×
ADVERTISEMENT
ಈ ಕ್ಷಣ :
ADVERTISEMENT

ಟೆಕ್‌ನೋ 'ಪೋವಾ ನಿಯೋ' ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ ₹12,999

Last Updated 20 ಜನವರಿ 2022, 13:54 IST
Comments
ಅಕ್ಷರ ಗಾತ್ರ

ನವದೆಹಲಿ: ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಟೆಕ್‌ನೋ 'ಪೋವಾ ನಿಯೋ' ಫೋನ್‌ ಬಿಡುಗಡೆ ಮಾಡಿದೆ. 11 ಜಿಬಿ ವರೆಗೆ ವಿಸ್ತರಿಸಬಹುದಾದ ರ‍್ಯಾಮ್ ಮತ್ತು 6,000 ಎಂಎಎಚ್ ಬ್ಯಾಟರಿ ಒಳಗೊಂಡಿರುವ ಫೋನ್‌ಗೆ ₹12,999 ನಿಗದಿಯಾಗಿದೆ.

ಪೋವಾ ನಿಯೊದ ಪ್ರತಿ ಖರೀದಿಯೊಂದಿಗೆ ಗ್ರಾಹಕರು ₹1,499 ಮೌಲ್ಯದ ಉಚಿತ ಇಯರ್‌ಬಡ್‌ಗಳನ್ನು ಪಡೆಯಬಹುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಟೆಕ್‌ನೋ 'ಪೋವಾ ನಿಯೋ' ಜನವರಿ 22ರಿಂದ ಖರೀದಿಗೆ ಸಿಗಲಿದೆ.

ಯುವ ಜನತೆಯ ಬಳಕೆಯ ಅಗತ್ಯಕ್ಕೆ ತಕ್ಕಂತೆ ಹಲವು ವಿಶೇಷತೆಗಳನ್ನು ಈ ಫೋನ್‌ ಒಳಗೊಂಡಿದೆ. 6 ಜಿಬಿ + 5 ಜಿಬಿ ವಿಸ್ತರಿಸಬಹುದಾದ ರ‍್ಯಾಮ್ ಜೊತೆಗೆ ಮೆಮೊರಿ ಫ್ಯೂಷನ್ ತಂತ್ರಜ್ಞಾನ, 128ಜಿಬಿ ಸಂಗ್ರಹ ಸಾಮರ್ಥ್ಯ ಮತ್ತು 6,000 ಎಂಎಎಚ್ ಬ್ಯಾಟರಿ ಪೋವಾ ನಿಯೋದ ಪ್ರಮುಖ ಆಕರ್ಷಣೆ.

6.8 ಇಂಚಿನ ಡಿಸ್‌ಪ್ಲೇ, ಮೆಡಿಟೆಕ್ ಹೀಲಿಯೊ ಜಿ25 ಪ್ರೊಸೆಸರ್, 18 ವ್ಯಾಟ್‌ ವೇಗದ ಚಾರ್ಜಿಂಗ್‌, ಕ್ವಾಡ್ ಫ್ಲ್ಯಾಶ್‌ಲೈಟ್‌ನೊಂದಿಗೆ 13 ಎಂಪಿ ಎಐ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಮತ್ತು 8ಎಂಪಿ ಸೆಲ್ಫಿ ಕ್ಯಾಮೆರಾದೊಂದಿಗೆ ಡ್ಯುಯಲ್ ಫ್ಲ್ಯಾಶ್‌ಲೈಟ್‌ ಅಳವಡಿಸಲಾಗಿದೆ. ಹಿಂಭಾಗದ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್ ಮತ್ತು ಫೇಸ್ ಲಾಕ್‌ನೊಂದಿಗೆ ಬರುತ್ತದೆ. ಇದು ಪೊವೆಹಿ ಬ್ಲಾಕ್, ಗೀಕ್ ಬ್ಲೂ ಮತ್ತು ಅಬ್ಸಿಡಿಯನ್ ಕಪ್ಪು ಬಣ್ಣಗಳಲ್ಲಿ ಲಭ್ಯವಿರುತ್ತದೆ.

ನವದೆಹಲಿ: ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಟೆಕ್‌ನೋ 'ಪೋವಾ ನಿಯೋ' ಫೋನ್‌ ಬಿಡುಗಡೆ ಮಾಡಿದೆ. 11 ಜಿಬಿ ವರೆಗೆ ವಿಸ್ತರಿಸಬಹುದಾದ ರ‍್ಯಾಮ್ ಮತ್ತು 6,000 ಎಂಎಎಚ್ ಬ್ಯಾಟರಿ ಒಳಗೊಂಡಿರುವ ಫೋನ್‌ಗೆ ₹12,999 ನಿಗದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT