ಭಾರತೀಯರಲ್ಲಿ ಧರ್ಮದ ಮೇಲಿರುವ ನಂಬಿಕೆ, ಇಲ್ಲಿರುವ ಪುಣ್ಯಸ್ಥಳಗಳನ್ನು ಬೆಸೆಯಬೇಕಾದ ಜರೂರು, ಇಲ್ಲಿಯ ಜನ ಸಾಧು-ಸಂತರ ಮಾತಿಗೆ ಹೆಚ್ಚು ಬೆಲೆ ಕೊಡುವುದು ಮುಂತಾದವನ್ನು ಎ.ರವೀಂದ್ರ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ಜ. 21) ಗುರುತಿಸಿದ್ದಾರೆ. ಆದರೆ, ಈ ಸ್ಥಳಗಳ ಮೂಲಕ ಸರ್ಕಾರವು ಪಡೆಯಬಹುದಾದ ಆರ್ಥಿಕ ಲಾಭಗಳತ್ತ ಅವರು ಗಮನ ಸೆಳೆದಿರುವ ವಿಚಾರ ಪ್ರಶ್ನಾರ್ಹವಾಗಿದೆ.

ಏಕೆಂದರೆ, ಆರ್ಥಿಕ ಲಾಭ ಎಂದಕೂಡಲೇ ವಾಹನ ಸಂಚಾರ, ವಾಣಿಜ್ಯ ಸಂಕೀರ್ಣಗಳು, ಹೋಟೆಲ್ ವ್ಯಾಪಾರ, ಮದ್ಯದಂಗಡಿ, ವಸತಿ ನಿಲಯಗಳು, ರೋಪ್ ವೇ, ದೊಡ್ಡದೊಡ್ಡ ರಸ್ತೆಗಳ ಅಭಿವೃದ್ಧಿ, ಸೇತುವೆಗಳು, ನಿಲ್ದಾಣಗಳು, ಒಳಚರಂಡಿ, ಯಾತ್ರಿ ನಿವಾಸಗಳೆಲ್ಲ ಬಂದೇಬರುತ್ತವೆ. ಅಂದಹಾಗೆ, ನಮ್ಮ ಅಭಿವೃದ್ಧಿಯ ಕಲ್ಪನೆ ಸುತ್ತುತ್ತಿರುವುದೇ ಈ ವಿಷವರ್ತುಲದಲ್ಲಿ. ಹೀಗಾಗಿ, ಈಗಾಗಲೇ ಹೆಸರಾಂತ ಯಾತ್ರಾಸ್ಥಳಗಳೆಲ್ಲ (ಉದಾ: ನಂದಿ ಗಿರಿಧಾಮ, ಬೇಲೂರು, ಶ್ರವಣಬೆಳಗೊಳ, ಚಾಮುಂಡಿ ಬೆಟ್ಟ, ಜೋಗ್ ಜಲಪಾತ, ಮಲೆ ಮಹದೇಶ್ವರ, ಮೇಲುಕೋಟೆ, ಕಾಂಚೀಪುರಂ, ಶ್ರೀರಂಗಂ, ತಿರುಪತಿ, ಕನ್ಯಾಕುಮಾರಿ, ವೇಲಾಂಕಣಿ, ಶಿರಡಿ...) ಮಾರುಕಟ್ಟೆಗಳಂತೆ ಆಗಿಹೋಗಿವೆ. ಆದರೆ, ಇನ್ನೂ ಅಷ್ಟಾಗಿ ಬೆಳಕಿಗೆ ಬಾರದೆ ಅನಾಮಿಕವಾಗಿ ಉಳಿದುಕೊಂಡಿರುವ ಬೆಟ್ಟಗುಡ್ಡಗಳು, ದೇವಸ್ಥಾನಗಳು, ಚಾರಿತ್ರಿಕ ಸ್ಥಳಗಳು (ಉದಾ: ಬೆಳವಾಡಿ, ದೊಡ್ಡಗದ್ದವಳ್ಳಿ, ನುಗ್ಗೇಹಳ್ಳಿ, ಅರಳಗುಪ್ಪೆ, ಅಗ್ರಹಾರ ಬೆಳಗುಲಿ, ಅಮೃತಾಪುರ ಮುಂತಾದವು) ತಮ್ಮ ಪ್ರಶಾಂತ ವಾತಾವರಣವನ್ನು ಉಳಿಸಿಕೊಂಡು, ವಿರಳ ಸಂಖ್ಯೆಯಲ್ಲಿ ಬರುವ ಜಿಜ್ಞಾಸುಗಳಿಗೆ ನೆಮ್ಮದಿಯ ತಂಪನ್ನೀಯುತ್ತಿವೆ.

