ಶ್ರೀನಗರ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಕಾಶ್ಮೀರದ 16 ಸ್ಥಳಗಳಲ್ಲಿ ಭಾನುವಾರ ದಾಳಿ ನಡೆಸಿದ್ದಾರೆ. ಜಮ್ಮು–ಕಾಶ್ಮೀರ ಪೊಲೀಸರು ಹಾಗೂ ಸಿಆರ್ಪಿಎಫ್ ಯೋಧರು ಈ ಕಾರ್ಯಾಚರಣೆಗೆ ಭದ್ರತೆ ಒದಗಿಸಿದ್ದಾರೆ.

‘ಐಎಸ್ಐಎಸ್ ವಾಯ್ಸ್ ಆಫ್ ಹಿಂದ್’ ಹಾಗೂ ‘ಬಠಿಂಡಿ ಐಇಡಿ ವಶ’ ಪ್ರಕರಣಗಳಿಗೆ ಸಂಬಂಧಿಸಿ ಶ್ರೀನಗರ, ಅನಂತನಾಗ್, ಕುಲ್ಗಾಮ್, ಬಾರಾಮುಲ್ಲಾ ಹಾಗೂ ಸೊಪೋರ್ಗಳಲ್ಲಿ ಎನ್ಐಎ ಈ ಕಾರ್ಯಾಚರಣೆ ಕೈಗೊಂಡಿತ್ತು.

ಶಂಕಿತರ ಬಳಿ ಇದ್ದ ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ ಹಾಗೂ ಹಲವಾರು ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ದಿ ರೆಸಿಸ್ಟನ್ಸ್ ಫ್ರಂಟ್’ (ಟಿಆರ್ಎಫ್) ಸಂಘಟನೆಗೆ ಸಂಬಂಧಿಸಿದ ಸ್ಥಳಗಳ ಮೇಲೆ ಹಾಗೂ ಟಿಆರ್ಎಫ್ನ ಕಮಾಂಡರ್ ಸಜ್ಜಾದ್ ಗುಲ್ ಮನೆ ಮೇಲೂ ದಾಳಿ ನಡೆಸಲಾಗಿದೆ.

ಟಿಆರ್ಎಫ್ ಎಂಬುದು ಪಾಕಿಸ್ತಾನ ಮೂಲದ ಲಷ್ಕರ್–ಎ–ತಯಬಾದ ಘಟಕ ಎನ್ನಲಾಗಿದ್ದು, ಪಾಕಿಸ್ತಾನದಲ್ಲಿದ್ದುಕೊಂಡೇ ಸಜ್ಜಾದ್ ಗುಲ್ ಈ ಸಂಘಟನೆಯ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾನೆ ಎಂದು ಹೇಳಲಾಗಿದೆ.

ಭಾರತದ ವಿರುದ್ಧ ಯುದ್ಧ ಸಾರುವ ಸಲುವಾಗಿ ಐಎಸ್ಐಎಸ್ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದೆ ಎಂಬ ಆರೋಪಗಳಿವೆ. ಐಎಸ್ಐಎಸ್ನ ಈ ಪಿತೂರಿಯನ್ನು ‘ಐಎಸ್ಐಎಸ್ ವಾಯ್ಸ್ ಆಫ್ ಹಿಂದ್’ ಎನ್ನಲಾಗುತ್ತದೆ.

‘ವಾಯ್ಸ್ ಆಫ್ ಹಿಂದ್’ ಎಂಬ ಆನ್ಲೈನ್ ಮಾಸಪತ್ರಿಕೆಯನ್ನು ಸಹ ಐಎಸ್ಐಎಸ್ ಪ್ರಕಟಿಸುತ್ತಿದೆ. ಈ ಮಾಸಪತ್ರಿಕೆಯಲ್ಲಿ ಭಾರತ ಕೇಂದ್ರಿತ ವಿಷಯಗಳೇ ಇರುತ್ತವೆ. ಮುಸ್ಲಿಂ ಯುವಕರನ್ನು ತೀವ್ರಗಾಮಿಗಳನ್ನಾಗಿ ಮಾಡುವಲ್ಲಿ ಈ ಆನ್ಲೈನ್ ಪತ್ರಿಕೆ ಮುಂಚೂಣಿಯಲ್ಲಿದೆ ಎಂದು ಎನ್ಐಎ ತಿಳಿಸಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಕಾಶ್ಮೀರದ 16 ಸ್ಥಳಗಳಲ್ಲಿ ಭಾನುವಾರ ದಾಳಿ ನಡೆಸಿದ್ದಾರೆ. ಜಮ್ಮು–ಕಾಶ್ಮೀರ ಪೊಲೀಸರು ಹಾಗೂ ಸಿಆರ್ಪಿಎಫ್ ಯೋಧರು ಈ ಕಾರ್ಯಾಚರಣೆಗೆ ಭದ್ರತೆ ಒದಗಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.