ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೇಂದ್ರ ಸರ್ಕಾರವು ಸಂಗ್ರಹಿಸುತ್ತಿರುವ ಅಬಕಾರಿ ಸುಂಕವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಸುಂಕದ ಪ್ರಮಾಣವನ್ನು ಸರ್ಕಾರ ಏರಿಕೆ ಮಾಡಿದ್ದರಿಂದಲೇ ಸರ್ಕಾರದ ಆದಾಯ ಏರಿಕೆಯಾಗಿದೆ. ತತ್ಪರಿಣಾಮವಾಗಿ ಪೆಟ್ರೋಲ್ ಮತ್ತು ಡೀಸೆಲ್‌ನ ಪ್ರತಿ ಲೀಟರ್ ಚಿಲ್ಲರೆ ಮಾರಾಟ ಬೆಲೆ ₹100 ಗಡಿ ದಾಟಿದೆ.