×
ADVERTISEMENT
ಈ ಕ್ಷಣ :
ADVERTISEMENT

5ಜಿ ವಿವಾದ: ಅಮೆರಿಕಕ್ಕೆ ಹಲವು ವಿಮಾನಗಳ ಯಾನ ರದ್ದು

Published : 19 ಜನವರಿ 2022, 15:32 IST
ಫಾಲೋ ಮಾಡಿ
Comments

ದುಬೈ: ಮೊಬೈಲ್‌ಗಳಲ್ಲಿ ಬಳಸುವ 5ಜಿ ಸೇವೆಯಿಂದ ಅಮೆರಿಕದ ವಿಮಾನ ನಿಲ್ದಾಣಗಳ ವ್ಯಾಪ್ತಿಯಲ್ಲಿ ವಿಮಾನಗಳ ತಂತ್ರಜ್ಞಾನಕ್ಕೆ ತೊಡಕಾಗಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ತೆರಳಬೇಕಾದ ಹಲವು ವಿಮಾನ ಸೇವೆಗಳನ್ನು ಬುಧವಾರ ರದ್ದುಪಡಿಸಲಾಗಿದೆ ಇಲ್ಲವೇ ಬದಲಿ ವಿಮಾನಗಳನ್ನು ಕಳುಹಿಸಿಕೊಡಲಾಗಿದೆ.‌

ಅಮೆರಿಕದ ಫೆಡರಲ್‌ ಏವಿಯೇಷನ್‌ ಅಡ್ಮಿನಿಸ್ಟ್ರೇಷನ್‌ 5ಜಿ ತರಂಗಾಂತರ ಬಳಸುತ್ತಿರುವ ವಿಮಾನನಿಲ್ದಾಣಗಳಿಗೆ ತೆರಳುವುದಕ್ಕೆ ಹಲವು ವಿಮಾನಗಳಿಗೆ ಅನುಮತಿ ನೀಡಿದೆ. ಆದರೆ ಬೋಯಿಂಗ್‌ 777 ವಿಮಾನಗಳು ಈ ಪಟ್ಟಿಯಲ್ಲಿ ಇಲ್ಲ. ಇದುವೇ ಸಮಸ್ಯೆಯ ಮೂಲವಾಗಿದ್ದು, ಹೀಗಾಗಿ ಎಮಿರೇಟ್ಸ್‌ ಸಂಸ್ಥೆಗೆ ಬಹಳ ದೊಡ್ಡ ಕಷ್ಟ ಎದುರಾಗಿದೆ. ಎಮಿರೇಟ್ಸ್‌ ಸಂಸ್ಥೆ ಹೆಚ್ಚಾಗಿ ಬೋಯಿಂಗ್‌ 777 ವಿಮಾನವನ್ನೇ ಬಳಸುತ್ತಿರುವುದರಿಂದ ವಿಮಾನಯಾನ ಸೇವೆಗೆ ಧಕ್ಕೆ ಉಂಟಾಗುವಂತಾಗಿದೆ.

ಸಮಸ್ಯೆಯ ಗಂಭೀರತೆ ಅರಿತ ಎಟಿ ಆ್ಯಂಡ್‌ ಟಿ ಮತ್ತು ವರಿಝಾನ್‌ ಮೊಬೈಲ್‌ ಫೋನ್‌ ಕಂಪನಿಗಳು ಅಮೆರಿಕದ ವಿಮಾನನಿಲ್ಧಾಣಗಳ ಸಮೀಪದ ತಮ್ಮ ಹೊಸ 5ಜಿ ವೈರ್‌ಲೆಸ್‌ ಸೇವೆ ನೀಡಿಕೆಯನ್ನು ಮುಂದೂಡಿವೆ.

ಸಮಸ್ಯೆ ಎಲ್ಲಿ?: 5ಜಿ ಮೊಬೈಲ್ ಬಳಸುವುದು ರೇಡಿಯೊ ತರಂಗಾಂತರವನ್ನು. ಇದಕ್ಕೆ ರೇಡಿಯೊ ಆಲ್ಟಿಮೀಟರ್‌ ಬಳಸಲಾಗುತ್ತದೆ. ಇದೇ ಸಾಧನವು ಕಡಿಮೆ ಬೆಳಕಿನಲ್ಲೂ ವಿಮಾನವನ್ನು ಇಳಿಸುವುದಕ್ಕೆ ಪೈಲಟ್‌ಗಳಿಗೆ ನೆರವಾಗುತ್ತದೆ. ಮೊಬೈಲ್‌ ವೈರ್‌ಲೆಸ್‌ ಮತ್ತು ವಿಮಾನದಲ್ಲಿನ ತಂತ್ರಜ್ಞಾನಗಳು ಒಂದಕ್ಕೊಂದು ಅಡ್ಡಿ ಉಂಟುಮಾಡಿ ವಿಮಾನ ಹಾರಾಟಕ್ಕೆ ತೊಂದರೆಯಾಗಬಹುದು ಎಂಬ ಭೀತಿಯೇ ಸಮಸ್ಯೆಯ ಮೂಲವಾಗಿದೆ.

ಮೊಬೈಲ್‌ಗಳಲ್ಲಿ ಬಳಸುವ 5ಜಿ ಸೇವೆಯಿಂದ ವಿಮಾನಗಳ ತಂತ್ರಜ್ಞಾನಕ್ಕೆ ತೊಡಕಾಗಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ತೆರಳಬೇಕಾದ ಹಲವು ವಿಮಾನ ಸೇವೆಗಳನ್ನು ಬುಧವಾರ ರದ್ದುಪಡಿಸಲಾಗಿದೆ ಇಲ್ಲವೇ ಬದಲಿ ವಿಮಾನಗಳನ್ನು ಕಳುಹಿಸಿಕೊಡಲಾಗಿದೆ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT