ಬೆಂಗಳೂರು: ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕಮಲಾನಗರದ ಶಂಕರ್‌ನಾಗ್ ಬಸ್ ನಿಲ್ದಾಣದ ಸನಿಹ ಕುಸಿಯುವ ಹಂತದಲ್ಲಿದ್ದ ಮೂರು ಮಹಡಿಯ ಕಟ್ಟಡವನ್ನು ಬಿಬಿಎಂಪಿ ಅಧಿಕಾರಿಗಳು ಬುಧವಾರ ನೆಲಸಮಗೊಳಿಸಿದರು.

ಅಧಿಕಾರಿಗಳು ಹಿಟಾಚಿಯ ನೆರವಿನಿಂದ ಕಟ್ಟಡ ಕೆಡವಲು ಮುಂದಾದಾಗ ನಿವಾಸಿಗಳು ಕಣ್ಣೀರಿಡುತ್ತಿದ್ದ ದೃಶ್ಯ ಕಂಡುಬಂತು.

ಮನೆಯಲ್ಲಿದ್ದ ಸಾಮಾನು ಸರಂಜಾಮು, ಬಟ್ಟೆ, ಪೀಠೋಪಕರಣಗಳು ಹಾಗೂ ಕಾಗದ ಪತ್ರಗಳನ್ನು ತೆಗೆದುಕೊಳ್ಳಲು ಅವರಿಗೆ ಆಗಲಿಲ್ಲ. ಕಟ್ಟಡದ ತಾರಸಿ ಹಾಗೂ ಕಾರಿಡಾರ್‌ನಲ್ಲಿ ಒಣಗಿಸಿದ್ದ ಬಟ್ಟೆಗಳು ಹಾಗೇ ನೇತಾಡುತ್ತಿದ್ದವು.

ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಸುತ್ತಲಿನ ರಸ್ತೆಗಳನ್ನು ಬಂದ್ ಮಾಡಿದ್ದರು. ಸ್ಥಳೀಯರನ್ನು ದೂರ ಕಳಿಸುವ ಕಾರ್ಯದಲ್ಲೂ ಮಗ್ನರಾಗಿದ್ದರು.

ಹಿಟಾಚಿ ಸಹಾಯದಿಂದ ಬಹಳ ಯೋಜನಾಬದ್ಧವಾಗಿ ಗೋಡೆಗಳನ್ನು ಕೆಡವಿದ ಅಧಿಕಾರಿಗಳು ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗದ ಹಾಗೆ ಕಟ್ಟಡವನ್ನು ಎಡಭಾಗಕ್ಕೆ ಬೀಳಿಸಿದರು.

ಇದನ್ನೂ ಓದಿ... ಬೆಂಗಳೂರಿನ ಕಮಲಾನಗರದಲ್ಲಿ ಕುಸಿಯುವ ಹಂತದಲ್ಲಿ ಕಟ್ಟಡ: ಓಡೋಡಿ ಹೊರ ಬಂದ ಜನ

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕಮಲಾನಗರದ ಶಂಕರ್‌ನಾಗ್ ಬಸ್ ನಿಲ್ದಾಣದ ಸನಿಹ ಕುಸಿಯುವ ಹಂತದಲ್ಲಿದ್ದ ಮೂರು ಮಹಡಿಯ ಕಟ್ಟಡವನ್ನು ಬಿಬಿಎಂಪಿ ಅಧಿಕಾರಿಗಳು ಬುಧವಾರ ನೆಲಸಮಗೊಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.