×
ADVERTISEMENT
ಈ ಕ್ಷಣ :
ADVERTISEMENT

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿತ ಆಘಾತಕಾರಿ: ಕೇಂದ್ರ

Published : 15 ಅಕ್ಟೋಬರ್ 2021, 19:32 IST
ಫಾಲೋ ಮಾಡಿ
Comments

ನವದೆಹಲಿ: ‘ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಶ್ರೇಣಿಯನ್ನು ಕಡಿಮೆ ಮಾಡಿರುವುದು ಆಘಾತಕಾರಿ, ಇದಕ್ಕೆ ಬಳಸಿರುವ ವಿಧಾನವು ಅವೈಜ್ಞಾನಿಕ’ ಎಂದು ಶುಕ್ರವಾರ ಕೇಂದ್ರ ಸರ್ಕಾರವು ಹೇಳಿದೆ.

ಜಾಗತಿಕ ಹಸಿವಿನ ವರದಿ 2021ಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು, ‘ಅಪೌಷ್ಟಿಕತೆಯಿಂದ ಬಳಲುತ್ತಿರುವ ಜನಸಂಖ್ಯೆಯ ಅನುಪಾತದ ಮೇಲೆ ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್ಎಒ) ಅಂದಾಜಿನ ಮೇರೆಗೆ ಭಾರತದ ಶ್ರೇಣಿಯನ್ನು ಕಡಿಮೆಗೊಳಿಸಿದ್ದು ಆಘಾತಕಾರಿ. ವರದಿಯು ವಾಸ್ತವ ಸತ್ಯಾಂಶ ಮತ್ತು ಗಂಭೀರ ಅಧ್ಯಯನದ ಕೊರತೆಯಿಂದ ಬಳಲುತ್ತಿದೆ’ ಎಂದು ತಿಳಿಸಿದೆ. 

‘ಎಫ್‌ಎಒ ಬಳಸಿರುವ ವಿಧಾನವು ಅವೈಜ್ಞಾನಿಕವಾಗಿದೆ. ಜನಸಂಖ್ಯೆಯನ್ನು ಆಧರಿಸಿ ‘ಗ್ಯಾಲ್‌ಅಪ್’ ಮೂಲಕ ನಾಲ್ಕು ಪ್ರಶ್ನೆಗಳನ್ನಿಟ್ಟುಕೊಂಡು ದೂರವಾಣಿ ಮೂಲಕ ಸಂಗ್ರಹಿಸಿದ ಅಭಿಪ್ರಾಯಗಳ ಫಲಿತಾಂಶವನ್ನು ವರದಿಯು ಆಧರಿಸಿದೆ. ಅಪೌಷ್ಟಿಕತೆಯ ಪ್ರಮಾಣವನ್ನು ಎತ್ತರ ಮತ್ತು ತೂಕದ ಮೂಲಕ ಅಳೆಯಲಾಗುತ್ತದೆ. ಆದರೆ ಗ್ಯಾಲ್‌ ಅಪ್ ಈ ವಿಧಾನವನ್ನು ಅನುಸರಿಸಿಲ್ಲ’ ಎಂದು ಸಚಿವಾಲಯವು ಹೇಳಿದೆ.

‘ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಶ್ರೇಣಿಯನ್ನು ಕಡಿಮೆ ಮಾಡಿರುವುದು ಆಘಾತಕಾರಿ, ಇದಕ್ಕೆ ಬಳಸಿರುವ ವಿಧಾನವು ಅವೈಜ್ಞಾನಿಕ’ ಎಂದು ಶುಕ್ರವಾರ ಕೇಂದ್ರ ಸರ್ಕಾರವು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT