×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಮಂಗಳವಾರ, 18.1.1972

Published : 17 ಜನವರಿ 2022, 15:06 IST
ಫಾಲೋ ಮಾಡಿ
Comments

ಲೋಕಸಭೆ ಚುನಾವಣೆ ನಂತರ ಸೇರಿದವರಿಗೆ (ಆ) ಕಾಂಗ್ರೆಸ್‌ ಟಿಕೆಟ್ಟಿಲ್ಲ

ನವದೆಹಲಿ, ಜ. 17– ಮೈಸೂರು ರಾಜ್ಯದಲ್ಲಿ ಲೋಕಸಭೆ ಮಧ್ಯಂತರ ಚುನಾವಣೆ ನಡೆದ ನಂತರ ಆಡಳಿತ ಕಾಂಗ್ರೆಸ್ಸಿಗೆ ಸೇರಿದ ಸದಸ್ಯರುಗಳಿಗೆ ವಿಧಾನಸಭೆಗೆ ಸ್ಪರ್ಧಿಸಲು ಆ ಪಕ್ಷದ ಟಿಕೆಟ್‌ ಸಿಗುವುದಿಲ್ಲ.

ಇಂದು ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಸಮ್ಮುಖದಲ್ಲಿ ನಡೆದ ಮೈಸೂರು ಕಾಂಗ್ರೆಸ್‌ ಚುನಾವಣೆ ಸಮಿತಿ ಸಭೆ ಈ ನಿರ್ಧಾರ ಕೈಗೊಂಡಿತು. ಮುಖ್ಯವಾಗಿ ಸಂಸ್ಥಾ ಕಾಂಗ್ರೆಸ್ಸಿನ ಮಾಜಿ ಸದಸ್ಯರಿಗೆ ಈ ನಿರ್ಧಾರದ ಬಿಸಿ ತಟ್ಟುವುದು.

ಯುದ್ಧದಲ್ಲಿ ಗೆದ್ದಿರುವ ಪ್ರದೇಶ ಪಾಕ್‌ ವಶಕ್ಕೆ ವಾಪಸಿಲ್ಲ: ರಾಂ

ಪಾಟಲೀಪುತ್ರ, ಜ. 17– ಇತ್ತೀಚಿನ ಭಾರತ– ಪಾಕಿಸ್ತಾನ ಯುದ್ಧದಲ್ಲಿ ಗೆದ್ದಿರುವ ಪ್ರದೇಶವನ್ನು ಭಾರತ ಹಿಂತಿರುಗಿಸದು ಎಂದು ರಕ್ಷಣಾ ಸಚಿವ ಜಗಜೀವನರಾಂ ಅವರು ಇಂದು ಇಲ್ಲಿ ಸೂಚನೆಯಿತ್ತರು.

ವಶಪಡಿಸಿಕೊಂಡಿರುವ ಪ್ರದೇಶವನ್ನು ಪಾಕಿಸ್ತಾನಕ್ಕೆ ಹಿಂತಿರುಗಿಸಿದರೆ ರಾಷ್ಟ್ರಾದ್ಯಂತ ಚಳವಳಿ ನಡೆಸುವುದಾಗಿ ಜನಸಂಘದ ಅಧ್ಯಕ್ಷ ಅಟಲ್‌ ಬಿಹಾರಿ ವಾಜಪೇಯಿ ಅವರಿತ್ತಿರುವ ಬೆದರಿಕೆ ಬಗ್ಗೆ ಜಗಜೀವನರಾಂ ಅವರು ಟೀಕಿಸುತ್ತಾ, ‘ನಾವು ಅಷ್ಟು ಮೂರ್ಖರಲ್ಲ. ಬರೀ ಮಾತನಾಡುವವರಿಗಿಂತ ದೇಶಕ್ಕಾಗಿ ತ್ಯಾಗ ಮಾಡಿರುವವರಿಗೆ ನೋವು ಹೆಚ್ಚು’ ಎಂದು ಹೇಳಿದರು.

ಲೋಕಸಭೆ ಚುನಾವಣೆ ನಂತರ ಸೇರಿದವರಿಗೆ (ಆ) ಕಾಂಗ್ರೆಸ್‌ ಟಿಕೆಟ್ಟಿಲ್ಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT