×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ :: ಸೋಮವಾರ, 17.1.1972

Published : 16 ಜನವರಿ 2022, 15:41 IST
ಫಾಲೋ ಮಾಡಿ
Comments

ಅಧ್ಯಕ್ಷ ಸ್ಥಾನಕ್ಕೆ ಅರಸು ರಾಜೀನಾಮೆಗೆ ವಿರೋಧಿಗಳ ಸನ್ನಾಹ

ನವದೆಹಲಿ, ಜ. 16– ಮೈಸೂರು ಪ್ರದೇಶ ಆಡಳಿತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ. ದೇವರಾಜ ಅರಸು ಮತ್ತು ಇತರ ಅಧಿಕಾರ ವರ್ಗದವರು ಬರಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವುದರಿಂದ ಇವರುಗಳನ್ನು ಸಂಸ್ಥೆಯ ಅಧಿಕಾರ ಸ್ಥಾನದಿಂದ ತೆಗೆದು ಅವರ ಜಾಗಕ್ಕೆ ಬೇರೆಯವರನ್ನು ನೇಮಕ ಮಾಡುವಂತೆ ನಾಳೆ ಮೈಸೂರು ಪ್ರದೇಶ ಚುನಾವಣೆ ಸಮಿತಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರನ್ನು ಒತ್ತಾಯಪಡಿಸುವ ಸಂಭವವಿದೆ.

ಮಾರ್ಚ್‌ನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ನಿರ್ದೇಶನ ಸೂತ್ರಗಳನ್ನು ಸಲಹೆ ಮಾಡಲು ಇಂದಿರಾ ಗಾಂಧಿಯವರು ನಾಳೆ ಮೈಸೂರು ಪ್ರದೇಶ ಕಾಂಗ್ರೆಸ್‌ ಚುನಾವಣೆ ಸಮಿತಿ ಸಭೆ ಕರೆದಿದ್ದಾರೆ.

ವ್ಯಕ್ತಿ, ಸಮಾಜದ ನೈಜ ಅಗತ್ಯ ಪೂರೈಸುವ ಶಿಕ್ಷಣ ಪದ್ಧತಿ ಅಗತ್ಯ

ಮೈಸೂರು, ಜ. 17– ವ್ಯಕ್ತಿ ಮತ್ತು ಸಮಾಜದ ನೈಜ ಅವಶ್ಯಕತೆಗಳನ್ನು ಪೂರೈಸುವ ಶಿಕ್ಷಣ ಕ್ರಮವನ್ನು ಜಾರಿಗೆ ತರಬೇಕಾದ ಅಗತ್ಯ ಕುರಿತು ಕೇಂದ್ರ ಶಿಕ್ಷಣ ಸಚಿವ ಡಾ. ಸಿದ್ಧಾರ್ಥ ಶಂಕರ ರಾಯ್‌ ಅವರು ಇಂದು ಇಲ್ಲಿ ಒತ್ತಿ ಹೇಳಿದರು.

ಮಾನಸ ಗಂಗೋತ್ರಿಯ ಬಯಲು ರಂಗಮಂಟಪದಲ್ಲಿ ಇಂದು ಸಂಜೆ ಮೈಸೂರು ವಿಶ್ವವಿದ್ಯಾನಿಲಯದ ಐವತ್ತೆರಡನೇ ಘಟಿಕೋತ್ಸವ ಭಾಷಣ ಮಾಡಿದ ಕೇಂದ್ರ ಶಿಕ್ಷಣ ಸಚಿವರು, ಅರೈಪೂರ್ವ ಶಿಕ್ಷಣ ನೀಡಲು ಪೂರಕವಾದ ಎಲ್ಲ ಹಂತಗಳಲ್ಲಿಯೂ ಅನಿವಾರ್ಯವಾಗಿರುವ ಶಿಕ್ಷಣ ಪುನರ್‌ರಚನೆ ತುರ್ತಾಗಿ ನಡೆಯಬೇಕಿದೆಯೆಂದರು.

ಉನ್ನತ ಶಿಕ್ಷಣದ ಲಾಭಗಳನ್ನು ಪಡೆದುಕೊಳ್ಳಲು ಅಗತ್ಯವಾದ ಎಲ್ಲ ಅರ್ಹತೆಗಳನ್ನು ಹೊಂದಿರುವ, ಆದರೆ ತಮ್ಮ ಶಿಕ್ಷಣ ವೆಚ್ಚವನ್ನು ನೀಡಲು ಅಸಮರ್ಥರಾಗಿರುವ ವ್ಯಕ್ತಿಗಳಿಗೆ ಮಾತ್ರ ಸರ್ಕಾರದ ದ್ರವ್ಯ ಸಹಾಯವನ್ನು ಮೀಸಲಿಡಬೇಕೆಂಬ ಖಚಿತ ಅಭಿಪ್ರಾಯವನ್ನು ಡಾ. ರಾಯ್‌ ವ್ಯಕ್ತಪಡಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಅರಸು ರಾಜೀನಾಮೆಗೆ ವಿರೋಧಿಗಳ ಸನ್ನಾಹ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT