವೈರಲ್ ಆಗಿರುವ ವಿಡಿಯೊ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಸೇನಾ ಸಮವಸ್ತ್ರದಲ್ಲಿರುವ ವ್ಯಕ್ತಿಯೊಬ್ಬರು ರೈತರ ಗುಂಪಿನ ಜೊತೆ ಮಾತುಕತೆ ನಡೆಸುತ್ತಿರುವ ದೃಶ್ಯ ಇದರಲ್ಲಿದೆ. ಪ್ರತಿಭಟನೆ ನಡೆಸುತ್ತಿರುವ ರೈತರು ಸೇನಾ ಕರ್ತವ್ಯಕ್ಕೆ ಅಡ್ಡಿಪಡಿಸುವ ಮೂಲಕ ಅಪಮಾನ ಮಾಡಿದ್ದಾರೆ ಎಂದು ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT