ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಮುಂದುವರಿದಿದೆ. ಮುಂಡಗೋಡದ ಟಿಬೆಟನ್ ಕ್ಯಾಂಪ್‌ನಲ್ಲಿ ಮತ್ತು ದಾಂಡೇಲಿಯಲ್ಲಿ ತಲಾ ಒಂದು ಶಾಲೆಗೆ ರಜೆ ಜ.25ರ ತನಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬುಧವಾರ ಆದೇಶಿಸಿದ್ದಾರೆ.

ದಾಂಡೇಲಿಯ ಸೇಂಟ್ ಮೈಕಲ್ ಕಾನ್ವೆಂಟ್ ಪ್ರಾಥಮಿಕ ಶಾಲೆಯ ಎಂಟು ವಿದ್ಯಾರ್ಥಿಗಳಲ್ಲಿ ಸೋಂಕು ಖಚಿತವಾಗಿದೆ. ಅದೇರೀತಿ, ಮುಂಡಗೋಡದ ಸಂಬೋಟಾ ಟಿಬೆಟನ್ ಕ್ಯಾಂಪ್ ನಂಬರ್ 3ರ ಶಾಲೆಯ 14 ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟಿದೆ. ಆದ್ದರಿಂದ ಈ ಶಾಲೆಗಳಿಗೆ ರಜೆ ನೀಡಲಾಗಿದೆ. ಇಲ್ಲಿ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಅದರ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು ಎಂದು ಸೂಚಿಸಿದ್ದಾರೆ.

ಕೆಲವು ದಿನಗಳಲ್ಲಿ ದೂರ ಪ್ರಯಾಣ ಮಾಡಿರುವ ಮಕ್ಕಳಿದ್ದರೆ ಅವರನ್ನು ಮತ್ತು ಪಾಲಕರನ್ನು ಶಾಲೆಗೆ ಬರುವುದನ್ನು ನಿರ್ಬಂಧಿಸಬೇಕು ಎಂದೂ ಅವರು ಆದೇಶಿಸಿದ್ದಾರೆ.

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಮಕ್ಕಳಿಗೆ ಕೋವಿಡ್ ಹರಡುತ್ತಿರುವ ಪ್ರಮಾಣವು ಏರಿಕೆ ಕಾಣುತ್ತಿದೆ. ಹಾಗಾಗಿ ಜಿಲ್ಲಾಡಳಿತವು ಈ ಮೊದಲೇ ಸೂಚಿಸಿದಂತೆ ಕ್ಲಸ್ಟರ್‌ಗಳನ್ನು ಗುರುತಿಸಿ ಅಲ್ಲಿಗೆ ಮಾತ್ರ ಅನ್ವಯವಾಗುವಂತೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತಿದೆ.

ದೃಢಪಡುವ ಪ್ರಮಾಣ ಇಳಿಕೆ:

ಜಿಲ್ಲೆಯಲ್ಲಿ ಕೋವಿಡ್ ದೃಢ ಪಡುವ ಪ್ರಮಾಣವು ಬುಧವಾರ ಸ್ವಲ್ಪ ಇಳಿಕೆಯಾಗಿದ್ದು, ಶೇ 7.28ರಷ್ಟು ದಾಖಲಾಗಿದೆ. ಇದು ಕೋವಿಡ್ ಸೋಂಕಿನ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯಕೀಯ ತಂಡಕ್ಕೆ ಸ್ವಲ್ಪ ನಿಟ್ಟುಸಿರು ನೀಡಿದೆ. ಈ ಪ್ರಮಾಣವು ಮಂಗಳವಾರ ಶೇ 8.89ರಷ್ಟು ದಾಖಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.