ಚಯಾಪಚಯ ಕ್ರಿಯೆ ಮನುಷ್ಯನ ದೇಹಕ್ಕೆ ಬಹಳ ಮುಖ್ಯ. ಸೇವಿಸಿದ ಆಹಾರ ಹಾಗೂ ನೀರು ಸಮ ಪ್ರಮಾಣದಲ್ಲಿ ಜೀರ್ಣವಾದರೆ ದೈಹಿಕವಾಗಿ ಮನುಷ್ಯ ಆರೋಗ್ಯವಂತನಾಗಿರುತ್ತಾನೆ. ಚಯಾಪಚಯ ಕ್ರಿಯೆಯು ಮನುಷ್ಯ ಸೇವಿಸುವ ನೀರು ಹಾಗೂ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಇದು ನಮ್ಮ ದೇಹದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯೂ ಹೌದು.

ಚಯಾಪಚಯ ದರವು ನಮ್ಮ ದೇಹವು ಸುಡುವ ಕ್ಯಾಲೊರಿಗಳ ಸಂಖ್ಯೆಯನ್ನು ನಿರ್ಧರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ, ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್‌ಗಳು ಮತ್ತು ರಕ್ತದೊತ್ತಡ ಮುಂತಾದ ಎಲ್ಲವನ್ನೂ ಸಮತೋಲನದಲ್ಲಿರಿಸುತ್ತದೆ. ಚಯಾಪಚಯ ದರ ಹೆಚ್ಚಿದ್ದಷ್ಟೂ ದೇಹದಲ್ಲಿ ಕ್ಯಾಲೊರಿ ಸಂಗ್ರಹ ಕಡಿಮೆಯಾಗುತ್ತದೆ. ದೇಹದಲ್ಲಿ ಚಯಾಪಚಯ ವೇಗ ಹೆಚ್ಚಿಸಲು ಈ ಕೆಳಗಿನ 5 ಮಾರ್ಗಗಳನ್ನು ಅನುಸರಿಸಬಹುದು. ಆ ಮೂಲಕ ತೂಕ ಇಳಿಸಲು ಸಾಧ್ಯ.

ಹೆಚ್ಚು ಹೆಚ್ಚು ಪ್ರೊಟೀನ್ ಹಾಗೂ ನಾರಿನಾಂಶ ಸೇವಿಸಿ: ಪ್ರೊಟೀನ್ ಸ್ನಾಯುಗಳಿಗೆ ಬಲ ನೀಡುತ್ತದೆ. ನಾರಿನಾಂಶ ಹೆಚ್ಚು ಸೇವಿಸಿದಷ್ಟೂ ಹಸಿವು ಕಡಿಮೆಯಾಗುತ್ತದೆ. ದೈನಂದಿನ ಆಹಾರಕ್ರಮದಲ್ಲಿ ಈ ಎರಡು ಅಂಶಗಳನ್ನು ಹೆಚ್ಚು ಸೇರಿಸಿಕೊಳ್ಳುವುದರಿಂದ ಚಯಾಪಚಯ ಕ್ರಿಯೆ ಹೆಚ್ಚುವಂತೆ ಮಾಡಿ ವೇಗವಾಗಿ ತೂಕ ಇಳಿಸಬಹುದು.

ನೀರು ಕುಡಿಯುವುದು: ನಿಮಗೆ ತೂಕ ಇಳಿಸುವ ಮನಸ್ಸಾಗಿದ್ದರೆ ದಿನದಲ್ಲಿ ಕನಿಷ್ಠ 8 ಗ್ಲಾಸ್ ನೀರು ಕುಡಿಯಬೇಕು. ನೀರು ಹೆಚ್ಚು ಹೆಚ್ಚು ಕುಡಿದಷ್ಟೂ ದೇಹದಲ್ಲಿ ತೇವಾಂಶ ಹೆಚ್ಚುತ್ತದೆ. ನೀರಿಲ್ಲದೆ ದೇಹದ ಭಾಗಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ನೀರಿನೊಂದಿಗೆ ತರಕಾರಿ ರಸ, ನಿಂಬೆರಸ, ಇತರ ಹಣ್ಣಿನ ರಸ ಹಾಗೂ ಎಳನೀರಿನ ಸೇವನೆ ಉತ್ತಮ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಸೇರದಿದ್ದರೆ ಚಯಾಪಚಯ ಕ್ರಿಯೆಗೂ ತೊಂದರೆಯಾಗುತ್ತದೆ.

ದೈಹಿಕ ಚಟುವಟಿಕೆ: ಲಾಕ್‌ಡೌನ್ ಹಾಗೂ ಮನೆಯಿಂದಲೇ ಕಚೇರಿ ಕೆಲಸದ ಕಾರಣದಿಂದ ನಾವು ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕುಳಿತಿರುತ್ತೇವೆ. ಈ ನಮ್ಮ ಚಟುವಟಿಕೆಯಲ್ಲಿ ಆದ ಬದಲಾವಣೆಯೂ ದೇಹಾರೋಗ್ಯದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುವಂತೆ ಮಾಡಿದೆ. ಹಾಗಾಗಿ ದೈಹಿಕ ಚಟುವಟಿಕೆ ಅವಶ್ಯ. ದೈಹಿಕ ಚಟುವಟಿಕೆಯು ಚಯಾಪಚಯ ಕ್ರಿಯೆಗೂ ಉತ್ತಮ. ಇದು ಹೃದ್ರೋಗ, ಅಧಿಕ ತೂಕ ಹಾಗೂ ಬೊಜ್ಜು ಸಮಸ್ಯೆ ಇರುವವರಿಗೂ ಉತ್ತಮ.

ಉತ್ತಮ ನಿದ್ದೆ: ಆರೋಗ್ಯಕ್ಕೆ ಉತ್ತಮ ನಿದ್ದೆ ಬಹಳ ಮುಖ್ಯ. ದಿನದಲ್ಲಿ ಕನಿಷ್ಠ 7 ಗಂಟೆಗಳ ಕಾಲ ನಿದ್ದೆ ಮಾಡಬೇಕು. ಇದರಿಂದ ಅನೇಕ ದೈಹಿಕ ಸಮಸ್ಯೆಗಳನ್ನು ತಡೆಗಟ್ಟಬಹುದು. ಹಾರ್ಟ್ ಆಟ್ಯಾಕ್, ಮಧುಮೇಹ ಹಾಗೂ ಖಿನ್ನತೆಯ ನಿವಾರಣೆಗೂ ನಿದ್ದೆ ಸಹಕಾರಿ.

ಚಯಾಪಚಯ ದರ ಹೆಚ್ಚಿದ್ದಷ್ಟೂ ದೇಹದಲ್ಲಿ ಕ್ಯಾಲೊರಿ ಸಂಗ್ರಹ ಕಡಿಮೆಯಾಗುತ್ತದೆ. ದೇಹದಲ್ಲಿ ಚಯಾಪಚಯ ವೇಗ ಹೆಚ್ಚಿಸಲು ಈ ಕೆಳಗಿನ 5 ಮಾರ್ಗಗಳನ್ನು ಅನುಸರಿಸಬಹುದು. ಆ ಮೂಲಕ ತೂಕ ಇಳಿಸಲು ಸಾಧ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.