ಅರುಣಾಚಲ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಭಾರತ ಹಾಗೂ ಚೀನಾ ಸೈನಿಕರ ನಡುವೆ ಸಣ್ಣಮಟ್ಟದ ಘರ್ಷಣೆ ನಡೆದಿತ್ತು. ಚೀನಾ ಸೈನಿಕರು ಗಡಿದಾಟಿ ಬಂದಿದ್ದರು ಎನ್ನಲಾಗಿತ್ತು. ಹೀಗೆ ಗಡಿ ದಾಟಿ ಬಂದ ಸುಮಾರು ನೂರು ಸೈನಿಕರನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ. ಗಾಜಿಯಾಬಾದ್ನ ಬಿಜೆಪಿ ಸಂಚಾಲಕ ಆನಂದ್ ಕಲ್ರಾ ಅವರು ಚೀನಾ ಸೈನಿಕರನ್ನು ಬಂಧಿಸಲಾಗಿದೆ ಎಂಬುದನ್ನು ಬಿಂಬಿಸುವ ಚಿತ್ರವನ್ನು ಫೇಸ್ಬುಕ್ನಲ್ಲಿ ಪ್ರಕಟಿಸಿದ್ದಾರೆ. ಹಲವರು ಈ ಚಿತ್ರವನ್ನು ಶೇರ್ ಮಾಡಿದ್ದಾರೆ.