ನವದೆಹಲಿ: ಈಶಾನ್ಯ ರಾಜ್ಯಗಳು ಭ್ರಷ್ಟಾಚಾರಕ್ಕೆ ಕುಖ್ಯಾತಿಯಾಗಿದ್ದ ಕಾಲವಿತ್ತು. ಆದರೆ ಈಗ ದೆಹಲಿಯಿಂದ ರವಾನಿಸಲಾದ ಹಣವನ್ನು ಸಂಪೂರ್ಣವಾಗಿ ಆ ಪ್ರದೇಶದ ಅಭಿವೃದ್ಧಿಗೆ ಬಳಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿಕೆ ನೀಡಿದ್ದಾರೆ.

ತ್ರಿಪುರಾ ರಾಜ್ಯೋತ್ಸವದ 50ನೇ ವರ್ಷಾಚರಣೆಯ ಪ್ರಯುಕ್ತ ಮಾತನಾಡಿದ ಅವರು, ತ್ವರಿತ ಅಭಿವೃದ್ಧಿಯನ್ನು ಖಾತ್ರಿಪಡಿಸಲು ದೆಹಲಿ ಹಾಗೂ ಈಶಾನ್ಯ ರಾಜ್ಯಗಳ ಅಂತರವನ್ನು ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಪರಿಕ್ಕರ್ ಮಗನಿಗೆ ಬಾಗಿಲು ಮುಚ್ಚಿದ ಬಿಜೆಪಿ: ಪಟ್ನೇಕರ್ಗೆ ಬಿಚೋಲಿಮ್ ಟಿಕೆಟ್

'ಲಕ್ಷ್ಯ ತ್ರಿಪುರಾ' ಎಂಬ ಯೋಜನೆಯಡಿ ಮುಂದಿನ 25 ವರ್ಷಗಳಲ್ಲಿ ತ್ರಿಪುರಾ ಅಭಿವೃದ್ಧಿ ಯೋಜನೆಯನ್ನು ರಚಿಸಲಾಗಿದೆ. ಮೂಲಸೌಕರ್ಯ ವೃದ್ಧಿ, ರಸ್ತೆ-ರೈಲು ಮಾರ್ಗಗಳ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ತ್ರಿಪುರಾದ ಕೊನೆಯ ರಾಜ, ಮಹಾರಾಜ ವೀರ ವೀಕ್ರಂ ಕಿಶೋರ್ ಮಾಣಿಕ್ಯ ಬಹದ್ದೂರ್ ಅವರು ವಿಭಜನೆಯ ನಂತರ ತ್ರಿಪುರಾವನ್ನು ಭಾರತಕ್ಕೆ ಸೇರಿಸಲು ನಿರ್ಧರಿಸಿದರು. ವಿಭಜನೆಯ ನಂತರ ಮುಸ್ಲಿಮ್ ನುಸುಳುಕೋರರು ತ್ರಿಪುರಾವನ್ನು ಪ್ರವೇಶಿಸುತ್ತಿದ್ದಾಗ, ಮಹಾರಾಣಿ ಕಾಂಚನಪ್ರವಾ ದೇವಿ ಅವರು ಅಂದಿನ ಕೇಂದ್ರ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸಂಪರ್ಕಿಸಿದ್ದರು. ಮಹಾರಾಜರ ಕೊಡುಗೆಯನ್ನು ಗೌರವಿಸಲು ಮೋದಿ ಸರ್ಕಾರವು ತನ್ನ ನೀತಿಯನ್ನು ಬದಲಾಯಿಸಿ ಅಗರ್ತಲಾ ವಿಮಾನ ನಿಲ್ದಾಣಕ್ಕೆ ಹೆಸರನ್ನು ಮರುನಾಮಕರಣ ಮಾಡಲಾಯಿತು ಎಂದು ಹೇಳಿದರು.

ಎರಡು ದಶಕಗಳ ಕಾಲ ತ್ರಿಪುರಾದಲ್ಲಿ ಆಡಳಿತ ನಡೆಸಿರುವ ಕಮ್ಯೂನಿಸ್ಟ್ ಸರ್ಕಾರದ ವಿರುದ್ಧವೂ ಅಮಿತ್ ಶಾ ವಾಗ್ದಾಳಿ ನಡೆಸಿದರು. ರಾಜಕೀಯ ವಿರೋಧಿಗಳ ವಿರುದ್ಧ ದಾಳಿ ಮಾಡುವುದು ಅವರ ಪ್ರಮುಖ ಅಜೆಂಡಾವಾಗಿತ್ತು. ತ್ರಿಪುರಾದಲ್ಲಿ ಕಮ್ಯೂನಿಸ್ಟ್ ಆಡಳಿತದ ಅವಧಿಯಲ್ಲಿ ಸುಮಾರು 450 ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಲಾಗಿದೆ. ಅವರಲ್ಲಿ ಕೆಲವರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದರು.

ಈಶಾನ್ಯ ರಾಜ್ಯಗಳು ಭಷ್ಟಾಚಾರಕ್ಕೆ ಕುಖ್ಯಾತಿಯಾಗಿದ್ದ ಕಾಲವಿತ್ತು. ಆದರೆ ಈಗ ದೆಹಲಿಯಿಂದ ರವಾನಿಸಲಾದ ಹಣವನ್ನು ಆ ಪ್ರದೇಶದ ಅಭಿವೃದ್ಧಿಗೆ ಸಂಪೂರ್ಣವಾಗಿ ಬಳಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.