×
ADVERTISEMENT
ಈ ಕ್ಷಣ :
ADVERTISEMENT

ತಮಿಳುನಾಡಿನಲ್ಲಿ ಐಟಿ ಇಲಾಖೆ ದಾಳಿ: ₹ 250 ಕೋಟಿ ಕಪ್ಪು ಹಣ ಪತ್ತೆ

ಎರಡು ಉದ್ಯಮ ಸಮೂಹಗಳ ಮೇಲೆ ಐಟಿ ಇಲಾಖೆ ದಾಳಿ
Published : 10 ಅಕ್ಟೋಬರ್ 2021, 9:09 IST
ಫಾಲೋ ಮಾಡಿ
Comments

ನವದೆಹಲಿ: ತಮಿಳುನಾಡಿನ ಎರಡು ಉದ್ಯಮ ಸಮೂಹಗಳಿಗೆ ಸೇರಿದ ಸ್ಥಳಗಳ ಮೇಲೆ ಇತ್ತೀಚೆಗೆ ನಡೆಸಿದ ಶೋಧ ಕಾರ್ಯ ಸಂದರ್ಭದಲ್ಲಿ ₹250 ಕೋಟಿ ಕಪ್ಪುಹಣ ಪತ್ತೆ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಭಾನುವಾರ ತಿಳಿಸಿದೆ.

ಈ ಉದ್ಯಮ ಸಮೂಹಗಳು ರೇಷ್ಮೆ ಸೀರೆಗಳ ವ್ಯಾಪಾರ ಹಾಗೂ ಚಿಟ್‌ ಫಂಡ್‌ ವ್ಯವಹಾರ ನಡೆಸುತ್ತಿವೆ. ಕಾಂಚಿಪುರ, ವೆಲ್ಲೂರ್‌ ಹಾಗೂ ಚೆನ್ನೈಗಳಲ್ಲಿ 34 ಸ್ಥಳಗಳಲ್ಲಿ ಅಕ್ಟೋಬರ್‌ 5ರಂದು ಶೋಧ ಕಾರ್ಯ ಕೈಗೊಳ್ಳಲಾಗಿತ್ತು ಎಂದು ಇಲಾಖೆ ತಿಳಿಸಿದೆ.

‘ಚಿಟ್‌ ಫಂಡ್‌  ನಡೆಸುತ್ತಿರುವ ಸಮೂಹವು ಅಕ್ರಮ ವ್ಯವಹಾರದಲ್ಲಿಯೂ ತೊಡಗಿದೆ. ಕಳೆದ ಹಲವು ವರ್ಷಗಳಲ್ಲಿ ಸಮೂಹ ಮಾಡಿರುವ ಹೂಡಿಕೆ ಹಾಗೂ ಪಾವತಿಸಿದ ಮೊತ್ತ ₹ 400 ಕೋಟಿಗೂ ಅಧಿಕ’ ಎಂದು  ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಈ ಸಮೂಹವು ಕಮಿಷನ್‌ ಹಾಗೂ ಡಿವಿಡೆಂಡ್‌ ರೂಪದಲ್ಲಿ ಆದಾಯ ಗಳಿಸಿದ್ದು, ಇದಕ್ಕೆ ಯಾವುದೇ ಲೆಕ್ಕಪತ್ರ ಇಲ್ಲ’ ಎಂದೂ ಪ್ರಕಟಣೆ ತಿಳಿಸಿದೆ.

‘ಲೆಕ್ಕಪತ್ರ ಇರದ ₹ 1.35 ಕೋಟಿ, 7.5 ಕೆ.ಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಲೆಕ್ಕಪತ್ರ ಇಲ್ಲದ ₹ 150 ಕೋಟಿಗೂ ಅಧಿಕ ಮೊತ್ತದ ಆದಾಯವನ್ನು ಸಹ ಪತ್ತೆ ಹಚ್ಚಲಾಗಿದೆ’ ಎಂದು ತಿಳಿಸಿದೆ.

ರೇಷ್ಮೆ ಸೀರೆಗಳ ವ್ಯಾಪಾರದಲ್ಲಿ ತೊಡಗಿರುವ ಮತ್ತೊಂದು ಸಮೂಹವು ಕಳೆದ ವರ್ಷಗಳಲ್ಲಿನ ಮಾರಾಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮುಚ್ಚಿಟ್ಟಿರುವುದನ್ನು ಪತ್ತೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.

‘ತಮಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್‌ ಬಳಸಿ, ವ್ಯವಹಾರಕ್ಕೆ ಸಂಬಂಧಿಸಿದ ಅಂಕಿ–ಅಂಶಗಳನ್ನು ತಿರುಚಿರುವುದನ್ನು ಪತ್ತೆ ಹಚ್ಚಲಾಗಿದೆ. ಲೆಕ್ಕಪತ್ರ ಇಲ್ಲದ ₹ 44 ಲಕ್ಷ ನಗದು, 9.5 ಕೆಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಬಹಿರಂಗಪಡಿಸದ ಆದಾಯವನ್ನು ಸಹ ಪತ್ತೆ ಮಾಡಲಾಗಿದ್ದು, ಇದರ ಮೊತ್ತ ₹ 100 ಕೋಟಿಗೂ ಅಧಿಕ’ ಎಂದೂ ಇಲಾಖೆ ತಿಳಿಸಿದೆ.

ತಮಿಳುನಾಡಿನ ಎರಡು ಉದ್ಯಮ ಸಮೂಹಗಳಿಗೆ ಸೇರಿದ ಸ್ಥಳಗಳ ಮೇಲೆ ಇತ್ತೀಚೆಗೆ ನಡೆಸಿದ ಶೋಧ ಕಾರ್ಯ ಸಂದರ್ಭದಲ್ಲಿ ₹250 ಕೋಟಿ ಕಪ್ಪುಹಣ ಪತ್ತೆ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಭಾನುವಾರ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT