×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿಯಲ್ಲಿ ವೀಕೆಂಡ್‌ ಕರ್ಫ್ಯೂ: ಎರಡನೇ ದಿನ ಜನರ ಓಡಾಟ ಸಾಮಾನ್ಯ

ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ವೀಕೆಂಡ್‌ ಕರ್ಫ್ಯೂ ಎರಡನೇ ದಿನವಾದ ಭಾನುವಾರ ನಗರದಲ್ಲಿ ಜನರ ಓಡಾಟ ಸಾಮಾನ್ಯವಾಗಿತ್ತು.

ಮೊದಲ ದಿನವಾದ ಶನಿವಾರಕ್ಕೆ ಹೋಲಿಸಿದರೆ ಎರಡನೇ ದಿನ ಜನರ ಓಡಾಟ ಸ್ವಲ್ಪ ಹೆಚ್ಚೇ ಇತ್ತು. ಜನ ಎಂದಿನಂತೆ ಬೆಳಿಗ್ಗೆ ವಾಕಿಂಗ್‌ಗೆ ತೆರಳಿದರು. ದಿನಪತ್ರಿಕೆ, ಹಾಲು ಖರೀದಿಸಿದರು. ಹೂ, ಹಣ್ಣು, ಮಾಂಸದಂಗಡಿಗಳು ತೆರೆದಿದ್ದವು. ಬೆಳಿಗ್ಗೆ ಹೆಚ್ಚಿನ ಜನ ಕಂಡು ಬಂದರು. ಮಧ್ಯಾಹ್ನ ಜನರ ಓಡಾಟ ತಗ್ಗಿತು. ಪುನಃ ಸಂಜೆ ವೇಳೆಗೆ ಜನರ ಓಡಾಟ ಮತ್ತೆ ಹೆಚ್ಚಿತು.

ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರು ವಾಹನಗಳನ್ನು ತಡೆದು ವಿಚಾರಿಸುತ್ತಿದ್ದರು. ಸಕಾರಣವಿಲ್ಲದೆ ಹೊರಗೆ ಬಂದವರ ವಿರುದ್ಧ ದಂಡ ಹಾಕಿದರು. ಕಾಲ್ನಡಿಗೆಯಲ್ಲಿ ಓಡಾಡುತ್ತಿದ್ದವರನ್ನು ಯಾರೂ ಪ್ರಶ್ನಿಸಲಿಲ್ಲ. ಅಲ್ಲಲ್ಲಿ ಗುಂಪು ಗುಂಪಾಗಿ ನಿಂತಿದ್ದವರು ಪೊಲೀಸರ ಗಸ್ತು ವಾಹನಗಳನ್ನು ಕಂಡು ಕಾಲು ಕಿತ್ತಿದರು.

ಎಂದಿನಂತೆ ಹೋಟೆಲ್‌ಗಳು ತೆರೆದಿದ್ದವು. ‘ಡೆಲಿವರಿ ಬಾಯ್‌’ ಮೂಲಕ ಪಾರ್ಸೆಲ್‌ ತರಿಸಿಕೊಂಡರೆ, ಕೆಲವರು ಹೋಟೆಲ್‌ಗಳಿಗೆ ಬಂದು ಅವರೇ ಕೊಂಡೊಯ್ದರು. ಬೆಳಿಗ್ಗೆ ಹಾಗೂ ಸಂಜೆ ವೇಳೆ ಹೋಟೆಲ್‌ಗಳಲ್ಲಿ ವಹಿವಾಟು ನಡೆಯಿತು. ಆದರೆ, ಹೇಳಿಕೊಳ್ಳುವಷ್ಟು ಇರಲಿಲ್ಲ.

ಮೊದಲ ದಿನವಾದ ಶನಿವಾರಕ್ಕೆ ಹೋಲಿಸಿದರೆ ಎರಡನೇ ದಿನ ಜನರ ಓಡಾಟ ಸ್ವಲ್ಪ ಹೆಚ್ಚೇ ಇತ್ತು. ಜನ ಎಂದಿನಂತೆ ಬೆಳಿಗ್ಗೆ ವಾಕಿಂಗ್‌ಗೆ ತೆರಳಿದರು. ದಿನಪತ್ರಿಕೆ, ಹಾಲು ಖರೀದಿಸಿದರು. ಹೂ, ಹಣ್ಣು, ಮಾಂಸದಂಗಡಿಗಳು ತೆರೆದಿದ್ದವು. ಬೆಳಿಗ್ಗೆ ಹೆಚ್ಚಿನ ಜನ ಕಂಡು ಬಂದರು. ಮಧ್ಯಾಹ್ನ ಜನರ ಓಡಾಟ ತಗ್ಗಿತು. ಪುನಃ ಸಂಜೆ ವೇಳೆಗೆ ಜನರ ಓಡಾಟ ಮತ್ತೆ ಹೆಚ್ಚಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT