ಮಾಸ್ಕೋ: ಉಕ್ರೇನ್, ಬೆಲರುಸ್ ಗಡಿಗಳಲ್ಲಿ ಮತ್ತಷ್ಟು ಮಿಲಿಟರಿ ನಿಯೋಜನೆ ಮಾಡಿರುವ ರಷ್ಯಾ, ತನ್ನ ಯುದ್ಧ ಸನ್ನದ್ಧತೆಯನ್ನು ತೀವ್ರಗೊಳಿಸಿದೆ ಎಂದು ಅಮೆರಿಕದ ಖಾಸಗಿ ತಂತ್ರಜ್ಞಾನ ಸಂಸ್ಥೆ ‘ಮ್ಯಾಕ್ಸರ್ ಟೆಕ್ನಾಲಜೀಸ್’ ಉಪಗ್ರಹ ಚಿತ್ರಗಳ ಮೂಲಕ ಬಹಿರಂಗಪಡಿಸಿದೆ.

ಜನವರಿ 19 ರಿಂದ ಫೆಬ್ರವರಿ 1 ರವರೆಗೆ ಚಿತ್ರಗಳನ್ನು ತೆಗೆಯಲಾಗಿದೆ ಎಂದು ‘ಮ್ಯಾಕ್ಸರ್’ ಹೇಳಿದೆ. ಆದರೆ ಈ ಚಿತ್ರಗಳನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಸುದ್ದಿ ಸಂಸ್ಥೆ ‘ರಾಯಿಟರ್ಸ್’ ಸ್ಪಷ್ಟಪಡಿಸಿದೆ.

ಉಕ್ರೇನ್ ಗಡಿ ಸಮೀಪ ರಷ್ಯಾದ ಮಿಲಿಟರಿ ನಿಯೋಜನೆಯು ಯುದ್ಧದ ಭೀತಿ ಹುಟ್ಟು ಹಾಕಿದೆ.

ಆದರೆ ರಷ್ಯಾ ಯುದ್ಧ ಸಾಧ್ಯತೆಗಳನ್ನು ತಳ್ಳಿಹಾಕಿದೆ. ಉಕ್ರೇನ್, ಬೆಲರುಸ್ ಸಮೀಪದ ತನ್ನ ಸೇನಾ ನಿಯೋಜನೆಯು ಮಿಲಿಟರಿ ತಾಲೀಮಿಗಾಗಿ ಮಾತ್ರ ಎಂದು ರಷ್ಯಾ ಹೇಳುತ್ತಾ ಬಂದಿದೆ.

ಕಳೆದೆರಡು ತಿಂಗಳುಗಳಲ್ಲಿ ರಷ್ಯಾ ಉಕ್ರೇನ್ ಬಳಿ ಮಿಲಿಟರಿ ಉಪಕರಣಗಳು ಮತ್ತು ಘಟಕಗಳನ್ನು ನಿಯೋಜಿಸುತ್ತಿದೆ ಎಂದು ಮ್ಯಾಕ್ಸರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸದ್ಯದ ನಿಯೋಜನೆಯಲ್ಲಿನ ಕೆಲವು ಘಟಕಗಳು ಹಳೆಯವು. ಆದರೆ, ಇತ್ತೀಚಿನ ಕೆಲ ದಿನಗಳಲ್ಲಿ ಭಾರಿ ಪ್ರಮಾಣದ ಸೇನೆಯನ್ನು ನಿಯೋಜಿಸಲಾಗಿದೆ.

ಮಿಲಿಟರಿ ತಾಣಗಳಲ್ಲಿ ಹೆಚ್ಚಿನ ಸಿಬ್ಬಂದಿಗಳು ಇರುವುದು ಚಿತ್ರಗಳಿಂದ ಬಹಿರಂಗವಾಗಿದೆ ಎಂದು ಮ್ಯಾಕ್ಸರ್ ಹೇಳಿದೆ.

ಉಕ್ರೇನ್‌ಗೆ ನ್ಯಾಟೊ ಸದಸ್ಯತ್ವ ನೀಡುವುದು, ನ್ಯಾಟೊ ಪಡೆಗಳ ಸೇನಾ ನಿಯೋಜನೆ ಮತ್ತು ಉಕ್ರೇನ್‌ಗೆ ಅಮೆರಿಕ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲವನ್ನು ರಷ್ಯಾ ವಿರೋಧಿಸಿದೆ. ಇದೇ ಕಾರಣಕ್ಕೇ ರಷ್ಯಾ ಉಕ್ರೇನ್ ಗಡಿ ಸಮೀಪ 1,00,000ಕ್ಕೂ ಅಧಿಕ ಸೇನಾ ತುಕಡಿಗಳನ್ನು ನಿಯೋಜಿಸಿದೆ.

ಗಾಲ್ವಾನ್ ಕಣಿವೆಯಲ್ಲಿ ಉಂಟಾದ ಸಂಘರ್ಷದ ನಂತರ ಚೀನಾವು ಭಾರತದ ಗಡಿಯಲ್ಲಿ ಸೇನೆಯನ್ನು ನಿಯೋಜನೆ ಮಾಡಿದ್ದು, ರಸ್ತೆಗಳನ್ನು ನಿರ್ಮಿಸಿದ್ದು, ನದಿ ಪತವನ್ನು ಬದಲಾಯಿಸಿದ್ದ ಉಪಗ್ರಹ ಚಿತ್ರಗಳನ್ನು ಇದೇ ಮ್ಯಾಕ್ಸರ್ ಸಂಸ್ಥೆ ಪ್ರಕಟಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.