×
ADVERTISEMENT
ಈ ಕ್ಷಣ :
ADVERTISEMENT

ಟೊಂಗಾ ವಿಮಾನ ನಿಲ್ದಾಣದ ಬೂದಿ ತೆರವು; ಆಗಮಿಸಿದ ಪರಿಹಾರ ವಿಮಾನ

Published : 20 ಜನವರಿ 2022, 15:04 IST
ಫಾಲೋ ಮಾಡಿ
Comments

ವೆಲ್ಲಿಂಗ್ಟನ್‌: ಪೆಸಿಫಿಕ್‌ ಸಮುದ್ರದಲ್ಲಿ ಜ್ವಾಲಾಮುಖಿ ಸ್ಫೋಟಿಸಿ ಟೊಂಗಾ ದ್ವೀಪದ ಫುಅಅಮೊಟೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ರನ್‌ವೇಯಲ್ಲಿ ತುಂಬಿದ್ದ ಬೂದಿಯನ್ನು ಗುರುವಾರ ತೆರವುಗೊಳಿಸಲಾಗಿದ್ದು, ನ್ಯೂಜಿಲೆಂಡ್‌ ಕಳುಹಿಸಿಕೊಟ್ಟ ಪರಿಹಾರ ಸಾಮಗ್ರಿ ಹೊತ್ತು ವಿಮಾನ ಅಲ್ಲಿ ಇಳಿದಿದೆ.

ಆಸ್ಟ್ರೇಲಿಯಾ ಸಹ ಪರಿಹಾರ ಸಾಮಗ್ರಿ ಹೊತ್ತ ವಿಮಾನ ಕಳುಹಿಸಿಕೊಟ್ಟಿದೆ. ನ್ಯೂಜಿಲೆಂಡ್‌ ಒಂದು ನೌಕಾಪಡೆ ಯುದ್ಧನೌಕೆಯನ್ನು ಸಹ ಟೊಂಗಾಗೆ ಕಳುಹಿಸಿಕೊಟ್ಟಿದೆ.

ಸುನಾಮಿಯಿಂದಾಗಿ ಟೊಂಗಾ ದ್ವೀಪದ 84 ಸಾವಿರಕ್ಕೂ ಅಧಿಕ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಹಾರ ಸಾಮಗ್ರಿಗಳ ಜತೆ ಕೋವಿಡ್ ಸೋಂಕು ಸಹ ದ್ವೀಪವನ್ನು ಪ್ರವೇಶಿಸದಂತೆ ನೋಡಿಕೊಳ್ಳಲು ಎಚ್ಚರ ವಹಿಸಲಾಗಿದೆ.

ಪೆಸಿಫಿಕ್‌ ಸಮುದ್ರದಲ್ಲಿ ಜ್ವಾಲಾಮುಖಿ ಸ್ಫೋಟಿಸಿ ಟೊಂಗಾ ದ್ವೀಪದ ಫುಅಅಮೊಟೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ರನ್‌ವೇಯಲ್ಲಿ ತುಂಬಿದ್ದ ಬೂದಿಯನ್ನು ಗುರುವಾರ ತೆರವುಗೊಳಿಸಲಾಗಿದ್ದು, ನ್ಯೂಜಿಲೆಂಡ್‌ ಕಳುಹಿಸಿಕೊಟ್ಟ ಪರಿಹಾರ ಸಾಮಗ್ರಿ ಹೊತ್ತು ವಿಮಾನ ಅಲ್ಲಿ ಇಳಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT