ಕಾಬೂಲ್: ಇಲ್ಲಿನ ಜನಪ್ರಿಯ ಹೋಟೆಲ್ ಸೆರೆನಾ ಸೇರಿದಂತೆ, ಅದರ ಸುತ್ತಮುತ್ತಲಿರುವ ಯಾವುದೇ ಐಷಾರಾಮಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಮಾಡದಂತೆ ಅಮೆರಿಕ ಮತ್ತು ಬ್ರಿಟನ್ ಸೋಮವಾರ ತಮ್ಮ ಪ್ರಜೆಗಳನ್ನು ಎಚ್ಚರಿಸಿದೆ.

ಭದ್ರತಾ ಬೆದರಿಕೆಗಳಿರುವ ಹಿನ್ನೆಲೆಯಲ್ಲಿ, ಸೆರೆನಾ ಅಥವಾ ಅದರ ಸಮೀಪವಿರುವ ಹೋಟೆಲ್‌ಗಳಲ್ಲಿ ನೆಲೆಸಿರುವ ಅಮೆರಿಕ ಪ್ರಜೆಗಳು ತಕ್ಷಣವೇ ಅಲ್ಲಿಂದ ನಿರ್ಗಮಿಸುವಂತೆ ಅಮೆರಿಕ ಸರ್ಕಾರ ತಿಳಿಸಿದೆ.

ಓದಿ: ಜಮ್ಮು ಕಾಶ್ಮೀರದಲ್ಲಿ ನಾಗರಿಕರನ್ನು ಕೊಂದಿದ್ದ ಉಗ್ರ ಭದ್ರತಾ ಪಡೆಗಳಿಗೆ ಬಲಿ

ಬ್ರಿಟನ್ ವಿದೇಶಾಂಗ ಸಚಿವಾಲಯ ಅಫ್ಗಾನಿಸ್ತಾನಕ್ಕೆ ಹೋಗದಂತೆ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ. ಹೆಚ್ಚಿನ ಅಪಾಯಗಳ ಮುನ್ಸೂಚನೆಯ ಹಿನ್ನೆಲೆಯಲ್ಲಿ, ಕಾಬೂಲ್‌ನಲ್ಲಿರುವ (ಸೆರೆನಾ ಹೋಟೆಲ್‌ನಂತಹ) ಹೋಟೆಲ್‌ಗಳಲ್ಲಿ ಉಳಿಯದಂತೆಯೂ ಸಲಹೆ ನೀಡಿದೆ.

ಸೆರೆನಾ, ಕಾಬೂಲ್‌ನಲ್ಲಿರುವ ಜನಪ್ರಿಯ ಐಶಾರಾಮಿ ಹೋಟೆಲ್ ಆಗಿದ್ದು, ಅಫ್ಗಾನಿಸ್ತಾನ ತಾಲಿಬಾನರ ಕೈವಶವಾಗುವ ಮುನ್ನ, ಇದೇ ಹೋಟೆಲ್‌ನಲ್ಲೇ ಹೆಚ್ಚು ವಿದೇಶಿಯರು ವಾಸ್ತವ್ಯ ಮಾಡುತ್ತಿದ್ದರು. ಇತ್ತೀಚೆಗೆ ಎರಡು ಬಾರಿ ಈ ಹೋಟೆಲ್ ಭಯೋತ್ಪಾದಕರ ದಾಳಿಗೆ ಗುರಿಯಾಗಿದೆ.

ಇಸ್ಲಾಮಿಕ್ ಸ್ಟೇಟ್ ಉಗ್ರರು ಕಳೆದ ಶುಕ್ರವಾರ ಉತ್ತರ ಅಫ್ಗಾನಿಸ್ತಾನದ ಕುಂಡುಜ್‌ನ ಮಸೀದಿ ಮೇಲೆ ಆತ್ಮಾಹತ್ಯಾ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಅಮೆರಿಕ ಮತ್ತು ಬ್ರಿಟನ್ ಸರ್ಕಾರಗಳು ಈ ರೀತಿ ಪ್ರಜೆಗಳಿಗೆ ಸೂಚನೆ ನೀಡುತ್ತಿವೆ.

ಕಾಬೂಲ್‌ನ ಜನಪ್ರಿಯ ಹೋಟೆಲ್ ಸೆರೆನಾ ಸೇರಿದಂತೆ, ಅದರ ಸುತ್ತಮುತ್ತಲಿರುವ ಯಾವುದೇ ಐಶಾರಾಮಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಮಾಡದಂತೆ ಅಮೆರಿಕ ಮತ್ತು ಬ್ರಿಟನ್ ಸೋಮವಾರ ತಮ್ಮ ಪ್ರಜೆಗಳನ್ನು ಎಚ್ಚರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.