ಬೀದರ್: ಮಕರ ಸಂಕ್ರಾಂತಿಯ ವೇಳೆ ಮಾರುಕಟ್ಟೆಯಲ್ಲಿ ಅಬ್ಬರಿಸಿದ್ದ ತರಕಾರಿಗಳು ಹಬ್ಬ ಮುಗಿಯುತ್ತಿದ್ದಂತೆಯೇ ಮೆತ್ತಗಾಗಿವೆ. ಬಹುತೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ.

ಬೆಲೆ ಕುಸಿದು ಬಿದ್ದ ಕಾರಣ ತರಕಾರಿ ರಾಜ ತನ್ನ ಕಿರೀಟವನ್ನೇ ಕೆಳಗಿಳಿಸಿದೆ. ಬೀಗಿದ್ದ ಬೀನ್ಸ್, ಬೀಟ್‌ರೂಟ್ ಬಳಲಿವೆ. ಹಿರೇಕಾಯಿ, ತೊಂಡೆಕಾಯಿ ಹಾಗೂ ಬೆಂಡೆಕಾಯಿ ಸಹ ಬಳಲಿ ಬೆಂಡಾಗಿವೆ. ಮೆಣಸಿನಕಾಯಿ ಖಾಟು ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಸೆಟೆದು ನಿಂತಿದ್ದ ನುಗ್ಗೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1,200 ರಿಂದ ₹ 1 ಸಾವಿರಕ್ಕೆ ಇಳಿದರೂ ಅದರ ಘನತೆ ಕಡಿಮೆಯಾಗಿಲ್ಲ.

ನಗರದ ಮಾರುಕಟ್ಟೆಯಲ್ಲಿ ಬದನೆಕಾಯಿ, ಹೂಕೋಸು ಬೆಲೆ ಪ್ರತಿಕ್ವಿಂಟಲ್‌ಗೆ ₹ 4 ಸಾವಿರ, ಬೀಟ್‌ರೂಟ್, ಡೊಣ ಮೆಣಸಿನಕಾಯಿ ₹ 3 ಸಾವಿರ, ಹಿರೇಕಾಯಿ, ಬೆಂಡೆಕಾಯಿ , ನುಗ್ಗೆಕಾಯಿ, ಬೀನ್ಸ್, ಚವಳೆಕಾಯಿ, ಮೆಂತೆ ಸೊಪ್ಪು ₹ 2 ಸಾವಿರ, ಟೊಮೆಟೊ, ಎಲೆಕೋಸು ₹ 1,500, ಬೆಳ್ಳುಳ್ಳಿ, ಮೆಣಸಿಕಾಯಿ, ಆಲೂಗಡ್ಡೆ, ಗಜ್ಜರಿ ಹಾಗೂ ತೊಂಡೆಕಾಯಿ ಬೆಲೆ ₹ 1 ಸಾವಿರ ಕಡಿಮೆಯಾಗಿದೆ.

ಮಾರುಕಟ್ಟೆಗೆ ಈರುಳ್ಳಿ ಹೆಚ್ಚು ಆವಕವಾಗಿರುವ ಕಾರಣ ಹಸಿ ಈರುಳ್ಳಿ ಹೊತ್ತ ವಾಹನಗಳು ಓಣಿ ಓಣಿಗಳಿಗೆ ಬರುತ್ತಿವೆ. ವ್ಯಾಪಾರಸ್ಥರು ಸ್ಥಳದಲ್ಲೇ ನೂರು ರೂಪಾಯಿಗೆ ನಾಲ್ಕು ಕೆ.ಜಿ.ಯಂತೆ ಮಾರಾಟ ಮಾಡಿ ಈರುಳ್ಳಿ ಹಾಳಾಗದಂತೆ ಎಚ್ಚರ ವಹಿಸುತ್ತಿದ್ದಾರೆ. ಹಾನಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ಈರುಳ್ಳಿ ದೊರಕುತ್ತಿದೆ.

ಈ ವಾರ ಯಾವುದೇ ತರಕಾರಿ ಬೆಲೆಯಲ್ಲಿ ಹೇಳಿಕೊಳ್ಳುವಷ್ಟು ಏರಿಕೆಯಾಗಿಲ್ಲ. ಮಾರುಕಟ್ಟೆಯಲ್ಲಿ ಈರುಳ್ಳಿ, ಸಬ್ಬಸಗಿ, ಕರಿಬೇವು, ಕೊತಂಬರಿ ಹಾಗೂ ಪಾಲಕ್ ಬೆಲೆ ಸ್ಥಿರವಾಗಿದೆ. ಗ್ರಾಹಕರು ಒಂದಿಷ್ಟು ನೆಮ್ಮದಿಯಿಂದ ಇದ್ದಾರೆ.

’ಮಾರುಕಟ್ಟೆಗೆ ಎಲ್ಲ ಕಡೆಯಿಂದಲೂ ತರಕಾರಿ ಬಂದಿದೆ. ಹಬ್ಬ ಹಾಗೂ ವಾರಾಂತ್ಯ ಕರ್ಫ್ಯೂ ಕಾರಣ ತರಕಾರಿ ಬೆಲೆ ಕಡಿಮೆಯಾಗಿರಬಹುದು. ಜನ ಮಾರುಕಟ್ಟೆಗೆ ಬಂದರೆ ತರಕಾರಿ ಹೆಚ್ಚು ಮಾರಾಟವಾಗುತ್ತದೆ. ಇಲ್ಲವಾದರೆ ಮಾರಾಟವಾಗದೆ ಒಂದೊಮ್ಮೆ ಹಾಳಾಗಿ ಚೆಲ್ಲಬೇಕಾದ ಪರಿಸ್ಥಿತಿ ಬರುತ್ತದೆ‘ ಎಂದು ತರಕಾರಿ ವ್ಯಾಪಾರಿ ಶಿವಾನಂದ ಮಾಡಗೂಳ ಹೇಳುತ್ತಾರೆ.

ಹೈದರಾಬಾದ್‌ನಿಂದ ಬೀಟ್‌ರೂಟ್, ಹಿರೇಕಾಯಿ, ಸೌತೆಕಾಯಿ, ಗಜ್ಜರಿ ಬಂದಿದೆ. ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬಂದಿದೆ. ಬೆಳಗಾವಿಯಿಂದ ಹಸಿ ಮೆಣಸಿನಕಾಯಿ, ಸ್ವಲ್ಪ ಮಟ್ಟಿಗೆ ಆಲೂಗಡ್ಡೆ ಹಾಗೂ ಗೆಣಸಿನಕಾಯಿ ಆವಕವಾಗಿದೆ .

ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್, ಭಾಲ್ಕಿ ಹಾಗೂ ಬೀದರ್‌ತಾಲ್ಲೂಕಿನ ಗ್ರಾಮಾಂತರ ಪ್ರದೇಶದಿಂದ ಬದನೆಕಾಯಿ, ಹೂಕೋಸು, ಎಲೆಕೋಸು, ಕರಿಬೇವು ಹಾಗೂ ಕೊತಂಬರಿ ಮಾರುಕಟ್ಟೆಗೆ ಬಂದಿದೆ.

ಬೀದರ್‌ತರಕಾರಿ ಚಿಲ್ಲರೆ ಮಾರುಕಟ್ಟೆ

ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ

ಈರುಳ್ಳಿ 20-30, 20-30

ಮೆಣಸಿನಕಾಯಿ 40-50,30-40

ಆಲೂಗಡ್ಡೆ 20-30,15-20

ಎಲೆಕೋಸು 30-40,20-25

ಹೂಕೋಸು 60-80,30-40

ಬೆಳ್ಳುಳ್ಳಿ 30-40,25-30

ಗಜ್ಜರಿ 40-50,30-40

ಬೀನ್ಸ್ 50-60,30-40

ಬದನೆಕಾಯಿ 70-80,30-40

ಮೆಂತೆ ಸೊಪ್ಪು 30-40,15-20

ಸಬ್ಬಸಗಿ 30-40,30-40

ಬೀಟ್‌ರೂಟ್ 60-70,30-40

ತೊಂಡೆಕಾಯಿ 50-60,40-50

ಕರಿಬೇವು 30-40,38-40

ಕೊತಂಬರಿ 10-20,10-20

ಟೊಮೆಟೊ 20-30, 10-15

ಪಾಲಕ್ 20-30, 20-30

ಬೆಂಡೆಕಾಯಿ 60-70,40-50

ಚವಳೆಕಾಯಿ 50-60, 30-40

ಹಿರೇಕಾಯಿ 60-80, 50-60

ನುಗ್ಗೆಕಾಯಿ 100-120, 80-100

ಡೊಣ ಮೆಣಸಿನಕಾಯಿ 80-100, 60-70

ಮಕರ ಸಂಕ್ರಾಂತಿಯ ವೇಳೆ ಮಾರುಕಟ್ಟೆಯಲ್ಲಿ ಅಬ್ಬರಿಸಿದ್ದ ತರಕಾರಿಗಳು ಹಬ್ಬ ಮುಗಿಯುತ್ತಿದ್ದಂತೆಯೇ ಮೆತ್ತಗಾಗಿವೆ. ಬಹುತೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.