ಬೆಂಗಳೂರು: ಪರಿಸರ ಮಾಲಿನ್ಯ ತಡೆಗೆ ಮತ್ತು ತೈಲ ಆಮದು ವೆಚ್ಚದ ಹೊರೆ ತಗ್ಗಿಸಲು ಕೇಂದ್ರ ಸರ್ಕಾರವು ವಿದ್ಯುತ್ ಚಾಲಿತ ವಾಹನಗಳ (ಇ.ವಿ.) ತಯಾರಿಗೆ ಮತ್ತು ಬಳಕೆ ಉತ್ತೇಜಿಸುತ್ತಿದೆ. ಅದಕ್ಕಾಗಿ ಯೋಜನೆ (ಫೇಮ್) ಜಾರಿಗೊಳಿಸಿದೆಯಾದರೂ, ಗುರಿ ಸಾಧನೆ ಪೂರ್ತಿಯಾಗಿ ಆಗಿಲ್ಲ.

ದೇಶದ ಸಾರ್ವಜನಿಕ ಸಾರಿಗೆಯ ಎಲ್ಲ ವಾಹನಗಳು ಮತ್ತು ಖಾಸಗಿ ಬಳಕೆಯ ಶೇ 40ರಷ್ಟು ವಾಹನಗಳು 2030ರ ವೇಳೆಗೆ ಸಂಪೂರ್ಣವಾಗಿ ವಿದ್ಯುತ್ ಚಾಲಿತ ಆಗಿರಬೇಕು ಎನ್ನುವ ಮಹತ್ವಾಕಾಂಕ್ಷೆ ಸರ್ಕಾರದ್ದು. ಅದಕ್ಕಾಗಿ,₹ 895 ಕೋಟಿ ನೀಡಿ, ಫೇಮ್ ಯೋಜನೆಯನ್ನು ಎರಡು ವರ್ಷಗಳ ಅವಧಿಗೆ 2015ರ ಏಪ್ರಿಲ್‌ನಲ್ಲಿ ಜಾರಿಗೊಳಿಸಲಾಯಿತು. ಆದರೆ, ಯೋಜನೆವಿಸ್ತರಿಸುವ ಬೇಡಿಕೆ ಉದ್ಯಮ ವಲಯದಿಂದ ಬಂದಿದ್ದರಿಂದ 2019ರ ಏಪ್ರಿಲ್‌ನಲ್ಲಿ (ಫೇಮ್–2) ಜಾರಿಗೊಳಿಸಿ, ಮೂರು ವರ್ಷಗಳ ಅವಧಿ ನಿಗದಿಪಡಿಸಲಾಗಿತ್ತು. ಗುರಿ ತಲುಪಲು ಸಾಧ್ಯವಾಗದೇ ಮತ್ತೆ ಎರಡು ವರ್ಷ ವಿಸ್ತರಿಸಲಾಗಿದೆ. ‘ಫೇಮ್–2’ಗಾಗಿ ₹ 10 ಸಾವಿರ ಕೋಟಿ ಮೀಸಲಿಡಲಾಗಿದೆ.

ಫೇಮ್–2 ಅಡಿಯಲ್ಲಿ, 2022ರ ಮಾರ್ಚ್ ಒಳಗಾಗಿ ಗರಿಷ್ಠ ವೇಗದ 10 ಲಕ್ಷ ದ್ವಿಚಕ್ರ ವಾಹನ ಮಾರಾಟದ ಗುರಿ ಇದೆ. 2019ರ ಜನವರಿ–ಡಿಸೆಂಬರ್‌ನ 27,224 ದ್ವಿಚಕ್ರ ವಾಹನ ಮಾರಾಟವಾಗಿದ್ದರೆ, 2020ರ ಇದೇ ಅವಧಿಯಲ್ಲಿ ಈ ಸಂಖ್ಯೆ 25,735. ಸಬ್ಸಿಡಿ ಇದ್ದರೂ ಕೆಲವು ಷರತ್ತುಗಳಿಂದಾಗಿ ವಾಹನ ಖರೀದಿಗೆ ಹಿನ್ನಡೆಯಾಗುತ್ತಿದೆ ಎನ್ನುತ್ತಾರೆ ಸಂಘದ ಪ್ರಧಾನ ನಿರ್ದೇಶಕ ಸೋಹಿಂದರ್ ಗಿಲ್.

ಸಬ್ಸಿಡಿ ಹೆಚ್ಚಳ
ಫೇಮ್–2 ಅಡಿ, ದ್ಚಿಚಕ್ರ ವಾಹನಗಳ ಮೇಲಿನ ಸಬ್ಸಿಡಿಯನ್ನು ಕೇಂದ್ರವು ಶೇಕಡ 50ರಷ್ಟು ಹೆಚ್ಚಿಸಿದೆ. ಆರಂಭದಲ್ಲಿ, ಎಲ್ಲಾ ವಿದ್ಯುತ್ ಚಾಲಿತ ವಾಹನಗಳಿಗೆ ಪ್ರತಿ ಕೆಡಬ್ಲ್ಯುಎಚ್‌ಗೆ (per KWh) ₹ 10 ಸಾವಿರ ಸಬ್ಸಿಡಿ ನಿಗದಿಪಡಿಸಲಾಗಿತ್ತು. ಇದೀಗ ದ್ವಿಚಕ್ರ ವಾಹನಗಳಿಗೆ ಪ್ರತಿ ಕೆಡಬ್ಲ್ಯುಎಚ್‌ಗೆ ₹ 15 ಸಾವಿರ ಸಬ್ಸಿಡಿ ನಿಗದಿ ಮಾಡಲಾಗಿದೆ. ಬೃಹತ್ ಉದ್ದಿಮೆಗಳ ಇಲಾಖೆಯು ಈಚೆಗೆ ತಂದ ಬದಲಾವಣೆ ಪ್ರಕಾರ, ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ನೀಡುವ ಆರ್ಥಿಕ ಉತ್ತೇಜನ ಮೊತ್ತವನ್ನು ವಾಹನಗಳ ಒಟ್ಟು ವೆಚ್ಚದ ಶೇ 40ಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು ಇದು ಶೇ 20ರಷ್ಟಿತ್ತು.

ಫೇಮ್–2 ಸಬ್ಸಿಡಿ
* ಕಾರು ತಯಾರಿಕಾ ವೆಚ್ಚ ₹ 15 ಲಕ್ಷ ಆಗಿದ್ದರೆ, ಅದರ ಖರೀದಿಗೆ ₹ 1.5 ಲಕ್ಷದವರೆಗೆ

* ಪ್ರತಿ ವಿದ್ಯುತ್ ಚಾಲಿತ ಬಸ್ ತಯಾರಿಕೆಗೆ ಅಂದಾಜು ₹ 2 ಕೋಟಿ ವೆಚ್ಚವಾಗಲಿದ್ದು, ಅದಕ್ಕೆ ₹ 50 ಲಕ್ಷ

* ವಿದ್ಯುತ್ ಚಾಲಿತ ಇ–ರಿಕ್ಷಾ ತಯಾರಿಕೆಗೆ ₹ 5 ಲಕ್ಷ ವೆಚ್ಚವಾಗಲಿದ್ದು, ಅದಕ್ಕೆ ₹ 50 ಸಾವಿರ

ಇದನ್ನೂ ಓದಿ... ಒಳನೋಟ | ಸರಾಗವಾಗಲಿದೆಯೇ ಇ.ವಿ. ಪಯಣ: ಗುರಿ ಈಡೇರೀತೇ?

ಪರಿಸರ ಮಾಲಿನ್ಯ ತಡೆಗೆ ಮತ್ತು ತೈಲ ಆಮದು ವೆಚ್ಚದ ಹೊರೆ ತಗ್ಗಿಸಲು ಕೇಂದ್ರ ಸರ್ಕಾರವು ವಿದ್ಯುತ್ ಚಾಲಿತ ವಾಹನಗಳ (ಇ.ವಿ.) ತಯಾರಿಗೆ ಮತ್ತು ಬಳಕೆ ಉತ್ತೇಜಿಸುತ್ತಿದೆ. ಅದಕ್ಕಾಗಿ ಯೋಜನೆ (ಫೇಮ್) ಜಾರಿಗೊಳಿಸಿದೆಯಾದರೂ, ಗುರಿ ಸಾಧನೆ ಪೂರ್ತಿಯಾಗಿ ಆಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.