ಬಾಲಿವುಡ್‌ನ ಹೆಸರಾಂತ ನಟಿ ಫರೂಖ ಜಾಫರ್ (88) ಅವರು ಮಿದುಳಿನ ಪಾರ್ಶವಾಯುವಿನಿಂದ ಶುಕ್ರವಾರ ನಿಧನರಾದರು ಎಂದು ಅವರ ಮೊಮ್ಮಗ ಶಾಜ್ ಅಹಮ್ಮದ್ ಅವರು ತಿಳಿಸಿದ್ದಾರೆ.
1981ರಲ್ಲಿ ‘ಉಮ್‌ರಹೋ ಜಾನ್’ ಚಿಲನಚಿತ್ರದ ಮೂಲಕ ಫರೂಖ ಅವರು ಬಾಲಿವುಡ್‌ಗೆ
ಕಾಲಿರಿಸಿದ್ದರು. ಆ ಚಿತ್ರದಲ್ಲಿ ರೇಖಾ ಅವರ ತಾಯಿಯ ಪಾತ್ರ ನಿರ್ವಹಿಸಿದ್ದರು.
‘ಪೀಪ್ಲಿ ಲೈವ್‘, ‘ಸ್ವದೇಶ್’, ‘ಸುಲ್ತಾನ್‘, ‘ಬುಲಾಬೋ ಸಿತಾಬೋ‘ ಮೊದಲಾದ ಸಿನಿಮಾಗಳಲ್ಲೂ ನಟಿಸಿದ್ದರು.
ಅವರು ಉತ್ತರ ಪ್ರದೇಶ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಎಸ್.ಎಂ.ಜಾಫರ್ ಅವರನ್ನು ವಿವಾಹವಾಗಿದ್ದರು.