ನವದೆಹಲಿ: ಚಿನ್ನದ ಆಮದು ಮೌಲ್ಯವು ಈ ವರ್ಷದ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ₹ 1.78 ಲಕ್ಷ ಕೋಟಿಗೆ ಏರಿಕೆ ಆಗಿದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹ 50,524 ಕೋಟಿ ಮೌಲ್ಯದ ಚಿನ್ನ ಆಮದಾಗಿತ್ತು. ಬೆಳ್ಳಿ ಆಮದು ಪ್ರಮಾಣವು ಶೇಕಡ 15.5ರಷ್ಟು ಇಳಿಕೆ ಆಗಿದ್ದು ₹ 4,601 ಕೋಟಿಗಳಷ್ಟಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹ 21,547 ಕೋಟಿ ಮೌಲ್ಯದ ಬೆಳ್ಳಿ ಆಮದಾಗಿತ್ತು.

ಚಿನ್ನದ ಆಮದು ಗಣನೀಯ ಏರಿಕೆ ಕಂಡಿರುವುದರಿಂದ ದೇಶದ ವ್ಯಾಪರ ಕೊರತೆ ಅಂತರವು ₹ 21,992 ಕೋಟಿಗಳಿಂದ ₹ 1.67 ಲಕ್ಷ ಕೋಟಿಗಳಿಗೆ ಏರಿಕೆ ಆಗಿದೆ.

ಹಣಕಾಸು ವರ್ಷದ ಮೊದಲಾರ್ಧದಲ್ಲಿ ರತ್ನ ಮತ್ತು ಚಿನ್ನಾಭರಣ ರಫ್ತು ₹ 64,641 ಕೋಟಿಗಳಿಂದ ₹ 1.43 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಹಬ್ಬದ ಋತು ಮತ್ತು ಹೆಚ್ಚಿನ ಬೇಡಿಕೆಯ ಕಾರಣಗಳಿಂದಾಗಿ ಚಿನ್ನದ ಆಮದು ಪ್ರಮಾಣ ಏರಿಕೆ ಆಗಿದೆ ಎಂದು ರತ್ನ ಮತ್ತು ಚಿನ್ನಾಭರಣ ಉತ್ತೇಜನ ಮಂಡಳಿಯ (ಜಿಜೆಇಪಿಸಿ) ಅಧ್ಯಕ್ಷ ಕೋಲಿನ್ ಶಾ ಹೇಳಿದ್ದಾರೆ.

ಚಿನ್ನದ ಆಮದು ಮೌಲ್ಯವು ಈ ವರ್ಷದ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ₹ 1.78 ಲಕ್ಷ ಕೋಟಿಗಳಿಗೆ ಏರಿಕೆ ಆಗಿದೆ. ಬೇಡಿಕೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.