×
ADVERTISEMENT
ಈ ಕ್ಷಣ :
ADVERTISEMENT

ಹಸಿವು ಸೂಚ್ಯಂಕ: ಪಾಕ್‌, ಬಾಂಗ್ಲಾ, ನೇಪಾಳಕ್ಕಿಂತಲೂ ಕೆಳಗಿನ ಸ್ಥಾನದಲ್ಲಿ ಭಾರತ

Published : 15 ಅಕ್ಟೋಬರ್ 2021, 1:40 IST
ಫಾಲೋ ಮಾಡಿ
Comments

ನವದೆಹಲಿ: ಜಾಗತಿಕ ಹಸಿವಿನ ಸೂಚ್ಯಂಕ –2021ರಲ್ಲಿ (ಜಿಎಚ್‌ಐ) ಭಾರತವು 101ನೆಯ ಸ್ಥಾನಕ್ಕೆ ಕುಸಿದಿದೆ. 2020ರಲ್ಲಿ ಭಾರತವು 94ನೆಯ ಸ್ಥಾನದಲ್ಲಿ ಇತ್ತು. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಕ್ಕಿಂತ ಕೆಳಗಿನ ಸ್ಥಾನವನ್ನು ಭಾರತವು ಪಡೆದಿದೆ.

ಚೀನಾ, ಬ್ರೆಜಿಲ್ ಮತ್ತು ಕುವೈತ್ ದೇಶಗಳು ಮೊದಲ ಸ್ಥಾನವನ್ನು ಹಂಚಿಕೊಂಡಿವೆ. ಐರ್ಲೆಂಡ್‌ನ ಕನ್ಸರ್ನ್‌ ವರ್ಲ್ಡ್‌ವೈಡ್‌ ಮತ್ತು ಜರ್ಮನಿಯ ವೆಲ್ಟ್ ಹಂಗರ್ ಹಿಲ್ಫ್ ಸಂಸ್ಥೆಗಳು ಜೊತೆಯಾಗಿ ಈ ಸೂಚ್ಯಂಕವನ್ನು ಸಿದ್ಧಪಡಿಸಿವೆ. ಭಾರತದಲ್ಲಿನ ಹಸಿವಿನ ಪರಿಸ್ಥಿತಿಯು ‘ಅಪಾಯಕಾರಿ’ ಎಂದು ಸಂಸ್ಥೆಗಳು ಸಿದ್ಧಪಡಿಸಿದ ವರದಿಯು ಹೇಳಿದೆ.

ಈ ಬಾರಿ ಒಟ್ಟು 116 ದೇಶಗಳಲ್ಲಿನ ಪರಿಸ್ಥಿತಿಯನ್ನು ಪರಿಗಣಿಸಿ ಸೂಚ್ಯಂಕ ಸಿದ್ಧಪಡಿಸಲಾಗಿದೆ. ಹಸಿವಿನ ಸೂಚ್ಯಂಕದಲ್ಲಿ ಯಾವ ದೇಶಕ್ಕೆ ಎಷ್ಟನೆಯ ಸ್ಥಾನ ಎಂಬುದನ್ನು ತೀರ್ಮಾನಿಸುವ ಅಂಕಗಳ ವಿಚಾರದಲ್ಲಿಯೂ ಭಾರತವು ಹಿನ್ನಡೆ ಕಂಡಿದೆ. 2000ನೆಯ ಇಸವಿಯಲ್ಲಿ 38.8 ಅಂಕ ಪಡೆದಿದ್ದ ಭಾರತವು, 2012–2021ನೆಯ ಅವಧಿಯಲ್ಲಿ 28.8–27.5 ಅಂಕ ಪಡೆದಿದೆ.

ಅಪೌಷ್ಟಿಕತೆ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ತೂಕ ಕಡಿಮೆ ಇರುವುದು, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಎತ್ತರ ಕಡಿಮೆ ಇರುವುದು ಹಾಗೂ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮರಣ ಪ್ರಮಾಣವನ್ನು ಪರಿಗಣಿಸಿ ಜಿಎಚ್‌ಐ ಅಂಕವನ್ನು ನೀಡಲಾಗುತ್ತದೆ.

‘ಕೋವಿಡ್ ಸಾಂಕ್ರಾಮಿಕ ಹಾಗೂ ಅದಕ್ಕೆ ಸಂಬಂಧಿಸಿದ ನಿರ್ಬಂಧಗಳು ಜನರ ಮೇಲೆ ತೀವ್ರ ಪರಿಣಾಮ ಉಂಟುಮಾಡಿವೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ತೂಕ ಕಡಿಮೆ ಇರುವುದು ಭಾರತದಲ್ಲಿ ಅತಿಹೆಚ್ಚು’ ಎಂದು ವರದಿಯಲ್ಲಿ ಹೇಳಲಾಗಿದೆ.

ನೇಪಾಳ (76ನೇ ಸ್ಥಾನ), ಬಾಂಗ್ಲಾದೇಶ (76), ಪಾಕಿಸ್ತಾನ (92) ಮತ್ತು ಮ್ಯಾನ್‌ಮಾರ್‌ (71) ಭಾರತ ಪಡೆದಿರುವುದಕ್ಕಿಂತ ಮೇಲಿನ ಸ್ಥಾನಗಳನ್ನು ಪಡೆದುಕೊಂಡಿದ್ದರೂ ಈ ದೇಶಗಳಲ್ಲಿನ ಪರಿಸ್ಥಿತಿಯೂ ‘ಅಪಾಯಕಾರಿ’ ಆಗಿದೆ. ಮಕ್ಕಳ ಮರಣ ಪ್ರಮಾಣ ತಗ್ಗಿಸುವಲ್ಲಿ, ಎತ್ತರ ಕಡಿಮೆ ಇರುವ ವಿಚಾರದಲ್ಲಿ, ಅಪೌಷ್ಟಿಕತೆ ವಿಚಾರದಲ್ಲಿ ಭಾರತವು ಸುಧಾರಣೆ ತೋರಿಸಿದೆ ಎಂದು ವರದಿಯು ಉಲ್ಲೇಖಿಸಿದೆ.

116 ರಾಷ್ಟ್ರಗಳಿರುವ ಜಾಗತಿಕ ಹಸಿವು ಸೂಚ್ಯಂಕ 2021ರ ಪಟ್ಟಿಯಲ್ಲಿ ಭಾರತ 101ನೇ ಸ್ಥಾನಕ್ಕೆ ಕುಸಿದಿದೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳಿಂದ ಹಿಂದುಳಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT