×
ADVERTISEMENT
ಈ ಕ್ಷಣ :
ADVERTISEMENT

2– 18 ವರ್ಷದ ಮಕ್ಕಳಿಗೆ ಲಸಿಕೆ: ಅಂತಿಮ ಅನುಮತಿಗೆ ಕಾಯುತ್ತಿರುವ ಭಾರತ್ ಬಯೋಟೆಕ್

ಫಾಲೋ ಮಾಡಿ
Comments

ಹೈದರಾಬಾದ್: ಕೆಲವು ಷರತ್ತುಗಳೊಂದಿಗೆ 2 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲು ಕೋವಾಕ್ಸಿನ್‌ ಲಸಿಕೆಗೆ ವಿಷಯ ತಜ್ಞರ ಸಮಿತಿ (ಎಸ್‌ಇಸಿ)ಯ ಅನುಮೋದನೆ ಸಿಕ್ಕಿದ್ದು, ತನ್ನ ಲಸಿಕೆಯನ್ನು ಮಾರುಕಟ್ಟೆಗೆ ತರಲು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥ (ಸಿಡಿಎಸ್‌ಸಿಒ)ಯಿಂದ ಮತ್ತಷ್ಟು ನಿಯಂತ್ರಕ ಅನುಮೋದನೆಗಾಗಿ ಕಾಯುತ್ತಿರುವುದಾಗಿ ಭಾರತ್ ಬಯೋಟಿಕ್ ಸಂಸ್ಥೆ ಹೇಳಿದೆ.

ಭಾರತದ ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು ಕೆಲವು ಷರತ್ತುಗಳೊಂದಿಗೆ 2 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೋವಾಕ್ಸಿನ್‌ ಲಸಿಕೆ ತುರ್ತು ಬಳಕೆಗೆ ಶಿಫಾರಸು ಮಾಡಿದೆ.

‘ಇದು 2-18 ವಯಸ್ಸಿನವರಿಗೆ ನೀಡಲು ಅನುಮೋದನೆ ಪಡೆದ ಮೊದಲ ಕೋವಿಡ್ -19 ಲಸಿಕೆಯಾಗಿದೆ. ಅವರ ತ್ವರಿತ ಪರಿಶೀಲನಾ ಪ್ರಕ್ರಿಯೆಗಾಗಿ ಡಿಸಿಜಿಐ, ವಿಷಯ ತಜ್ಞರ ಸಮಿತಿ ಮತ್ತು ಸಿಡಿಎಸ್‌ಸಿಒಗೆ ಧನ್ಯವಾದ’ ಎಂದು ಭಾರತ್ ಬಯೋಟೆಕ್ ಹೇಳಿಕೆಯಲ್ಲಿ ತಿಳಿಸಿದೆ.

ನಾವು ಈಗ ಸಿಡಿಎಸ್‌ಸಿಒನಿಂದ ಮತ್ತಷ್ಟು ಅನುಮೋದನೆ ಪಡೆದು ಕೋವಾಕ್ಸಿನ್ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಕಾಯುತ್ತಿದ್ದೇವೆ ಎಂದು ಭಾರತ್ ಬಯೋಟೆಕ್ ಹೇಳಿಕೆಯಲ್ಲಿ ತಿಳಿಸಿದೆ.

2-18 ವರ್ಷ ವಯಸ್ಸಿನವರ ಮೇಲೆ ನಡೆಸಿದ ಕ್ಲಿನಿಕಲ್ ಪ್ರಯೋಗದ ಡೇಟಾವನ್ನು ಭಾರತ್ ಬಯೋಟೆಕ್ ಸಿಡಿಇಎಸ್‌ಸಿಒಗೆ ಸಲ್ಲಿಸಿತ್ತು. ಡೇಟಾವನ್ನು ಸಿಡಿಎಸ್‌ಸಿಒ ಮತ್ತು ಎಸ್‌ಇಸಿಯು ಸಂಪೂರ್ಣವಾಗಿ ಪರಿಶೀಲಿಸಿದ್ದು, ಸಕಾರಾತ್ಮಕ ಶಿಫಾರಸುಗಳನ್ನು ನೀಡಲಾಗಿದೆ ಎಂದು ಸಂಸ್ಥೆ ಹೇಳಿದೆ.

‘ವಿವರವಾದ ಚರ್ಚೆಯ ನಂತರ, ಕೆಲವು ಷರತ್ತುಗಳಿಗೆ ಒಳಪಟ್ಟು ತುರ್ತು ಸಂದರ್ಭಗಳಲ್ಲಿ 2 ರಿಂದ 18 ವರ್ಷ ವಯಸ್ಸಿನವರಿಗೆ ನಿರ್ಬಂಧಿತ ಬಳಕೆಗಾಗಿ ಲಸಿಕೆಗೆ ಮಾರುಕಟ್ಟೆ ಅನುಮೋದನೆಯನ್ನು ನೀಡಲು ಶಿಫಾರಸು ಮಾಡಲಾಗಿದೆ’ ಎಂದು ಎಸ್ಇಸಿ ಹೇಳಿವೆ. ಅಂತಿಮ ಅನುಮೋದನೆಗಾಗಿ ಶಿಫಾರಸುಗಳನ್ನು ಭಾರತೀಯ ಪ್ರಧಾನ ಔಷಧ ನಿಯಂತ್ರಕ(ಡಿಸಿಜಿಐ)ಕ್ಕೆ ರವಾನಿಸಲಾಗಿದೆ.

‘ಇದು 2-18 ವಯಸ್ಸಿನವರಿಗೆ ನೀಡಲು ಅನುಮೋದನೆ ಪಡೆದ ಮೊದಲ ಕೋವಿಡ್ -19 ಲಸಿಕೆಯಾಗಿದೆ. ಅವರ ತ್ವರಿತ ಪರಿಶೀಲನಾ ಪ್ರಕ್ರಿಯೆಗಾಗಿ ಡಿಸಿಜಿಐ, ವಿಷಯ ತಜ್ಞರ ಸಮಿತಿ ಮತ್ತು ಸಿಡಿಎಸ್‌ಸಿಒಗೆ ಧನ್ಯವಾದ’ ಎಂದು ಭಾರತ್ ಬಯೋಟೆಕ್ ಹೇಳಿಕೆಯಲ್ಲಿ ತಿಳಿಸಿದೆ. ‘ಇದು 2-18 ವಯಸ್ಸಿನವರಿಗೆ ನೀಡಲು ಅನುಮೋದನೆ ಪಡೆದ ಮೊದಲ ಕೋವಿಡ್ -19 ಲಸಿಕೆಯಾಗಿದೆ. ಅವರ ತ್ವರಿತ ಪರಿಶೀಲನಾ ಪ್ರಕ್ರಿಯೆಗಾಗಿ ಡಿಸಿಜಿಐ, ವಿಷಯ ತಜ್ಞರ ಸಮಿತಿ ಮತ್ತು ಸಿಡಿಎಸ್‌ಸಿಒಗೆ ಧನ್ಯವಾದ’ ಎಂದು ಭಾರತ್ ಬಯೋಟೆಕ್ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT