ಶನಿವಾರ ಚನ್ನಪಟ್ಟಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ‘40 ವರ್ಷದ ಹಿಂದಿನ ಆರ್‌ಎಸ್‌ಎಸ್ ಬೇರೆ, ಈಗಿನ ಸಂಘಟನೆಯೇ ಬೇರೆ. ನಾವೇನು ಇವರಿಗೆ ದೇಶ ಒಡೆಯಲು ಗುತ್ತಿಗೆ ಕೊಟ್ಟಿಲ್ಲ. ಎಲ್ಲ ಹಿಂದು ದೇಗುಲಗಳನ್ನು ನಮ್ಮ ಸುಪರ್ದಿಗೆ ಕೊಡಿ ಎಂದು ಮೋಹನ್ ಭಾಗವತ್ ಕೇಳಿದ್ದಾರೆ. ಆದರೆ ಹಿಂದೆ ಹಿಂದು ಹೆಸರಿನಲ್ಲಿ ಸಂಗ್ರಹವಾದ ದೇಣಿಗೆಗಳ ಲೆಕ್ಕ ಮಾತ್ರ ಕೊಡುತ್ತಿಲ್ಲ. 1989–1991ರ ನಡುವೆ ಅಡ್ವಾಣಿಯವರು ರಥಯಾತ್ರೆ ಮಾಡಿ ಸಂಗ್ರಹಿಸಿದ ಹಣ ಏನಾಯಿತು. ಆ ಹಣ ಎಲ್ಲಿದೆ. ಈಚೆಗೆ ಸಂಗ್ರಹಿಸಿದ ಹಣದ ಲೆಕ್ಕ ಎಲ್ಲಿ’ ಎಂದು ಅವರು ಪ್ರಶ್ನಿಸಿದರು.