ಇದರಿಂದ ಒಂದು ಸಂಗತಿ ಸ್ಪಷ್ಟವಾಗುತ್ತದೆ. ಅದೇನೆಂದರೆ, ಆರ್ಥಿಕ ಪ್ರಯೋಜನದ ದೃಷ್ಟಿ ಬಂದ ಕೂಡಲೇ ಒಂದು ಪರಿಸರದ ಘನವಾದ ಅಂಶಗಳೆಲ್ಲವೂ ಕೆಲವೇ ವರ್ಷಗಳಲ್ಲಿ ಗತವೈಭವವಾಗುತ್ತವೆ. ಜೊತೆಗೆ ಹಣದೊಂದಿಗೆ ಅನೈತಿಕತೆ, ಭ್ರಷ್ಟಾಚಾರ, ಗುಂಪುಗಾರಿಕೆ, ರಾಜಕೀಯದಂತಹ ಅನಾರೋಗ್ಯಕರ ಅಂಶಗಳು ತಲೆ ಎತ್ತುತ್ತವೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪುಣ್ಯಸ್ಥಳಗಳನ್ನು ಜನಜಂಗುಳಿಯ ತಾಣಗಳನ್ನಾಗಿಸದೆ, ಅಲ್ಲಿಯ ಅಲೌಕಿಕ ಅನನ್ಯತೆಯನ್ನು ಹೇಗೆ ಅವಿಚ್ಛಿನ್ನವಾಗಿ ಉಳಿಸಿಕೊಳ್ಳಬಹುದು ಎನ್ನುವುದರತ್ತ ಗಮನ ಹರಿಸುವುದು ಸೂಕ್ತ. ಇಲ್ಲದಿದ್ದರೆ ‘ಹರುಷದ ಕೂಳಿಗೆ ಹೋಗಿ ವರುಷದ ಕೂಳನ್ನು ಕಳೆದುಕೊಂಡಂತೆ’ ಎನ್ನುವ ರೇಜಿಗೆಯ ಸ್ಥಿತಿ ಸೃಷ್ಟಿಯಾಗುತ್ತದಷ್ಟೆ. ತಾತ್ಕಾಲಿಕ ಆಕರ್ಷಣೆಗೆ ಮರುಳಾಗುವುದಕ್ಕಿಂತ ಚಿರಂತನವಾದ ನೆಮ್ಮದಿಯ ಬೆಲೆಯನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು ಮುಖ್ಯ.

–ಬಿ.ಎಸ್.ಜಯಪ್ರಕಾಶ ನಾರಾಯಣ, ಬೆಂಗಳೂರು

ಭಾರತೀಯರಲ್ಲಿ ಧರ್ಮದ ಮೇಲಿರುವ ನಂಬಿಕೆ, ಇಲ್ಲಿರುವ ಪುಣ್ಯಸ್ಥಳಗಳನ್ನು ಬೆಸೆಯಬೇಕಾದ ಜರೂರು, ಇಲ್ಲಿಯ ಜನ ಸಾಧು-ಸಂತರ ಮಾತಿಗೆ ಹೆಚ್ಚು ಬೆಲೆ ಕೊಡುವುದು ಮುಂತಾದವನ್ನು ಎ.ರವೀಂದ್ರ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ಜ. 21) ಗುರುತಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.