×
ADVERTISEMENT
ಈ ಕ್ಷಣ :
ADVERTISEMENT

ಆರ್ಥಿಕತೆ, ವಿದೇಶಾಂಗ ನೀತಿಯಲ್ಲಿ ಮೋದಿ ಸರ್ಕಾರ ವಿಫಲ: ಸುಬ್ರಮಣಿಯನ್‌ ಸ್ವಾಮಿ

Published : 15 ಅಕ್ಟೋಬರ್ 2021, 7:30 IST
ಫಾಲೋ ಮಾಡಿ
Comments

ಬೆಂಗಳೂರು: ರಾಷ್ಟ್ರದ ಆರ್ಥಿಕತೆ ಮತ್ತು ವಿದೇಶಾಂಗ ನೀತಿಯಲ್ಲಿ ಮೋದಿ ಸರ್ಕಾರ 'ವಿಕಾಸ' ತರುವಲ್ಲಿ ವಿಫಲವಾಗಿದೆ ಎಂಬುದು ಸಾಬೀತಾಗಿದೆ ಎಂದು ರಾಜ್ಯಸಭಾ ಸಂಸದ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.

ಲಡಾಖ್‌ನಲ್ಲಿ ಚೀನಾದ ಅತಿಕ್ರಮಣಕ್ಕೆ ಸಂಬಂಧಿಸಿಯೂ ಕೇಂದ್ರ ಸರ್ಕಾರವನ್ನು ಸ್ವಾಮಿ ಟೀಕಿಸಿದ್ದಾರೆ.  'ಲಡಾಖ್‌ನಲ್ಲಿನ ನಮ್ಮ ರಕ್ಷಣಾ ನೀತಿಯನ್ನು ಗಮನಿಸಿದರೆ ಅದು, ಹಿಮಾಲಯದಂಥ ವೈಫಲ್ಯದಂತೆ ಕಾಣುತ್ತಿದೆ' ಎಂದಿದ್ದಾರೆ.

'ವಿಫಲಗೊಂಡಿರುವ ನೀತಿಗಳನ್ನು ರೀಸೆಟ್‌ (ಸರಿಪಡಿಸಲು) ಮಾಡಲು, ಸಹಾಯಕ್ಕೆ ನಾನು ಸಿದ್ಧನಿದ್ದೇನೆ,’ ಎಂದು ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.  ಆದರೆ, ಅದಕ್ಕೆ ಸೊಕ್ಕು ಅಡ್ಡಿಯಾಗಿದೆ ಎಂದು ಅವರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. 

'ರೀಸೆಟ್‌: ರಿಗೈನಿಂಗ್‌ ಇಂಡಿಯಾಸ್‌ ಎಕಾನಮಿಕ್‌ ಲೆಗಸಿ' ಇದು 2019ರಲ್ಲಿ ಬಿಡುಗಡೆಯಾದ ಸುಬ್ರಮಣಿಯನ್‌ ಸ್ವಾಮಿ ಅವರ ಪುಸ್ತಕ. ಭಾರತದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಈ ಕೃತಿಯಲ್ಲಿ ಸಲಹೆಗಳನ್ನು ನೀಡಿರುವುದಾಗಿ ಟ್ವಿಟರ್‌ನಲ್ಲಿ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.

‘ಸಾಮಾಜಿಕ ಜಾಲತಾಣಗಳಲ್ಲಿ ಸಲಹೆ ನೀಡುವುದು ಮಾತ್ರವಲ್ಲ, ಸರ್ಕಾರಕ್ಕೆ ನೇರವಾಗಿ ಸಲಹೆ ನೀಡುವುದು ಉತ್ತಮ’ ಎಂದು ಟ್ವಿಟರ್‌ ಬಳಕೆದಾರ ಕುಮಾರ್‌ ರಜ್‌ಪೂತ್‌ ಎಂಬುವವರು ಸುಬ್ರಮಣಿಯನ್‌ ಸ್ವಾಮಿ ಅವರಿಗೆ ಕಮೆಂಟ್‌ ಮೂಲಕ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ, '2014ರಿಂದ 2019ರ ವರೆಗೆ ಈ ಕೆಲಸವನ್ನು ಮಾಡಿದ್ದೇನೆ,’ ಎಂದು ತಿಳಿಸಿದ್ದಾರೆ.  

ಇದೇ ವೇಳೆ 'ಹಿಂದುಗಳ ರಕ್ಷಣೆಯನ್ನು ಸರ್ಕಾರ ಮಾಡುತ್ತದೆ' ಎಂಬ ಕಮೆಂಟ್‌ ಒಂದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿ, 'ಅಮಿತ್‌ ಶಾ ಅವರ ಕೃಪಾಕಟಾಕ್ಷದಿಂದ ಉತ್ತರಾಖಂಡದಲ್ಲಿ ನಡೆಯುತ್ತಿರುವ ಬಿಜೆಪಿ ಸರ್ಕಾರ 52 ಪ್ರಮುಖ ದೇವಸ್ಥಾನಗಳನ್ನು(ಬಹುತೇಕ ಶೇಕಡಾ 100ರಷ್ಟು) ಕೈಬಿಟ್ಟಿದೆ.  ಇದು ಹಿಂದುಗಳ ನೈತಿಕತೆಯನ್ನು ಕುಗ್ಗಿಸುವಂಥದ್ದು,‘ ಎಂದು ಅವರು ಕಿಡಿಕಾರಿದ್ದಾರೆ. 

ಉತ್ತರಾಖಂಡದ ‘ಚಾರ್ ಧಾಮ್ ದೇವಸ್ಥಾನ ಮಂಡಳಿ’ಯ ನಿಯಂತ್ರಣದಿಂದ 51 ದೇವಾಲಯಗಳ ನಿರ್ವಹಣೆಯನ್ನು ಕೈಬಿಡಲಾಗಿತ್ತು. ಉತ್ತರಾಖಂಡ ಸರ್ಕಾರದ ಈ ನಿರ್ಧಾರವು ಟೀಕೆಗೆ ಗುರಿಯಾಗಿತ್ತು. 

ರಾಷ್ಟ್ರದ ಆರ್ಥಿಕತೆ ಮತ್ತು ವಿದೇಶಾಂಗ ನೀತಿಯಲ್ಲಿ ಮೋದಿ ಸರ್ಕಾರ 'ವಿಕಾಸ'ಗೊಳ್ಳಲು ವಿಫಲವಾಗಿದೆ ಎಂಬುದೀಗ ಸಾಬೀತಾಗಿದೆ ಎಂದು ರಾಜ್ಯಸಭಾ ಸಂಸದ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT