ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋನ ಮೂಲಕ ಮನೆ ಮಾತಾಗಿದ್ದ ಪುಟಾಣಿ ಸಮನ್ವಿ ನಮ್ಮನ್ನು ಅಗಲಿ ಒಂದು ವಾರ ಕಳೆದಿದೆ. ಮುದ್ದಿನ ಮಗಳನ್ನು ಕಳೆದುಕೊಂಡಿರುವ ಅಮೃತಾ –ರೂಪೇಶ್ ದಂಪತಿಯ ನೋವು ಕಡಿಮೆಯಾಗಿಲ್ಲ.

ಇದೀಗ ಸಮನ್ವಿ ಜೊತೆಗಿನ ವಿಡಿಯೊವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅಮೃತಾ, ಇದು ಅವಳ (ಸಮನ್ವಿ) ಕೊನೆಯ ಮುತ್ತು ನಾನು ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಅಮೃತಾ ಅವರಿಗೆ ಸಮನ್ವಿ ಪ್ರೀತಿಯಿಂದ ಮುತ್ತು ಕೊಡುತ್ತಿರುವ ದ್ಯಶ್ಯ ನೋಡುಗರ ಹೃದಯ ಸ್ಪರ್ಶಿಸುವಂತಿದೆ. ಈ ವಿಡಿಯೊವನ್ನು 29 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, 7 ಸಾವಿರ ಮಂದಿ ಇಷ್ಟಪಟ್ಟಿದ್ದಾರೆ.

‘ಸಮಾಧಾನ ಮಾಡಿಕೊಳ್ಳಿ ಅಮೃತಾ, ಸಮನ್ವಿ ಮತ್ತೆ ಮಗುವಾಗಿ ಹುಟ್ಟಿ ಬರುತ್ತಾಳೆ’ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

ಪಟಪಟನೆ ಮಾತನಾಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಪುಟಾಣಿ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಜ.13ರಂದು (ಗುರುವಾರ) ಬೆಂಗಳೂರಿನ ಕೋಣನಕುಂಟೆ ಬಳಿಯ ವಾಜರಹಳ್ಳಿ ಮುಖ್ಯರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಮನ್ವಿ ನಿಧನರಾಗಿದ್ದಾರೆ.

ಓದಿ... ‘ದೇವರು ಇದ್ದಾನೋ ಇಲ್ಲವೋ’: ಸಮನ್ವಿ ಸಾವಿನ ಕುರಿತು ಸೃಜನ್ ಲೋಕೇಶ್ ನುಡಿ ನಮನ

ಕಲರ್ಸ್ ಕನ್ನಡ ವಾಹಿನಿಯ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋನ ಮೂಲಕ ಮನೆ ಮಾತಾಗಿದ್ದ ಪುಟಾಣಿ ಸಮನ್ವಿ ನಮ್ಮನ್ನು ಅಗಲಿ ಒಂದು ವಾರ ಕಳೆದಿದೆ. ಮುದ್ದಿನ ಮಗಳನ್ನು ಕಳೆದುಕೊಂಡಿರುವ ಅಮೃತಾ –ರೂಪೇಶ್ ದಂಪತಿಯ ನೋವು ಕಡಿಮೆಯಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.