×
ADVERTISEMENT
ಈ ಕ್ಷಣ :
ADVERTISEMENT

ಹಸಿವು ಸೂಚ್ಯಂಕ ಭಾರತಕ್ಕೆ 101ನೇ ರ‍್ಯಾಂಕ್: ಮೋದಿಗೆ ಕಪಿಲ್‌ ಸಿಬಲ್‌ 'ಅಭಿನಂದನೆ'

Published : 15 ಅಕ್ಟೋಬರ್ 2021, 8:19 IST
ಫಾಲೋ ಮಾಡಿ
Comments

ಬೆಂಗಳೂರು: ಜಾಗತಿಕ ಹಸಿವು ಸೂಚ್ಯಂಕ 2021ರ ಪಟ್ಟಿಯಲ್ಲಿ ಭಾರತ 101ನೇ ಸ್ಥಾನಕ್ಕೆ ಕುಸಿದಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌ 'ಅಭಿನಂದನೆ' ಸಲ್ಲಿಸಿದ್ದಾರೆ.

'ರಾಷ್ಟ್ರದ ಬಡತನ ಮತ್ತು ಹಸಿವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದ್ದಕ್ಕೆ ಮೋದಿ ಜೀ ಅವರಿಗೆ ಅಭಿನಂದನೆಗಳು' ಎಂದು ವ್ಯಂಗ್ಯವಾಗಿ ಟ್ವೀಟ್‌ ಮಾಡಿರುವ ಕಪಿಲ್‌ ಸಿಬಲ್‌, ಜಾಗತಿಕ ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳ ರಾಷ್ಟ್ರಗಳಿಗಿಂತ ಭಾರತ ಹಿಂದಿರುವುದನ್ನು ಒತ್ತಿ ಹೇಳಿದ್ದಾರೆ.

''ಅಭಿನಂದನೆಗಳು ಮೋದಿ ಜೀ ಇವುಗಳನ್ನು ತೊಡೆದುಹಾಕಿದ್ದಕ್ಕೆ:
1) ಬಡತನ
2) ಹಸಿವು
3) ಭಾರತವನ್ನು ಜಾಗತಿಕ ಶಕ್ತಿಯಾಗಿ ನಿರ್ಮಾಣ ಮಾಡುವಲ್ಲಿ,
4) ನಮ್ಮ ಡಿಜಿಟಲ್‌ ಆರ್ಥಿಕತೆ
5) ... ಹೀಗೆ ಹಲವು

ಜಾಗತಿಕ ಹಸಿವು ಸೂಚ್ಯಂಕ:
2020: ಭಾರತ 94ನೇ ರ‍್ಯಾಂಕ್‌
2021: ಭಾರತ 101ನೇ ರ‍್ಯಾಂಕ್‌

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳಕ್ಕಿಂತ ಹಿಂದಿದ್ದೇವೆ.'' ಎಂದು ಕಪಿಲ್‌ ಸಿಬಲ್‌ ಟ್ವೀಟ್‌ ಮಾಡಿದ್ದಾರೆ.

ಅಪೌಷ್ಟಿಕತೆ ನಿವಾರಣೆಗಾಗಿ ಶ್ರಮಿಸುತ್ತಿರುವ 116 ರಾಷ್ಟ್ರಗಳ ಪೈಕಿ ಭಾರತ 101ನೇ ಸ್ಥಾನದಲ್ಲಿದೆ. ಭಾರತದ ನೆರೆಯ ರಾಷ್ಟ್ರಗಳಾದ ನೇಪಾಳ 76, ಬಾಂಗ್ಲಾದೇಶ 76, ಮ್ಯಾನ್ಮಾರ್‌ 71 ಮತ್ತು ಪಾಕಿಸ್ತಾನ 92ನೇ ರ‍್ಯಾಂಕ್‌ ಪಡೆದಿವೆ.

ಜಾಗತಿಕ ಹಸಿವು ಸೂಚ್ಯಂಕ 2021ರ ಪಟ್ಟಿಯಲ್ಲಿ ಭಾರತ 101ನೇ ಸ್ಥಾನಕ್ಕೆ ಕುಸಿದಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌ 'ಅಭಿನಂದನೆ' ಸಲ್ಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT