ರೈಲ್ವೆ ನಿಲ್ದಾಣ, ಬೆಳಗಿನ ಜಾವ, ಅದೇ ರೈಲಿನಲ್ಲಿ ರಾಜ್ಯದ ಉಪಮುಖ್ಯಮಂತ್ರಿಯವರೂ ಪ್ರಯಾಣಿಸಿದ್ದರು. ಜಿಕೆಜಿ ಇಳಿದು ಸರ ಸರ ಮುಂದೆ ಬರುವಾಗ ಪೊಲೀಸರು ಅವರನ್ನು ತಡೆದು, ಉಪಮುಖ್ಯಮಂತ್ರಿಯವರು ಹೋಗುವ ತನಕ ಮಿಕ್ಕವರಾರೂ ಹೋಗುವಂತಿಲ್ಲ ಎಂದರು. ರೀ, ಅದೆಲ್ಲಾ ಸಾಧ್ಯವಿಲ್ಲ, ಅವರೂ ನಮ್ಮಂತೆಯೇ ಬರಲಿ ಬೇಕಾದರೆ, ರಕ್ಷಣೆಯ ವಿಷಯವಾದರೆ, ನಾವೆಲ್ಲ ಬಡಪ್ರಜೆಗಳು ಹೋದಮೇಲೆ ಆ
ಮಹಾನುಭಾವರು ಹೋಗಲಿ, ನೀವೆಲ್ಲಾ
ಇದೀರಲ್ಲಾ ಅವರಿಗೆ ರಕ್ಷಣೆ ಕೊಡೋದಿಕ್ಕೆ ಅಂತ ರೇಗಿ, ಅವರ ಪಾಡಿಗೆ
ಅವರು ನಿಲ್ದಾಣದಿಂದ ಹೊರಬಂದರು. ಅವತ್ತೇ ಅವರನ್ನು ನಾನು, ನಾನು ಕೆಲಸ ಮಾಡುತ್ತಿದ್ದ ಗ್ರಾಮೀಣ ಕಾಲೇಜಿಗೆ ಅತಿಥಿಯಾಗಿ ಕರೆದಿದ್ದೆ.