ಮುಂಬೈ: ಜನಸಂಖ್ಯಾ ಸ್ಫೋಟ ನಿಯಂತ್ರಣಕ್ಕೆ ಸರ್ಕಾರ ಕಾನೂನು ತರಬೇಕು. ಇದನ್ನು ಪ್ರತಿಯೊಬ್ಬರೂ ಸ್ವೀಕರಿಸುತ್ತಾರೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಗಪುರದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಜಯ ದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ರಾಷ್ಟ್ರದ ಅಭಿವೃದ್ಧಿಗೆ ತೊಡಕಾಗಿರುವುದು ವೇಗವಾಗಿ ವೃದ್ಧಿಸುತ್ತಿರುವ ಜನಸಂಖ್ಯೆ. ಇದರ ಬಗ್ಗೆ ಹಲವರು ಕಳವಳಗೊಂಡಿದ್ದಾರೆ. ಜನಸಂಖ್ಯೆ ವೃದ್ಧಿಯಿಂದ ಸಾಕಷ್ಟು ಸಮಸ್ಯೆಗಳು ಭವಿಷ್ಯದಲ್ಲಿ ಎದುರಾಗಲಿವೆ. ಹಾಗಾಗಿ ಸಮಯೋಚಿತವಾಗಿ ಜನಸಂಖ್ಯೆ ನಿಯಂತ್ರಣದ ಸವಾಲು ತೆಗೆದುಕೊಳ್ಳಬೇಕಿದೆ ಎಂದರು.

ಈ ವಿಚಾರಕ್ಕೆ ಸಂಬಂಧಿಸಿ 2015ರಲ್ಲಿ ರಾಂಚಿಯಲ್ಲಿ ನಡೆದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲದಲ್ಲಿ ತೆಗೆದುಕೊಂಡ ದೃಢಸಂಕಲ್ಪವನ್ನು ಪುನರುಚ್ಚರಿಸಿದರು.

ಜನರಲ್ಲಿ ಭಯ ಮೂಡಿಸಲು ಹತ್ಯೆಯನ್ನು ಗುರಿಯಾಗಿಸಿಕೊಂಡ ಉಗ್ರರು: ಮೋಹನ್ ಭಾಗವತ್

ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ವವ್ಯಾಪಿ ಮತ್ತು ಪರಿಣಾಮಕಾರಿ ಕಾನೂನುಗಳನ್ನು ಅನುಷ್ಠಾನಕ್ಕೆ ತರಬೇಕು. ಸರ್ವರಿಗೂ ಅರಿವು ಮೂಡಿಸಬೇಕು. ತಾರತಮ್ಯವಿಲ್ಲದೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಭಾಗವತ್ ಹೇಳಿದರು.

ಮೂಲ ಹಿಂದುಗಳಿಗೆ ಕಿರುಕುಳ, ಅಪರಾಧ ಕೃತ್ಯಗಳ ಹೆಚ್ಚಳ ಮತ್ತು ಹುಟ್ಟಿದ ಊರನ್ನೇ ತೊರೆಯುವಂತಹ ಒತ್ತಡಗಳು ನಿರ್ಮಾಣಗೊಳ್ಳಲು ಅಸಮತೋಲನದ ಜನಸಂಖ್ಯಾ ವೃದ್ಧಿ ಕಾರಣ.

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಂದರ್ಭ ಹಿಂಸಾಕೃತ್ಯಗಳು ಸ್ಫೋಟಗೊಳ್ಳಲು ಮತ್ತು ಅಲ್ಲಿನ ಹಿಂದುಗಳಲ್ಲಿ ದಯಾನಿಯ ಪರಿಸ್ಥಿತಿ ನಿರ್ಮಾಣಗೊಳ್ಳಲು ಅಸಮತೋಲನದ ಜನಸಂಖ್ಯಾ ವೃದ್ಧಿ ಮತ್ತು ಅಲ್ಲಿನ ಸರ್ಕಾರದ ನಿರ್ಲಕ್ಷ್ಯ ಧೋರಣೆಗಳು ಕಾರಣ ಎಂದು ಭಾಗವತ್ ದೂರಿದ್ದಾರೆ.

ಹಸಿವು ಸೂಚ್ಯಂಕ: ಪಾಕ್, ಬಾಂಗ್ಲಾ, ನೇಪಾಳಕ್ಕಿಂತಲೂ ಕೆಳಗಿನ ಸ್ಥಾನದಲ್ಲಿ ಭಾರತ

ಜನಸಂಖ್ಯಾ ಸ್ಫೋಟ ನಿಯಂತ್ರಣಕ್ಕೆ ಸರ್ಕಾರ ಕಾನೂನು ತರಬೇಕು. ಇದನ್ನು ಪ್ರತಿಯೊಬ್ಬರೂ ಸ್ವೀಕರಿಸುತ್ತಾರೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.