ದೇಶದ ವಾಹನ ಮಾರುಕಟ್ಟೆಯಲ್ಲಿ 2030ರ ವೇಳೆಗೆ ವಿದ್ಯುತ್ ಚಾಲಿತ ವಾಹನಗಳ ಪ್ರಾಬಲ್ಯ ಇರಬೇಕು ಎಂಬ ಮಹತ್ವಾಕಾಂಕ್ಷೆಯನ್ನು ‘ನೀತಿ ಆಯೋಗ’ ಹೊಂದಿದೆ. ಆದರೆ, ವಿದ್ಯುತ್ ಚಾಲಿತ (ಇ.ವಿ.) ವಾಹನಗಳಿಗೆ ಸಂಬಂಧಿಸಿದಂತೆ ಈಗ ಇರುವ ನೀತಿಗಳು, ಮಾರುಕಟ್ಟೆ ಪರಿಸ್ಥಿತಿ ಹಾಗೂ ಮೂಲಸೌಕರ್ಯ ಇದರ ಈಡೇರಿಕೆಗೆ ಪೂರಕವಾಗಿ ಇವೆಯೇ?