ವಾಷಿಂಗ್ಟನ್:  ಅಮೆರಿಕ ಸರ್ಕಾರದ ಮೊದಲ ಕಪ್ಪುವರ್ಣೀಯ ಕಾರ್ಯದರ್ಶಿ, ಮಿಲಿಟರಿಯ ಉನ್ನತ ಅಧಿಕಾರಿಯಾಗಿದ್ದ ಕಾಲಿನ್ ಪೊವೆಲ್ (84) ಕೋವಿಡ್ ಸಂಬಂಧಿತ ಸಮಸ್ಯೆಗಳ ಹಿನ್ನೆಲೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.

’ ಅವರಿಗೆ ಕೋವಿಡ್ ಲಸಿಕೆಯ ಪೂರ್ಣ ಡೋಸ್ ನೀಡಲಾಗಿತ್ತು. ‘ವಾಲ್ಟರ್ ರೀಡ್ ನ್ಯಾಷನಲ್ ಮೆಡಿಕಲ್ ಸೆಂಟರ್’ನ ವೈದ್ಯಕೀಯ ಸಿಬ್ಬಂದಿಗೆ ಮತ್ತು ಅವರ ಕಾಳಜಿಯುಕ್ತ ಚಿಕಿತ್ಸೆಗಾಗಿ ನಾವು ಧನ್ಯವಾದ ಅರ್ಪಿಸುತ್ತೇವೆ. ನಾವು ಅಮೆರಿಕದ ಒಬ್ಬ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ’ ಎಂದು ಪೊವೆಲ್ ಅವರ ಕುಟುಂಬ ಫೇಸ್‌ಬುಕ್ ಪೋಸ್ಟ್ ಪ್ರಕಟಿಸಿದೆ.

ಸೇನಾ ಜನರಲ್ ಆಗಿ, ಮಿಲಿಟರಿಯ ಜಂಟಿ ಮುಖ್ಯಸ್ಥರಾಗಿ ಅವರು ಕಾರ್ಯನಿರ್ವಹಿಸಿದ್ದರು . 1991ರ ಕೊಲ್ಲಿ ಯುದ್ಧದ ಸಮಯದಲ್ಲಿ ಅಮೆರಿಕ ನೇತೃತ್ವದ ಭದ್ರತಾ ಪಡೆಗಳು ಕುವೈತ್ ನಿಂದ ಇರಾಕಿ ಸೈನ್ಯವನ್ನು ಹೊರದಬ್ಬಿತ್ತು. ಈ ಯುದ್ಧದ ವೀರ ಎಂದು ಪೊವೆಲ್ ಅವರನ್ನು ಕರೆಯಲಾಗುತ್ತದೆ.

ಪೊವೆಲ್ ಅವರು ನಂತರ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ಅವರ ಅಡಿಯಲ್ಲಿ ಅಮೆರಿಕದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಈ ಹುದ್ದೆಗೇರಿದ ಅಮೆರಿಕದ ಮೊದಲ ಕಪ್ಪವರ್ಣೀಯ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದರು. ಇದಕ್ಕೂ ಮೊದಲು ಅವರು ಅಮೆರಿಕದ ಅಧ್ಯಕ್ಷೀಯ ಹುದ್ದೆಗೆ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳೂ ಹರಿದಾಡುತ್ತಿದ್ದವು.

ಕಾಲಿನ್ ಪೊವೆಲ್ ಅವರ ಪೋಷಕರು ಜಮೈಕಾ ಮೂಲದವರಾಗಿದ್ದರು.

'ಜನರಲ್ ಪೊವೆಲ್ ಅವರು ಅಮೆರಿಕದ ಹೀರೋ, ಅಮೆರಿಕದ ಒಂದು ನಿದರ್ಶನ, ಅಮೆರಿಕದ ದಂತ ಕತೆ‘ ಹೀಗೆಂದು 2000ರಲ್ಲಿ ಪೊವೆಲ್ ಅಮೆರಿಕದ ಕಾರ್ಯದರ್ಶಿಯಾಗಿ ನಾಮನಿರ್ದೇಶನಗೊಂಡ ಸಮಯದಲ್ಲಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರು ಉದ್ಘರಿಸಿದ್ದರು.

ಅಮೆರಿಕ ಸರ್ಕಾರದ ಮೊದಲ ಕಪ್ಪುವರ್ಣೀಯ ಕಾರ್ಯದರ್ಶಿ, ಮಿಲಿಟರಿಯ ಉನ್ನತ ಅಧಿಕಾರಿಯಾಗಿದ್ದ ಕಾಲಿನ್ ಪೊವೆಲ್ (84) ಕೋವಿಡ್ ಸಂಬಂಧಿತ ಸಮಸ್ಯೆಗಳ ಹಿನ್ನೆಲೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.