ನಾರಾಯಣ ಗುರು, ಸುಭಾಷ್ ಚಂದ್ರ ಬೋಸ್ ಇಲ್ಲವೇ ಚಿದಂಬರನ್ ಅವರ ಬಗ್ಗೆ ಸೈದ್ಧಾಂತಿಕ ಇಲ್ಲವೇ ಬೇರೆ ಕಾರಣಗಳ ವಿರೋಧವಿದ್ದರೆ @BJP4India ಧೈರ್ಯದಿಂದ ಅದನ್ನು ವ್ಯಕ್ತಪಡಿಸಬೇಕು. ಇದರ ಬದಲಿಗೆ ತನ್ನ ಸೈದ್ಧಾಂತಿಕ ವಿರೋಧವನ್ನು ಬಚ್ಚಿಟ್ಟುಕೊಂಡು ತಾಂತ್ರಿಕ ಕಾರಣ ನೀಡಿ ತಿಪ್ಪೆ ಸಾರಿಸುವ ಕೆಲಸ ಮಾಡಬಾರದು.
— Siddaramaiah (@siddaramaiah) January 19, 2022
9/10#Insult_to_NarayanaGuru pic.twitter.com/K84Lb7TRKi
ನಾರಾಯಣ ಗುರು, ಸುಭಾಷ್ ಚಂದ್ರ ಬೋಸ್ ಮಾತ್ರವಲ್ಲ, ಬುದ್ಧ, ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಕನಕ, ಕಬೀರ ಸೇರಿದಂತೆ ಈ ನೆಲದ ನಿಜ ಸಮಾಜ ಸುಧಾರಕರನ್ನು ಕೋಮುವಾದಿ-ಜಾತಿವಾದಿ @BJP4India ಅಂತರಂಗದಲ್ಲಿ ದ್ವೇಷಿಸುತ್ತದೆ, ಬಹಿರಂಗವಾಗಿ ಕೊಂಡಾಡುತ್ತಾ ನಾಟಕವಾಡುತ್ತದೆ. ಈ ಆತ್ಮವಂಚನೆಯನ್ನು ನಿಲ್ಲಿಸಿ.
— Siddaramaiah (@siddaramaiah) January 19, 2022
10/10#Insult_to_NarayanaGuru pic.twitter.com/ApW3ngR6Ey
ಕೇರಳ ರಾಜ್ಯದಲ್ಲಿ ಇಲ್ಲಿಯ ವರೆಗೆ ಭಾರತೀಯ ಜನತಾ ಪಕ್ಷಕ್ಕೆ ನೆಲೆ ಊರಲು ಸಾಧ್ಯವಾಗದಿರುವುದು ಮತ್ತು ನಾರಾಯಣ ಗುರುಗಳ ಅನುಯಾಯಿಗಳೇ ಬಹುಸಂಖ್ಯೆಯಲ್ಲಿರುವ ಆ ರಾಜ್ಯದ ಜನ ಸತತವಾಗಿ @BJP4India ಅನ್ನು ತಿರಸ್ಕರಿಸುತ್ತಾ ಬಂದಿರುವುದು ನಾರಾಯಣ ಗುರುಗಳ ಬಗ್ಗೆ ಬಿಜೆಪಿಯ ಪೂರ್ವಾಗ್ರಹಕ್ಕೆ ಕಾರಣ ಇರಬಹುದೇ?
— Siddaramaiah (@siddaramaiah) January 19, 2022
8/10#Insult_to_NarayanaGuru
ಕೇರಳದ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಮಾತ್ರವಲ್ಲ, ಪಶ್ಚಿಮ ಬಂಗಾಳದ ಸುಭಾಷ್ ಚಂದ್ರ ಬೋಸ್ ಸ್ತಬ್ಧ ಚಿತ್ರ ಮತ್ತು ತಮಿಳುನಾಡಿನ ಸ್ವಾತಂತ್ರ್ಯ ಹೋರಾಟಗಾರ ಚಿದಂಬರನರ್ ಸ್ತಬ್ಧ ಚಿತ್ರಗಳನ್ನು ತಿರಸ್ಕರಿಸಲಾಗಿದೆ. ತಿರಸ್ಕೃತ ಮೂರೂ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳ ಸರ್ಕಾರ ಇರುವುದು ಕೇವಲ ಕಾಕತಾಳಿಯ ಎನ್ನುವುದನ್ನು ನಂಬಬಹುದೇ?
— Siddaramaiah (@siddaramaiah) January 19, 2022
7/10
ಶಂಕರಾಚಾರ್ಯರ ಪ್ರತಿಕೃತಿಯ ಸ್ತಬ್ಧ ಚಿತ್ರಕ್ಕೆ ವೈಯಕ್ತಿಕವಾಗಿ ನನ್ನ ವಿರೋಧ ಇಲ್ಲ. ಆದರೆ ಜಾತಿ ಮತ್ತು ಕೋಮು ಸಾಮರಸ್ಯವನ್ನು ಕಾಪಾಡಿಕೊಂಡು ಹೋಗಬೇಕಾದ ಕೇಂದ್ರ @BJP4India ಸರ್ಕಾರ, ಅನಗತ್ಯವಾಗಿ ಶಂಕರಾಚಾರ್ಯರ ಎದುರಿಗೆ ನಾರಾಯಣ ಗುರುಗಳನ್ನು ನಿಲ್ಲಿಸಿ ಇಬ್ಬರು ಮಹಾಪುರುಷರ ಅನುಯಾಯಿಗಳ ನಡುವೆ ಜಗಳ ತಂದುಹಾಕುವ ಅಗತ್ಯ ಏನಿತ್ತು?
— Siddaramaiah (@siddaramaiah) January 19, 2022
6/10
ಕೇರಳ ಸರ್ಕಾರ ಪ್ರಸ್ತುತ ಪಡಿಸಿದ್ದ ಜಟಾಯು ಸ್ತಬ್ದಚಿತ್ರಕ್ಕೆ ಒಪ್ಪಿಗೆ ನೀಡದೆ, ಅದರ ಮುಂದೆ ಶಂಕರಾಚಾರ್ಯರ ಪ್ರತಿಕೃತಿಯನ್ನು ಕೂರಿಸುವಂತೆ ಕೇಂದ್ರ ಸರ್ಕಾರ ಒತ್ತಡ ಹೇರಲು ಕಾರಣ ಏನು? ಕೇರಳ ಸರ್ಕಾರ ಸೂಚಿಸಿದ ನಾರಾಯಣ ಗುರುಗಳ ಪ್ರತಿಕೃತಿಯನ್ನು ನಿರಾಕರಿಸಲು ಕಾರಣ ಏನು? ಕೇಂದ್ರ @BJP4India ಸರ್ಕಾರ ಇದನ್ನು ಸ್ಪಷ್ಟಪಡಿಸಬೇಕು.
— Siddaramaiah (@siddaramaiah) January 19, 2022
5/10 pic.twitter.com/bLi75zIcFQ
ಗಣರಾಜ್ಯೋತ್ಸವ ಸ್ತಬ್ದಚಿತ್ರಕ್ಕೆ 3 ವರ್ಷಗಳಿಗೊಮ್ಮೆ ಮಾತ್ರ ರಾಜ್ಯಗಳಿಗೆ ಅವಕಾಶ ಎಂದಾದರೆ ನಮ್ಮ ಕರ್ನಾಟಕಕ್ಕೆ ಸತತ 13ನೇ ಬಾರಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಹೇಗೆ ನೀಡಲಾಯಿತು? ಎನ್ನುವುದನ್ನು ಸಚಿವರಾದ ಶ್ರೀನಿವಾಸ ಪೂಜಾರಿ ಮತ್ತು ಸುನೀಲ್ ಕುಮಾರ್ ತಿಳಿಸಬೇಕು.
— Siddaramaiah (@siddaramaiah) January 19, 2022
ಇಂತಹ ಹಸಿ ಸುಳ್ಳುಗಳು ಸಚಿವರಿಗೆ ಶೋಭೆ ತರುವುದಿಲ್ಲ.
4/10 pic.twitter.com/CTDxbpVc5l
ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯದ ಸಚಿವರಾದ @karkalasunil ಮತ್ತು ಕೋಟ ಶ್ರೀನಿವಾಸ ಪೂಜಾರಿ ಮತ್ತು @BJP4Karnataka ನಾಯಕರು ತರಹೇವಾರಿ ಹೇಳಿಕೆಗಳ ಮೂಲಕ ಬಿಜೆಪಿ ಎನ್ನುವುದು ಸುಳ್ಳುಗಳ ಕಾರ್ಖಾನೆ ಎಂದು ಸಾಬೀತುಪಡಿಸುತ್ತಿದ್ದಾರೆ.1/10#Insult_to_NarayanaGuru pic.twitter.com/vBkHYrMQR8
— Siddaramaiah (@siddaramaiah) January 19, 2022
ಕೇರಳ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಟ್ಯಾಬ್ಲೊಗಳಿಗೆ ಗಣರಾಜ್ಯೋತ್ಸವ ಪರೇಡ್ನಲ್ಲಿ ಅವಕಾಶ ನಿರಾಕರಿಸಿರುವುದು ಮತ್ತು ಆ ಕುರಿತು ಬಿಜೆಪಿ ನಾಯಕರು ನೀಡಿರುವ ಸ್ಪಷ್ಟನೆಗಳ ಬಗ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.