×
ADVERTISEMENT
ಈ ಕ್ಷಣ :
ADVERTISEMENT

ಉತ್ತರಾಖಂಡ: ಸಾರಿಗೆ ಸಚಿವ ಯಶ್‌ಪಾಲ್ ಬಿಜೆಪಿಗೆ ರಾಜೀನಾಮೆ, ಕಾಂಗ್ರೆಸ್ ಸೇರ್ಪಡೆ

Published : 11 ಅಕ್ಟೋಬರ್ 2021, 8:53 IST
ಫಾಲೋ ಮಾಡಿ
Comments

ನವದೆಹಲಿ: ಉತ್ತರಾಖಂಡ ಸಾರಿಗೆ ಸಚಿವ ಯಶ್‌ಪಾಲ್‌ ಆರ್ಯ ಅವರು ಸೋಮವಾರ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದರು.  ತಮ್ಮ ಪುತ್ರ ಸಂಜೀವ್‌ ಅವರೊಂದಿಗೆ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 

ಶಾಸಕರಾಗಿರುವ ಸಂಜೀವ್‌ ಆರ್ಯ ನೈನಿತಾಲ್‌ ಕ್ಷೇತ್ರ ಪ್ರತಿನಿಧಿಸುತ್ತಾರೆ. ಮುಂದಿನ ವರ್ಷ ನಡೆಯಲಿರುವ  ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಮುಖ ನಾಯಕರ ನಿರ್ಗಮನದ ಮೂಲಕ ಬಿಜೆಪಿ ದೊಡ್ಡ ಆಘಾತವೊಂದು ಎದುರಾದಂತಾಗಿದೆ.

ನವದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರಾದ ಹರೀಶ್‌ ರಾವತ್‌, ಕೆ.ಸಿ.ವೇಣುಗೋಪಾಲ್‌ ಮತ್ತು ರಣದೀಪ್‌ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಯಶ್‌ಪಾಲ್‌ ಆರ್ಯ ಮತ್ತು ಶಾಸಕ ಸಂಜೀವ್‌ ಕಾಂಗ್ರೆಸ್‌ಗೆ ಸೇರಿದರು.  

ಇದಕ್ಕೂ ಮೊದಲು ಯಶ್‌ಪಾಲ್‌ ಅವರು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. 

ಅವರು 2007 ರಿಂದ 2014 ರವರೆಗೆ  ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಾಜಿ ಸ್ಪೀಕರ್ ಮತ್ತು ಸಚಿವರಾಗಿದ್ದರು. 2017ರಲ್ಲಿ  ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದರು.  ರಾಜ್ಯದ ಮುಕ್ತೇಶ್ವರ ಕ್ಷೇತ್ರವನ್ನು ಯಶ್‌ಪಾಲ್‌ ಪ್ರತಿನಿಧಿಸುತ್ತಾರೆ. 

ಉತ್ತರಾಖಂಡ ಸಾರಿಗೆ ಸಚಿವ ಯಶ್‌ಪಾಲ್‌ ಆರ್ಯ ಅವರು ಸೋಮವಾರ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದರು. ಬಳಿಕ ತಮ್ಮ ಪುತ್ರ ಶಾಸಕ ಸಂಜೀವ್‌ ಅವರೊಂದಿಗೆ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT