ರಷ್ಯಾದ ವೊರೊನೆಜ್ ನಗರದಲ್ಲಿ ಕೋವಿಡ್ ಪೀಡಿತರಿಗಾಗಿ ಆಮ್ಲಜನಕ ಪೂರೈಕೆಯನ್ನು ವ್ಯವಸ್ಥಿತವಾಗಿಡುವ ಉದ್ದೇಶದಿಂದ ಮಾಸಾಂತ್ಯದವರೆಗೆ ರಾಕೆಟ್ ಎಂಜಿನ್‌ಗಳ ಪರೀಕ್ಷಾರ್ಥ ಪ್ರಯೋಗವನ್ನು ತಾತ್ಕಾಲಿಕವಾಗಿ ಕೈಬಿಡಲು ರಷ್ಯಾ ನಿರ್ಧರಿಸಿದೆ.
ಹಿರಿಯ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ರಷ್ಯಾದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಶನಿವಾರ ಗಣನೀಯ ಸಂಖ್ಯೆಯಲ್ಲಿ ಸಾವು ದಾಖಲಾಗಿದ್ದು, ಕೋವಿಡ್ ಪಿಡುಗು ಕಾಣಿಸಿಕೊಂಡ ನಂತರ ಇದು ಅತ್ಯಧಿಕ ಸಂಖ್ಯೆಯ ಪ್ರಕರಣವಾಗಿದೆ.