×
ADVERTISEMENT
ಈ ಕ್ಷಣ :
ADVERTISEMENT

ಭಾರತ ಚೀನಾ ನಡುವಿನ 13ನೇ ಸುತ್ತಿನ ಮಾತುಕತೆಗಳು ವಿಫಲ

Published : 11 ಅಕ್ಟೋಬರ್ 2021, 4:53 IST
ಫಾಲೋ ಮಾಡಿ
Comments

ಲಡಾಖ್‌: ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ಭವಿಸಿರುವ ಸಮಸ್ಯೆಗಳಿಗೆ 13ನೇ ಸುತ್ತಿನ ಮಿಲಿಟರಿ ಮಾತುಕತೆಗಳು ಪರಿಹಾರ ನೀಡಿಲ್ಲ ಎಂದು ಭಾರತೀಯ ಸೇನೆ ಸೋಮವಾರ ತಿಳಿಸಿದೆ.

ಗಾಲ್ವಾನ್‌ ಕಣಿವೆಯಲ್ಲಿ ಉಂಟಾಗಿದ್ದ ಸಂಘರ್ಷದ ನಂತರ ಎರಡೂ ದೇಶಗಳ ನಡುವೆ ಆರಂಭವಾಗಿರುವ ಮಿಲಿಟರಿ ಮಾತುಕತೆಗಳ 13ನೇ ಸುತ್ತಿನ ಸಭೆ ಭಾನುವಾರ ನಡೆದಿತ್ತು. ಪೂರ್ವ ಲಡಾಖ್‌ನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಚೀನಾದ ಬದಿಯ ಚುಶುಲ್-ಮೊಲ್ಡೊ ಗಡಿಯಲ್ಲಿ ಈ ಮಾತುಕತೆ ನಡೆಯಿತು. ಸುಮಾರು ಎಂಟೂವರೆ ಗಂಟೆಗಳ ಕಾಲ ನಡೆದ ಸಭೆ ಅಂತಿಮವಾಗಿ ವಿಫಲವಾಗಿದೆ.

‘ಸಂಘರ್ಷ ಪೀಡಿತ ಇತರ ಪ್ರದೇಶಗಳ ಸಮಸ್ಯೆ ಪರಿಹರಿಸಲು ಭಾರತದ ಕಡೆಯಿಂದ ರಚನಾತ್ಮಕ ಸಲಹೆಗಳನ್ನು ನೀಡಲಾಯಿತು. ಆದರೆ ಚೀನಾ ಇದಕ್ಕೆ ಒಪ್ಪಿಲ್ಲ. ಜೊತೆಗೆ ಆಶಾದಾಯಕ ಪ್ರಸ್ತಾಪಗಳನ್ನು ಅದು ಮಾಡಿಲ್ಲ,’ ಎಂದು ಭಾರತೀಯ ಸೇನೆ ಹೇಳಿದೆ.

‘ನೈಜ ನಿಯಂತ್ರಣ ರೇಖೆಯ ಗುಂಟಾ ಯಥಾಸ್ಥಿತಿ ಬದಲಿಸಲು ಚೀನಾದ ಕಡೆಯಿಂದ ಏಕಪಕ್ಷೀಯ ಪ್ರಯತ್ನಗಳು ನಡೆದಿವೆ. ಇದು ದ್ವಿಪಕ್ಷೀಯ ಒಪ್ಪಂದಗಳ ಉಲ್ಲಂಘನೆಯಿಂದಾಗಿದೆ. ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಶಾಂತಿಯನ್ನು ಪುನಃಸ್ಥಾಪಿಸಲು ಚೀನಾ ಇನ್ನಿತರ ಪ್ರದೇಶಗಳಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ" ಎಂದು ಸೇನೆಯು ಚೀನಾಕ್ಕೆ ಮನವರಿಕೆ ಮಾಡಿಕೊಟ್ಟಿತು.

‘ಉಳಿದ ಸಮಸ್ಯೆಗಳ ಪರಿಹಾರವು ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿಗೆ ಕಾರಣವಾಗುತ್ತದೆ,‘ ಎಂದು ಭಾರತದ ಸೇನಾ ಅಧಿಕಾರಿಗಳು ಒತ್ತಿಹೇಳಿದರು.

‘ಉಳಿದ ಪ್ರದೇಶಗಳ ಕುರಿತಾದ ವಿವಾದ ಪರಿಹರಿಸಲು ರಚನಾತ್ಮಕ ಸಲಹೆಗಳನ್ನು ಭಾರತ ನೀಡಿತು. ಆದರೆ ಚೀನಾ ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಯಾವುದೇ ಆಶಾಯದಾಯಕ ಪ್ರಸ್ತಾಪಗಳನ್ನು ನೀಡಲಿಲ್ಲ. ಹೀಗಾಗಿ, ಸದ್ಯ ಪರಸ್ಪರ ಸಂವನ, ಗಡಿ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಎರಡೂ ಕಡೆಗಳಲ್ಲೂ ಒಪ್ಪಲಾಗಿದೆ,’ ಎಂದು ಸೇನೆ ತಿಳಿಸಿದೆ.

’ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ದೃಷ್ಟಿಕೋನವನ್ನು ಚೀನಾದ ಕಡೆಯವರು ಪರಿಗಣಿಸುತ್ತಾರೆ ಎಂಬುದು ನಮ್ಮ ನಿರೀಕ್ಷೆಯಾಗಿದೆ. ಅಲ್ಲದೇ, ದ್ವಿಪಕ್ಷೀಯ ಒಪ್ಪಂದಗಳು ಹಾಗೂ ಶಿಷ್ಟಾಚಾರವನ್ನು ಸಂಪೂರ್ಣವಾಗಿ ಅನುಸರಿಸಿ, ಉಳಿದ ಸಮಸ್ಯೆಗಳ ಪರಿಹಾರತ್ತ ಕೆಲಸ ಮಾಡುತ್ತಾರೆ ಎಂದು ನಾವು ಎದುರುನೋಡುತ್ತಿದ್ದೇವೆ,‘ ಎಂದು ಭಾರತ ಸೇನೆ ಆಶಾ ಭಾವ ವ್ಯಕ್ತಪಡಿಸಿದೆ.

ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ಭವಿಸಿರುವ ಸಮಸ್ಯೆಗಳಿಗೆ 13ನೇ ಸುತ್ತಿನ ಮಿಲಿಟರಿ ಮಾತುಕತೆಗಳು ಪರಿಹಾರ ನೀಡಿಲ್ಲ ಎಂದು ಭಾರತೀಯ ಸೇನೆ ಸೋಮವಾರ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT