×
ADVERTISEMENT
ಈ ಕ್ಷಣ :

H D Kumaraswamy

ADVERTISEMENT

ಶಾಲೆ-ಕಾಲೇಜು ಬಂದ್ ಮಾಡಿ: ಕುಮಾರಸ್ವಾಮಿ ಒತ್ತಾಯ

ಚನ್ನಪಟ್ಟಣದಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದರು. ಈಗಾಗಲೇ ಅನೇಕ ಕಾಲೇಜುಗಳಲ್ಲಿ ಪಾಸಿಟಿವ್ ದರ ಹೆಚ್ಚಾಗಿದೆ. ಸರ್ಕಾರದ ಮುಂದೆ ವಾಸ್ತವಾಂಶದ ವರದಿಗಳು ಇದ್ದು, ಅದನ್ನು ಆಧರಿಸಿ ನಿರ್ಧಾರ ಕೈಗೊಳ್ಳಬೇಕು ಎಂದರು.
Last Updated 20 ಜನವರಿ 2022, 11:08 IST
ಶಾಲೆ-ಕಾಲೇಜು ಬಂದ್ ಮಾಡಿ: ಕುಮಾರಸ್ವಾಮಿ ಒತ್ತಾಯ

ರಾಮಮಂದಿರದ ಲೆಕ್ಕ ಕೇಳಲು ಕುಮಾರಸ್ವಾಮಿ ಯಾರು: ಈಶ್ವರಪ್ಪ

ಶಿವಮೊಗ್ಗ: ರಾಮಮಂದಿರ ನಿರ್ಮಾಣದ ಲೆಕ್ಕ ಕೇಳಲು ಎಚ್‌.ಡಿ. ಕುಮಾರಸ್ವಾಮಿ ಯಾರು? ಒಂದು ರೂಪಾಯಿಯನ್ನೂ ಕೊಡದೇ ಪುಗಸಟ್ಟೆ ಲೆಕ್ಕ ಕೇಳುವ ಅಧಿಕಾರ ಕುಮಾರಸ್ವಾಮಿಗೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ವಾಗ್ದಾಳಿ ನಡೆಸಿದರು.
Last Updated 18 ಅಕ್ಟೋಬರ್ 2021, 6:01 IST
ರಾಮಮಂದಿರದ ಲೆಕ್ಕ ಕೇಳಲು ಕುಮಾರಸ್ವಾಮಿ ಯಾರು: ಈಶ್ವರಪ್ಪ

ಆರ್‌ಎಸ್‌ಎಸ್‌ ಕಾರ್ಯಕರ್ತರಿಂದ ಹಣ ವಸೂಲಿ: ಕುಮಾರಸ್ವಾಮಿ ಆರೋಪ

ಶನಿವಾರ ಚನ್ನಪಟ್ಟಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ‘40 ವರ್ಷದ ಹಿಂದಿನ ಆರ್‌ಎಸ್‌ಎಸ್ ಬೇರೆ, ಈಗಿನ ಸಂಘಟನೆಯೇ ಬೇರೆ. ನಾವೇನು ಇವರಿಗೆ ದೇಶ ಒಡೆಯಲು ಗುತ್ತಿಗೆ ಕೊಟ್ಟಿಲ್ಲ. ಎಲ್ಲ ಹಿಂದು ದೇಗುಲಗಳನ್ನು ನಮ್ಮ ಸುಪರ್ದಿಗೆ ಕೊಡಿ ಎಂದು ಮೋಹನ್ ಭಾಗವತ್‌ ಕೇಳಿದ್ದಾರೆ. ಆದರೆ ಹಿಂದೆ ಹಿಂದು ಹೆಸರಿನಲ್ಲಿ ಸಂಗ್ರಹವಾದ ದೇಣಿಗೆಗಳ ಲೆಕ್ಕ ಮಾತ್ರ ಕೊಡುತ್ತಿಲ್ಲ. 1989–1991ರ ನಡುವೆ ಅಡ್ವಾಣಿಯವರು ರಥಯಾತ್ರೆ ಮಾಡಿ ಸಂಗ್ರಹಿಸಿದ ಹಣ ಏನಾಯಿತು. ಆ ಹಣ ಎಲ್ಲಿದೆ. ಈಚೆಗೆ ಸಂಗ್ರಹಿಸಿದ ಹಣದ ಲೆಕ್ಕ ಎಲ್ಲಿ’ ಎಂದು ಅವರು ಪ್ರಶ್ನಿಸಿದರು.
Last Updated 16 ಅಕ್ಟೋಬರ್ 2021, 13:13 IST
ಆರ್‌ಎಸ್‌ಎಸ್‌ ಕಾರ್ಯಕರ್ತರಿಂದ ಹಣ ವಸೂಲಿ: ಕುಮಾರಸ್ವಾಮಿ ಆರೋಪ

ರಾಮಮಂದಿರಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ ಎಂದು ಎಚ್‌ಡಿಕೆ ತಿಳಿಸಲಿ: ಸಿ.ಟಿ.ರವಿ

‘ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗಳಲ್ಲಿ ಸ್ಪಷ್ಟತೆ ಇಲ್ಲ, ಉದ್ದೇಶ ಇಲ್ಲ. ಅಯೋಧ್ಯೆ ಹೋರಾಟ ಮಾಡುವಾಗ ಅವರು ನಮ್ಮ ಬೆಂಬಲಕ್ಕೆ ನಿಂತಿದ್ರಾ? ರಾಮ ಮಂದಿರ ಕಟ್ಟುತ್ತೇವೆ ಎಂದು ನಾವು ಹೇಳುವಾಗ ಅವರು ಮಸೀದಿ ಜಪ ಮಾಡುತ್ತಿದ್ದರು’ ಎಂದು ಕುಟುಕಿದರು.  
Last Updated 16 ಅಕ್ಟೋಬರ್ 2021, 12:15 IST
ರಾಮಮಂದಿರಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ ಎಂದು ಎಚ್‌ಡಿಕೆ ತಿಳಿಸಲಿ: ಸಿ.ಟಿ.ರವಿ

ಕಾಂಗ್ರೆಸ್‌ ವಿರುದ್ಧವೇ ಸಿದ್ದರಾಮಯ್ಯ ಸಂಚು; ಕುಮಾರಸ್ವಾಮಿ ಆರೋಪ

ಬಿಡದಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈ ಹಿಂದೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದ ವೇಳೆ ಜೆಡಿಎಸ್‌ನಲ್ಲಿ ಇದ್ದುಕೊಂಡೇ, ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿನ ಮುಖಂಡರನ್ನು ಸೇರಿಸಿಕೊಂಡು ‘ಅಹಿಂದ’ ಹೆಸರಿನಲ್ಲಿ ಸಂಘಟನೆ ಮಾಡಿದ್ದರು. ಈ ಮೂಲಕ ಜೆಡಿಎಸ್‌ ಅನ್ನೇ ಮುಗಿಸಲು ಹೊರಟಿದ್ದರು. ಈಗ ಮತ್ತೆ ಅದೇ ಕೆಲಸ ಆರಂಭಿಸಿದ್ದಾರೆ. ನಿನ್ನೆ ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮ ಕಾಂಗ್ರೆಸ್‌ನದ್ದೋ ಇಲ್ಲ ಅಹಿಂದ ವರ್ಗದ್ದೋ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
Last Updated 13 ಅಕ್ಟೋಬರ್ 2021, 14:48 IST
ಕಾಂಗ್ರೆಸ್‌ ವಿರುದ್ಧವೇ ಸಿದ್ದರಾಮಯ್ಯ ಸಂಚು; ಕುಮಾರಸ್ವಾಮಿ ಆರೋಪ

ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಎಚ್‌ಡಿಕೆ ವರ್ತನೆ: ಕೆಪಿಸಿಸಿ ವಕ್ತಾರ ಟೀಕೆ

‘ಎಚ್‌.ಡಿ.ಕುಮಾರಸ್ವಾಮಿ ಇತ್ತೀಚಿನ ದಿನಗಳಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡವಂತೆ ಮಾತನಾಡುತ್ತಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ಸ್ಥಾನಕ್ಕೆ ಅಗೌರವ ತೋರಿರುವ ಅವರ ವಿರುದ್ಧ ವಿಧಾನಸಭಾಧ್ಯಕ್ಷರು ಹಕ್ಕುಚ್ಯುತಿ ಜಾರಿಗೊಳಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆಗ್ರಹಿಸಿದರು.
Last Updated 13 ಅಕ್ಟೋಬರ್ 2021, 9:14 IST
ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಎಚ್‌ಡಿಕೆ ವರ್ತನೆ: ಕೆಪಿಸಿಸಿ ವಕ್ತಾರ ಟೀಕೆ

ಕುಮಾರಸ್ವಾಮಿ ‘ಲಾಟರಿ’ ಮುಖ್ಯಮಂತ್ರಿ: ಎಂ.ಪಿ. ರೇಣುಕಾಚಾರ್ಯ

‘ಎಚ್‌.ಡಿ. ಕುಮಾರಸ್ವಾಮಿ ಎರಡು ಬಾರಿ ‘ಲಾಟರಿ’ ಹೊಡೆದಂತೆ ಮುಖ್ಯಮಂತ್ರಿಯಾದರು. ಈಗ ಅಧಿಕಾರ ಕಳೆದುಕೊಂಡು ನೀರಿನಿಂದ ಹೊರಬಿದ್ದ ಮೀನಿನಂತಾಗಿದ್ದಾರೆ’ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಟೀಕಿಸಿದರು.
Last Updated 12 ಅಕ್ಟೋಬರ್ 2021, 16:16 IST
ಕುಮಾರಸ್ವಾಮಿ ‘ಲಾಟರಿ’ ಮುಖ್ಯಮಂತ್ರಿ: ಎಂ.ಪಿ. ರೇಣುಕಾಚಾರ್ಯ
ADVERTISEMENT
ADVERTISEMENT
ADVERTISEMENT
ADVERTISEMENT