×
ADVERTISEMENT
ಈ ಕ್ಷಣ :
ADVERTISEMENT

ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿ ಚೀನಾ ವಿರುದ್ಧ ಕಠಿಣ ಕ್ರಮಕ್ಕೆ ಶಿವಸೇನಾ ಆಗ್ರಹ

Published : 13 ಅಕ್ಟೋಬರ್ 2021, 7:05 IST
ಫಾಲೋ ಮಾಡಿ
Comments

ಮುಂಬೈ: ಉದ್ವಿಗ್ನತೆ ತಲೆದೋರುತ್ತಿರುವ ಪೂರ್ವ ಲಡಾಖ್‌ನಲ್ಲಿರುವ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದರೆ, ಚೀನಾ ಮತ್ತು ಪಾಕಿಸ್ತಾನ ಎರಡೂ ಒಟ್ಟಾಗಿ ಭಾರತದ ಅಸ್ತಿತ್ವಕ್ಕೆ ಅಪಾಯ ತಂದೊಡ್ಡುತ್ತವೆ ಎಂದು ಶಿವಸೇನಾ ಎಚ್ಚರಿಸಿದೆ. 

ಬಿಜೆಪಿಯ ಹೆಸರು ಉಲ್ಲೇಖಿಸದೇ ತನ್ನ ಮುಖವಾಣಿ ’ಸಾಮ್ನಾ’ದಲ್ಲಿ ಜರೆದಿರುವ ಶಿವಸೇನಾ, ‘ಪೊಲಿಟಿಕಲ್‌ ಈಸ್ಟ್‌ ಇಂಡಿಯಾ ಕಂಪನಿ’ ಎಂದು ಕುಟುಕಿದೆ. ಅತ್ತ ಚೀನಾವು ತನ್ನ ನೆಲೆ ವಿಸ್ತರಿಸಲು ಮುಂದಾಗುತ್ತಿದ್ದರೆ ಭಾರತ ಇನ್ನೂ ಮಾತುಕತೆಯಲ್ಲೇ ನಿರತವಾಗಿದೆ ಎಂದು ಹೇಳಿದೆ. ಶಿವಸೇನಾ ಪಕ್ಷ ಚೀನಾವನ್ನು ’ಅಗ್ರಗಣ್ಯ ಸಾಮ್ರಾಜ್ಯ ಶಾಹಿ ರಾಷ್ಟ್ರ’ ಎಂದು ಕರೆದಿದೆ.  

ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಹಿಂದೂ ಹಾಗೂ ಸಿಖ್‌ ಧರ್ಮದವರ ಮೇಲೆ ನಡೆದ ದಾಳಿ ಕುರಿತು ಸಂಪಾದಕೀಯದಲ್ಲಿ ಪ್ರಸ್ತಾಪಿಸಿರುವ ಶಿವಸೇನಾ, ’ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರದಲ್ಲಿರುವಾಗಲೂ, ಕಣಿವೆ ರಾಜ್ಯದಿಂದ ಹಿಂದೂಗಳು ಪಲಾಯನ ಮಾಡುತ್ತಿದ್ದಾರೆ’ ಎಂದು ಉಲ್ಲೇಖಿಸಿದೆ.

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ, ಕಾಶ್ಮೀರದಲ್ಲಿ ಹಿಂಸಾತ್ಮಕ ಘಟನೆಗಳು ಹೆಚ್ಚಾಗಿವೆ ಎಂದು ಹೇಳಿದೆ. ಭಾರತ ಮತ್ತು ಚೀನಾದ ಸೇನೆಗಳ ನಡುವಿನ ನಿಲುವನ್ನು ಉಲ್ಲೇಖಿಸಿ, ಪರಿಸ್ಥಿತಿಯನ್ನು ಹರಡಲು 13 ಸುತ್ತಿನ ಮಾತುಕತೆಗಳು ನಡೆದಿವೆ, ಆದರೆ ಅದು ಯಶಸ್ಸು ಸಿಕ್ಕಿರುವುದು ಅಲ್ಪ ಮಾತ್ರ’ ಎಂದು ಅದು ಹೇಳಿದೆ.

ಉದ್ವಿಗ್ನತೆ ತಲೆದೋರುತ್ತಿರುವ ಪೂರ್ವ ಲಡಾಖ್‌ನಲ್ಲಿರುವ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ ಕೇಂದ್ರ ಸರ್ಕಾರ ಗಟ್ಟಿಯಾದ ಕ್ರಮಗಳನ್ನು ಕೈಗೊಳ್ಳದಿದ್ದರೆ, ಚೀನಾ ಮತ್ತು ಪಾಕಿಸ್ತಾನ ಎರಡೂ ಒಟ್ಟಾಗಿ ಭಾರತದ ಅಸ್ತಿತ್ವವಕ್ಕೆ ಅಪಾಯ ತಂದೊಡ್ಡುತ್ತವೆ ಎಂದು ಶಿವಸೇನಾ ಎಚ್ಚರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT