×
ADVERTISEMENT
ಈ ಕ್ಷಣ :
ADVERTISEMENT

Covid-19 Update Kerala: 24 ಗಂಟೆಗಳಲ್ಲಿ 46,387 ಹೊಸ ಪ್ರಕರಣಗಳು

Last Updated 20 ಜನವರಿ 2022, 16:22 IST
Comments
ಅಕ್ಷರ ಗಾತ್ರ

ತಿರುವನಂತಪುರ: ಕೊರೊನಾ ವೈರಸ್‌ ಸಾಂಕ್ರಾಮಿಕ ಶುರುವಾದಾಗಿನಿಂದ ಕೇರಳದಲ್ಲಿ 24 ಗಂಟೆಗಳ ಅಂತರದಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ ಅತಿ ಹೆಚ್ಚು ಪ್ರಕರಣಗಳು ಗುರುವಾರ ವರದಿಯಾಗಿವೆ. ಕೋವಿಡ್‌ ದೃಢ ಪಟ್ಟ 46,387 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 54.87 ಲಕ್ಷ ದಾಟಿದೆ.

24 ಗಂಟೆಗಳಲ್ಲಿ 15,388 ಮಂದಿ ಗುಣಮುಖರಾಗಿದ್ದಾರೆ ಹಾಗೂ 1,15,357 ಮಾದರಿಗಳಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ನಿತ್ಯ ಕೋವಿಡ್‌ ದೃಢ ಪ್ರಕರಣಗಳ ಪ್ರಮಾಣ ಶೇಕಡ 40.2ಕ್ಕೆ ಹೆಚ್ಚಳವಾಗಿದೆ.

62 ಪ್ರಕರಣಗಳಲ್ಲಿ ಓಮೈಕ್ರಾನ್‌ ದೃಢಪಟ್ಟಿದ್ದು, ಒಟ್ಟು ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ 707 ತಲುಪಿದೆ.

ಸೋಂಕಿತರ ಪೈಕಿ 341 ಮಂದಿ (ಕೇಂದ್ರದ ಹೊಸ ಮಾರ್ಗಸೂಚಿಗಳು ಹಾಗೂ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಪ್ರಕಾರ ಬಂದ ಮನವಿಗಳ ಆಧಾರದಲ್ಲಿ ಘೋಷಿಸಲಾಗಿರುವ 309 ಜನರ ಸಾವು ಸೇರಿ) ಸಾವಿಗೀಡಾಗಿದ್ದು, ಒಟ್ಟು ಸಾವಿನ ಸಂಖ್ಯೆ 51,501ಕ್ಕೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 1,99,041 ಸಕ್ರಿಯ ಪ್ರಕರಣಗಳಿವೆ ಹಾಗೂ ಸೋಂಕಿತರ ಪೈಕಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಪ್ರಮಾಣ ಶೇಕಡ 3ರಷ್ಟಿದೆ.

ತಿರುವನಂತಪುರದಲ್ಲಿ ಅತಿ ಹೆಚ್ಚು 9,720 ಹೊಸ ಪ್ರಕರಣಗಳು ಹಾಗೂ ಎರ್ನಾಕುಲಂನಲ್ಲಿ 9,605 ಪ್ರಕರಣಗಳು ದಾಖಲಾಗಿವೆ.

ಕೇರಳ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, 2021ರ ಮೇ 12ರಂದು 43,529 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದವು.

ತಿರುವನಂತಪುರ: ಕೊರೊನಾ ವೈರಸ್‌ ಸಾಂಕ್ರಾಮಿಕ ಶುರುವಾದಾಗಿನಿಂದ ಕೇರಳದಲ್ಲಿ 24 ಗಂಟೆಗಳ ಅಂತರದಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ ಅತಿ ಹೆಚ್ಚು ಪ್ರಕರಣಗಳು ಗುರುವಾರ ವರದಿಯಾಗಿವೆ. ಕೋವಿಡ್‌ ದೃಢ ಪಟ್ಟ 46,387 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 54.87 ಲಕ್ಷ ದಾಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT