ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪೀಡಿತರಾಗುವ ಮಕ್ಕಳ ಸಂಖ್ಯೆಯೂ ಹೆಚ್ಚಳವಾಗುತ್ತಿದ್ದು, 17 ದಿನಗಳಲ್ಲಿ 18ರೊಳಗಿನ ವಯೋಮಾನದ 43,463 ಜನ ಕೋವಿಡ್ ಪೀಡಿತರಾಗಿದ್ದಾರೆ.

ರಾಜ್ಯದಲ್ಲಿ ವರದಿಯಾದ ಕೋವಿಡ್ ಪ್ರಕರಣಗಳನ್ನು ಕೋವಿಡ್ ವಾರ್ ರೂಮ್ ವಿಶ್ಲೇಷಣೆಗೆ ಒಳಪಡಿಸಿದೆ. 2022ರ ಜ.1ರಿಂದ ಜ.17ರ ಅವಧಿಯಲ್ಲಿ 18 ವರ್ಷದೊಳಗಿನ 7,64,198 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇವರಲ್ಲಿ ಸೋಂಕು ದೃಢ ಪ್ರಮಾಣ ಶೇ 5.69 ರಷ್ಟಿದೆ. ಈ ಪ್ರಮಾಣ 19 ವರ್ಷಗಳು ಮೇಲ್ಪಟ್ಟವರಲ್ಲಿ ಶೇ 13.31 ರಷ್ಟಕ್ಕೆ ಏರಿಕೆಯಾಗಿದೆ. ಈ ವಯೋಮಾನದವರಲ್ಲಿ 21.26 ಲಕ್ಷ ಮಂದಿಗೆ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದ್ದು, 2.83 ಲಕ್ಷ ಮಂದಿ ಸೋಂಕಿತರಾಗಿದ್ದಾರೆ.

ಮಕ್ಕಳಲ್ಲಿನ ಸೋಂಕು ದೃಢ ಪ್ರಮಾಣ ಎರಡನೇ ಅಲೆಗೆ ಹೋಲಿಸಿದರೆ ಈಗ ಕಡಿಮೆ ಪ್ರಮಾಣದಲ್ಲಿ ಇದೆ. 2021ರ ಏಪ್ರಿಲ್‌ನಲ್ಲಿ 18 ವರ್ಷದೊಳಗಿನ 6.50 ಲಕ್ಷ ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಅವರಲ್ಲಿ 57,442 ಮಂದಿ ಸೋಂಕಿತರಾಗಿದ್ದರು. ದೃಢ ಪ್ರಮಾಣ ಶೇ 8.82 ರಷ್ಟು ವರದಿಯಾಗಿತ್ತು. 2021ರ ಮೇ ತಿಂಗಳಲ್ಲಿ ಈ ಪ್ರಮಾಣ ಶೇ 24.61ಕ್ಕೆ ತಲುಪಿತ್ತು. 4.11 ಲಕ್ಷ ಮಂದಿಗೆ ನಡೆಸಲಾದ ಪರೀಕ್ಷೆಯಲ್ಲಿ 1.01 ಲಕ್ಷ ಮಂದಿ ಕೋವಿಡ್ ಪೀಡಿತರಾಗಿದ್ದರು. ಡಿಸೆಂಬರ್ ಅಂತ್ಯಕ್ಕೆ ದೃಢ ಪ್ರಮಾಣ ಶೇ 0.22ಕ್ಕೆ ಇಳಿಕೆಯಾಗಿತ್ತು. 10.37 ಲಕ್ಷ ಮಂದಿಗೆ ನಡೆಸಲಾದ ಪರೀಕ್ಷೆಯಲ್ಲಿ 2,238 ಮಂದಿ ಸೋಂಕಿತರಾಗಿದ್ದರು.

19 ವರ್ಷಗಳು ಮೇಲ್ಪಟ್ಟವರಲ್ಲಿನ ಸೋಂಕು ದೃಢ ಪ್ರಮಾಣ 2021ರ ಮೇ ತಿಂಗಳಲ್ಲಿ ಶೇ 26.68 ರಷ್ಟಿತ್ತು. 35.49 ಲಕ್ಷ ಮಂದಿಗೆ ನಡೆಸಲಾದ ಪರೀಕ್ಷೆಯಲ್ಲಿ 9.47 ಲಕ್ಷ ಮಂದಿ ಕೋವಿಡ್ ಪೀಡಿತರಾಗಿದ್ದರು. ನವೆಂಬರ್ ತಿಂಗಳಲ್ಲಿ ಈ ಪ್ರಮಾಣ ಶೇ 0.39ಕ್ಕೆ ಇಳಿಕೆಯಾಗಿತ್ತು. ಈ ಪ್ರಮಾಣ ಈಗ ಏರುಗತಿ ಪಡೆದುಕೊಂಡಿದೆ.

ರಾಜ್ಯದಲ್ಲಿ ಕೋವಿಡ್ ಪೀಡಿತರಾಗುವ ಮಕ್ಕಳ ಸಂಖ್ಯೆಯೂ ಹೆಚ್ಚಳವಾಗುತ್ತಿದ್ದು, 17 ದಿನಗಳಲ್ಲಿ 18ರೊಳಗಿನ ವಯೋಮಾನದ 43,463 ಜನ ಕೋವಿಡ್ ಪೀಡಿತರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.