ಬೀಜಿಂಗ್: ಭಾರತದೊಂದಿಗೆ ಬಾಂಧವ್ಯ ಹದಗೆಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಚೀನಾವು ಸೇನಾ ಸಂಘರ್ಷಕ್ಕೆ ಸಿದ್ಧವಾಗಿರಬೇಕು ಎಂದು ಅಲ್ಲಿನ ಪತ್ರಿಕೆಯೊಂದು ಹೇಳಿದೆ.

‘ತಾನು ಬಯಸಿದ ರೀತಿಯಲ್ಲಿ ಗಡಿಯನ್ನು ಹೊಂದಬಹುದು ಎಂದು ಭಾರತ ಬಯಸಬಾರದು. ಒಂದು ವೇಳೆ ಭಾರತ ಯುದ್ಧ ಆರಂಭಿಸಿದಲ್ಲಿ, ಅದು ಖಂಡಿತವಾಗಿಯೂ ಸೋಲಲಿದೆ. ಯಾವುದೇ ರೀತಿಯ ರಾಜಕೀಯ ತಂತ್ರಗಾರಿಕೆ ಮತ್ತು ಒತ್ತಡವನ್ನು ಚೀನಾ ನಿರ್ಲಕ್ಷಿಸುತ್ತದೆ’ ಎಂದು ‘ಗ್ಲೋಬಲ್ ಟೈಮ್ಸ್’ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

‘ಭಾರತದ ಜತೆಗಿನ ಗಡಿ ವಿವಾದ ನಿಭಾಯಿಸುವಲ್ಲಿ, ಚೀನಾ ಎರಡು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಮೊದಲನೆಯದಾಗಿ, ಭಾರತವು ಏನೇ ಸಮಸ್ಯೆಗಳನ್ನು ಸೃಷ್ಟಿಸಿದರೂ ನಮ್ಮ ನಿಲುವಿಗೆ ನಾವು ಬದ್ಧರಾಗಿರಬೇಕು. ಚೀನಾದ ಪ್ರದೇಶವು ಎಂದಿದ್ದರೂ ಚೀನಾಕ್ಕೇ ಸೇರಿದ್ದು ಮತ್ತು ನಾವು ಅದನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಗಡಿ ವಿಚಾರದಲ್ಲಿ ಭಾರತ ಇನ್ನೂ ನಿದ್ರಾವಸ್ಥೆಯಲ್ಲಿದೆ. ಅದು ಎಚ್ಚರಗೊಳ್ಳುವ ವರೆಗೆ ನಾವು ಕಾಯಬಹುದು’ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

ಓದಿ: ಭಾರತ –ಚೀನಾ ಸೇನಾ ಮಾತುಕತೆಯಲ್ಲಿ ಸಿಗದ ಪರಿಹಾರ: ಪರಸ್ಪರ ದೂಷಣೆಯಲ್ಲೇ ಮುಗಿದ ಸಭೆ

‘ಭಾರತ ಹಾಗೂ ಚೀನಾ ದೀರ್ಘಾವಧಿಯ ಗಡಿ ಸಂಘರ್ಷವನ್ನು ತಾಳಿಕೊಳ್ಳಲು ಸಾಕಷ್ಟು ಸಾಮರ್ಥ್ಯ ಹೊಂದಿರುವ ಎರಡು ಮಹಾ ಶಕ್ತಿಗಳು ಎಂಬುದು ಚೀನಾ ಜನರಿಗೆ ತಿಳಿದಿದೆ. ಉಭಯ ರಾಷ್ಟ್ರಗಳು ವೈಮನಸ್ಸು ಹೊಂದುವುದು ವಿಷಾದನೀಯ. ಆದರೆ ಭಾರತಕ್ಕೆ ಅದುವೇ ಬೇಕಿದ್ದಲ್ಲಿ ಚೀನಾ ಕೂಡ ಕೊನೆಯ ವರೆಗೂ ಅದನ್ನೇ ಅನುಸರಿಸಲಿದೆ’ ಎಂದು ಪತ್ರಿಕೆ ಉಲ್ಲೇಖಿಸಿದೆ.

ಉಭಯ ದೇಶಗಳ ನಡುವಣ ಬಾಂಧವ್ಯ ಚೆನ್ನಾಗಿ ಇರಿಸಿಕೊಳ್ಳುವುದಕ್ಕಾಗಿ ಗಡಿ ಸಾರ್ವಭೌಮತ್ವದ ವಿಚಾರದಲ್ಲಿ ಚೀನಾ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದು ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಸಾಬೀತಾಗಿದೆ ಎಂದೂ ಉಲ್ಲೇಖಿಸಲಾಗಿದೆ.

ಪೂರ್ವ ಲಡಾಖ್‌ನ ಗಡಿಯಲ್ಲಿ 17 ತಿಂಗಳಿಂದ ತಲೆದೋರಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಭಾನುವಾರ ನಡೆದ ಭಾರತ–ಚೀನಾ ನಡುವಿನ 13ನೇ ಸುತ್ತಿನ ಸೇನಾ ಮಾತುಕತೆ ವಿಫಲವಾಗಿತ್ತು. ಪರಸ್ಪರ ದೂಷಣೆಯಲ್ಲಿ ಸಭೆ ಮುಗಿದಿದೆ ಎಂದು ತಿಳಿದುಬಂದಿತ್ತು. ಇದರ ಬೆನ್ನಲ್ಲೇ ‘ಗ್ಲೋಬಲ್ ಟೈಮ್ಸ್’ ಸಂಪಾದಕೀಯದಲ್ಲಿ ಗಡಿ ವಿಚಾರ ಪ್ರಸ್ತಾಪಿಸಲಾಗಿದೆ.

ಭಾರತದೊಂದಿಗೆ ಬಾಂಧವ್ಯ ಹದಗೆಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಚೀನಾವು ಸೇನಾ ಸಂಘರ್ಷಕ್ಕೆ ಸಿದ್ಧವಾಗಿರಬೇಕು ಎಂದು ಅಲ್ಲಿನ ಪತ್ರಿಕೆಯೊಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.