×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ಬುಧವಾರ 13.10.1971

Published : 12 ಅಕ್ಟೋಬರ್ 2021, 19:30 IST
ಫಾಲೋ ಮಾಡಿ
Comments

ಆದಾಯ ತೆರಿಗೆಗೆ ಕೃಷಿ ವರಮಾನ ಸೇರಿಸಲು ರಾಜ್ಯಗಳ ವಿರೋಧ

ನವದೆಹಲಿ, ಅ. 12– ಆದಾಯ ತೆರಿಗೆಯೊಡನೆ ಕೃಷಿ ಆದಾಯದ ತೆರಿಗೆಯನ್ನು ವಿಲೀನಗೊಳಿಸಿದರೆ ರಾಜ್ಯಗಳ ಆದಾಯದ ಸಂಪನ್ಮೂಲಗಳು ಕುಗ್ಗುವುದರ ಜೊತೆಗೆ ಅಂತಹ ಕ್ರಮವು ತಮ್ಮ ಸ್ವಾಯತ್ತತೆಯನ್ನು ಅತಿಕ್ರಮಿಸುವುದರಿಂದ ಆ ಸಂಬಂಧದ ಕೇಂದ್ರದ ಸಲಹೆಯನ್ನು ಇಂದು ಮುಖ್ಯಮಂತ್ರಿಗಳು ಸಾಮಾನ್ಯವಾಗಿ ವಿರೋಧಿಸಿದರು.

ಕೇಂದ್ರ ಹಣಕಾಸು ಸಚಿವ ಶ್ರೀ ಚವಾಣರು ಕರೆದಿರುವ ತಮ್ಮ ಒಂದು ದಿನದ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳು ಮಾತನಾಡಿ, ಕೃಷಿ ಆದಾಯ ತೆರಿಗೆ ವಿಧಿಸುವ ತತ್ವವನ್ನು ಬಹುಮಟ್ಟಿಗೆ ಒಪ್ಪಿದರೂ ಅದರ ಅಧಿಕಾರವನ್ನು ರಾಜ್ಯಗಳಿಗ ಬಿಡುವಂತೆ ಅಪೇಕ್ಷೆ ವ್ಯಕ್ತಪಡಿಸಿದರೆಂದು ಗೊತ್ತಾಗಿದೆ.

ತಜ್ಞ ಸಮಿತಿಯ ಅಧ್ಯಯನಕ್ಕೆ

ನವದೆಹಲಿ, ಅ. 12– ಆದಾಯ ತೆರಿಗೆ ವಿಧಿಸುವಾಗ ಕೃಷಿ ವರಮಾನ ಸೇರಿಸಬೇಕೆಂಬ ಕೇಂದ್ರ ಸರ್ಕಾರದ ಸಲಹೆಯ ಎಲ್ಲ ರೀತಿಯ ಸಾಧಕ–ಬಾಧಕಗಳನ್ನೂ ಕೂಲಂಕಷವಾಗಿ ತಜ್ಞರ ಸಮಿತಿಯೊಂದು ಪರಿಶೀಲಿಸ
ಬೇಕೆಂದು ಮುಖ್ಯಮಂತ್ರಿಗಳ ಸಮ್ಮೇಳನ ಇಂದು ನಿರ್ಧರಿಸಿತು.

ಆದಾಯ ತೆರಿಗೆಯೊಡನೆ ಕೃಷಿ ಆದಾಯದ ತೆರಿಗೆಯನ್ನು ವಿಲೀನಗೊಳಿಸಿದರೆ ರಾಜ್ಯಗಳ ಆದಾಯದ ಸಂಪನ್ಮೂಲಗಳು ಕುಗ್ಗುವುದರ ಜೊತೆಗೆ ಅಂತಹ ಕ್ರಮವು ತಮ್ಮ ಸ್ವಾಯತ್ತತೆಯನ್ನು ಅತಿಕ್ರಮಿಸುವುದರಿಂದ ಆ ಸಂಬಂಧದ ಕೇಂದ್ರದ ಸಲಹೆಯನ್ನು ಇಂದು ಮುಖ್ಯಮಂತ್ರಿಗಳು ಸಾಮಾನ್ಯವಾಗಿ ವಿರೋಧಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT