×
ADVERTISEMENT
ಈ ಕ್ಷಣ :
ADVERTISEMENT

ಫ್ಯಾಕ್ಟ್‌ ಚೆಕ್‌: ರಾಮ ಮಂದಿರ ಕುರಿತು ಅಖಿಲೇಶ್‌ ಯಾದವ್‌ ಟ್ವೀಟಿಸಿದ್ದು ನಿಜವೇ?

Last Updated 17 ಜನವರಿ 2022, 15:33 IST
Comments
ಅಕ್ಷರ ಗಾತ್ರ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ನಡುವೆ ಬಿರುಸಿನ ಪೈಪೋಟಿ ನಡೆಯುತ್ತಿರುವ ವೇಳೆಯೇ, ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಮಾಡಿದ್ದಾರೆ ಎನ್ನಲಾದ ಟ್ವೀಟ್‌ ಭಾರಿ ವೈರಲ್‌ ಆಗಿದೆ. ‘ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ರಾಮ ಮಂದಿರದ ಜಾಗದಲ್ಲಿ ಬಾಬರಿ ಮಸೀದಿ ಕಟ್ಟುತ್ತೇವೆ ಎಂದು ನಾವು ಮುಸ್ಲಿಂ ಸಹೋದರರಿಗೆ ಭರವಸೆ ನೀಡುತ್ತೇವೆ’ ಎಂದು ಅಖಿಲೇಶ್‌ ಟ್ವೀಟ್‌ ಮಾಡಿದ್ದಾರೆ ಎಂದು ಬಿಂಬಿಸಲಾಗಿದೆ. ಬಿಜೆಪಿ ಫಾರ್ ನ್ಯೂ ಇಂಡಿಯಾ ಸೇರಿ ಹಲವಾರು ಪೇಜ್‌ಗಳಲ್ಲಿ ಈ ಟ್ವೀಟ್‌ ಅತಿ ಹೆಚ್ಚು ಬಾರಿ ಶೇರ್‌ ಆಗಿದೆ. 

ಅಖಿಲೇಶ್‌ ಯಾದವ್‌ ಈ ಟ್ವೀಟ್‌ ಮಾಡಿಲ್ಲ ಎಂದು ಆಲ್ಟ್‌ ನ್ಯೂಸ್‌ ವೇದಿಕೆ ವರದಿ ಮಾಡಿದೆ. ಅಖಿಲೇಶ್‌ ಅವರ ಟ್ವಿಟರ್‌ ಟೈಮ್‌ಲೈನ್‌ನಲ್ಲಿ ಈ ಟ್ವೀಟ್‌ ಇಲ್ಲ. ಇದನ್ನು ಅಳಿಸಲಾಗಿದೆಯೇ ಎಂದು ತಿಳಿಯಲು ಆರ್‌ಖೈವ್‌ ವೆಬ್‌ಸೈಟ್‌ನಲ್ಲಿ ಹುಡುಕಾಡಲಾಯಿತು. ಅಲ್ಲಿ ಕೂಡಾ ಈ ಟ್ವೀಟ್‌ ಸಿಗಲಿಲ್ಲ. ಅಖಿಲೇಶ್‌ ಅವರು ಮಾಡಿದ್ದ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಅನ್ನು ತೆಗೆದುಕೊಂಡು ಅದನ್ನು ಎಡಿಟಿಂಗ್‌ ಮೂಲಕ ತಿರುಚಿರುವುದು ವೈರಲ್‌ ಆಗಿರುವ ಟ್ವೀಟ್‌ಅಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಆಲ್ಟ್‌ ನ್ಯೂಸ್‌ ಹೇಳಿದೆ.   

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ನಡುವೆ ಬಿರುಸಿನ ಪೈಪೋಟಿ ನಡೆಯುತ್ತಿರುವ ವೇಳೆಯೇ, ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಮಾಡಿದ್ದಾರೆ ಎನ್ನಲಾದ ಟ್ವೀಟ್‌ ಭಾರಿ ವೈರಲ್‌ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT