×
ADVERTISEMENT
ಈ ಕ್ಷಣ :
ADVERTISEMENT

ಕೋವಿಡ್ ಕಡಿಮೆ ಆಗುತ್ತಿದೆ ಎಂದು ಕೈ ತೊಳೆಯುವ ಅಭ್ಯಾಸ ಬಿಡಬೇಡಿ!

ಫಾಲೋ ಮಾಡಿ
Comments

ಸ್ವಚ್ಛ ಕೈಗಳು ಆರೋಗ್ಯಕರ ಜೀವನ ಹೊಂದಿರುವ ಸಂಕೇತ. ಅ 15 ವಿಶ್ವ ಕೈ ತೊಳೆಯುವ ಜಾಗೃತಿ ದಿನ. ಕೈ ತೊಳೆಯುವುದರಲ್ಲಿ ವಿಶೇಷವೇನು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಆದರೆ, ಈ ಚಿಕ್ಕ ವಿಷಯವೇ ದೊಡ್ಡ ಆರೋಗ್ಯ ಸಮಸ್ಯೆ ಉಂಟು ಮಾಡಬಹುದು. ಹೀಗಾಗಿ ಸ್ವಚ್ಛವಾಗಿ ಕೈ ತೊಳೆಯುವ ಬಗೆ ಹಾಗೂ ಕೈ ತೊಳೆಯದೇ ಹೋದರೆ ಆಗುವ ಆರೋಗ್ಯ ಸಮಸ್ಯೆ ಬಗ್ಗೆ ಇಲ್ಲಿವೆ ಮಾಹಿತಿ.

ಕೋವಿಡ್‌ ಬಳಿಕ ಕೈ ತೊಳೆಯುವಿಕೆಯ ಪ್ರಾಮುಖ್ಯತೆಯು ಹತ್ತು ಪಟ್ಟು ಹೆಚ್ಚಾಗಿದೆ.‌ ನಾವು ಇದನ್ನು ದಿನನಿತ್ಯದ ದಿನಚರಿಯ ಒಂದು ಭಾಗವನ್ನಾಗಿಸಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೋವಿಡ್ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೈ ತೊಳೆಯುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಹೀಗಾಗಿ ಕೈ ತೊಳೆಯುವಿಕೆಯ ಮಹತ್ವದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿವೆ. 

ಯಾವಾಗ ನಿಮ್ಮ ಕೈ ತೊಳೆಯಬೇಕು?
ಕೆಲವರಿಗೆ ಊಟದ ಮಾಡುವ ಮುನ್ನ ಹಾಗೂ ಬಳಿಕ ಕೈ ತೊಳೆಯುವುದು ಬಿಟ್ಟರೆ, ಮತ್ತಾವ ಸಮಯದಲ್ಲಿ ಕೈತೊಳೆಯಬಹುದು ಎಂಬುದರ ಬಗ್ಗೆ ಅಷ್ಟಾಗಿ ಜಾಗೃತಿ ಇರುವುದಿಲ್ಲ. ಸಾರ್ವಜನಿಕ ಸ್ಥಳದಲ್ಲಿರುವ ವಸ್ತುಗಳನ್ನು ಮುಟ್ಟಿದಾಗ, ಆಗಾಗ್ಗೆ ಕಣ್ಣು, ಮೂಗು, ಬಾಯಿ ಸ್ಪರ್ಶಿಸುತ್ತಿದ್ದರೆ, ಅಡುಗೆ ಮಾಡಿದ ಬಳಿಕ, ಅಡುಗೆ ಮಾಡುವ ಮುನ್ನ, ಸ್ನೇಹಿತರನ್ನು ಭೇಟಿ ಮಾಡಿ, ಶೇಕ್‌ಹ್ಯಾಂಡ್ ಕೊಟ್ಟ ಬಳಿಕ ಕೈ ತೊಳೆಯುತ್ತಿರಬೇಕು. ಇಲ್ಲವಾದರೆ, ವೈರಾಣು ಇರುವ ಕೈಗಳಿಂದ ಮೂಗ, ಬಾಯಿ ಮುಟ್ಟಿಕೊಳ್ಳುವುದರಿಂದ ಶೀತದಿಂದ ಹಿಡಿದು ಮೆನಿಂಜೈಟಿಸ್, ಬ್ರಾಂಕಿಯೊಲೈಟಿಸ್, ಫ್ಲೂ, ಹೆಪಟೈಟಿಸ್ ಎ ಮತ್ತು ವಿವಿಧ ರೀತಿಯ ಅತಿಸಾರದಂತಹ ತೀವ್ರತರವಾದ ಸೋಂಕು ಹರಡಬಹುದು. ಜೊತೆಗೆ ಇತರರಿಗೂ ಈ ವೈರಾಣು ಹರಡಿಸಬಹುದು.

ಇದನ್ನು ನೆನಪಿಡಿ
* ಆಹಾರ ತಯಾರಿಕೆ / ಬಳಕೆ
* ಅನಾರೋಗ್ಯದ ವ್ಯಕ್ತಿಯನ್ನು ನೋಡಿದ ಬಳಿಕ, ಯಾವುದಾದರು ಗಾಯಗಳಿಗೆ ಚಿಕಿತ್ಸೆ ನೀಡಿದ ಬಳಿಕ 
* ಕಾಂಟ್ಯಾಕ್ಟ್ ಲೆನ್ಸ್ ಧರಿಸುವುದು ಅಥವಾ ತೆಗೆಯುವುದು
* ಶೌಚಾಲಯ ಬಳಸುವುದು
* ಸೀನುವಿಕೆ, ಕೆಮ್ಮು ಇತ್ಯಾದಿ.

ಕೈ ತೊಳೆಯುವ ಮಹತ್ವವೇನು?
* ಪ್ರತಿ ವರ್ಷ ಕೈ ನೈರ್ಮಲ್ಯದ ಕೊರತೆಯಿಂದಾಗಿ ಉಂಟಾಗುವ ಕಾಯಿಲೆಯಿಂದ ಪ್ರಪಂಚದಾದ್ಯಂತ 443 ಮಿಲಿಯನ್ ಶಾಲಾ ದಿನಗಳನ್ನು ಮಕ್ಕಳು ತಪ್ಪಿಸಿಕೊಳ್ಳುತ್ತಿದ್ದಾರೆ.

* ರಾಷ್ಟ್ರೀಯ ಆರೋಗ್ಯ ಮಿಷನ್ ಪ್ರಕಾರ, ಭಾರತದಲ್ಲಿ ಸರಿಸುಮಾರು ಒಂದು ಲಕ್ಷ ಮಕ್ಕಳು ಅತಿಸಾರದಿಂದ ಸಾಯುತ್ತಿದ್ದಾರೆ. ಕೈಗಳನ್ನು ತೊಳೆಯುವುದರಿಂದ ಶೇ 40 ರಷ್ಟು ಸಾಂಕ್ರಮಿಕ ಕಾಯಿಲೆಗಳನ್ನು ತಡೆಯಬಹುದು.

* ಕೈ ಸ್ವಚ್ಛತೆಯಿಂದ ಶೇ 57 ರಷ್ಟು ಜಠರ ಕರುಳಿನ ಸಮಸ್ಯೆಯನ್ನು ತಡೆಯಬಹುದು.

* ಕೈ ತೊಳೆಯುವುದರಿಂದ ಉಸಿರಾಟದ ಕಾಯಿಲೆಗಳು ಮತ್ತು ಸೋಂಕುಗಳನ್ನು ಶೇ 16-21%ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಎಷ್ಟು ಸಮಯ ಕೈ ತೊಳೆಯಬೇಕು?
ಕೈಗಳ ಸ್ವಚ್ಛತೆಗೆ ಎಷ್ಟು ಸಮಯ ಕೈ ತೊಳೆಯಬೇಕು  ಎಂಬುದು ಎಲ್ಲರ ಪ್ರಶ್ನೆ. ಕನಿಷ್ಟ 20 ಸೆಕೆಂಡುಗಳ ಕಾಲ ತಮ್ಮ ಕೈಗಳನ್ನು ಸಾಬೂನಿನ ಮೂಲಕ ಕೈ ತೊಳೆಯುವುದು ಉತ್ತಮ.

ಕೈಗಳ ಹಿಂಭಾಗ, ಮಣಿಕಟ್ಟುಗಳು, ನಿಮ್ಮ ಬೆರಳುಗಳ ನಡುವೆ ಮತ್ತು ನಿಮ್ಮ ಉಗುರುಗಳ ಕೆಳಗೆ ಸೋಪಿನಿಂದ ಉಜ್ಜಿ ತೊಳೆಯುವುದು ಸರಿಯಾದ ಮಾರ್ಗ. 

ಹ್ಯಾಂಡ್ ಸ್ಯಾನಿಟೈಜರ್‌ಗಿಂತ  ಸೋಪು ಉತ್ತಮ: ಕೋವಿಡ್ ಬಳಿಕ ಎಲ್ಲರೂ ಸ್ಯಾನಿಟೈಜರ್‌ ಬಳಕೆ ಮಾಡುತ್ತಿದ್ದಾರೆ. ಇದು ವೈರಸ್‌ಗಳ ವಿರುದ್ಧ ಹೋರಾಡಬಹುದು. ಆದರೆ, ಪ್ರತಿ ಸಾರಿ ಅದರಲ್ಲಿಯೇ ಕೈ ಸ್ವಚ್ಛ ಮಾಡಿಕೊಳ್ಳುವ ಬದಲು ಸೋಪು ಹಾಕಿ ನೀರಿನಿಂದ ತೊಳೆಯುವುದು ಉತ್ತಮ ಅಭ್ಯಾಸ.

-

ಲೇಖಕ: ಡಾ. ಆದಿತ್ಯ ಎಸ್ ಚೌತಿ, ಹಿರಿಯ ಸಲಹೆಗಾರ ಆಂತರಿಕ ಔಷಧ, ಫೋರ್ಟಿಸ್ ಆಸ್ಪತ್ರೆ,

ಸ್ವಚ್ಛ ಕೈಗಳು ಆರೋಗ್ಯಕರ ಜೀವನ ಹೊಂದಿರುವ ಸಂಕೇತ. ಅ.15 ವಿಶ್ವ ಕೈ ತೊಳೆಯುವ ಜಾಗೃತಿ ದಿನ. ಕೈ ತೊಳೆಯುವುದರಲ್ಲಿ ವಿಶೇಷವೇನು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಆದರೆ, ಈ ಚಿಕ್ಕ ವಿಷಯವೇ ದೊಡ್ಡ ಆರೋಗ್ಯ ಸಮಸ್ಯೆ ಉಂಟು ಮಾಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT