×
ADVERTISEMENT
ಈ ಕ್ಷಣ :
ADVERTISEMENT

ಹಡಗಿನಲ್ಲಿ ಡ್ರಗ್ಸ್‌ ಪ್ರಕರಣ: ನೈಜೀರಿಯಾ ಪ್ರಜೆ ಬಂಧನ

ಫಾಲೋ ಮಾಡಿ
Comments

ಮುಂಬೈ: ಹಡಗಿನಲ್ಲಿ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿ ಎನ್‌ಸಿಬಿ ಅಧಿಕಾರಿಗಳು ಶನಿವಾರ ನೈಜೀರಿಯಾದ ಪ್ರಜೆ ಒಕಾರೊ ಖುಜಾಮಾನನ್ನು ಬಂಧಿಸಿದ್ದಾರೆ. ಈತ ಪ್ರಕರಣದಲ್ಲಿ ಬಂಧನವಾದ ನೈಜೀರಿಯಾದ ಎರಡನೇ ಪ್ರಜೆ.

ಬಂಧಿತ ನೈಜೀರಿಯಾ ಪ್ರಜೆಯಿಂದ ಕೊಕೈನ್‌ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಈವರೆಗೆ ಬಾಲಿವುಡ್ ನಟ ಶಾರುಕ್‌ ಖಾನ್ ಪುತ್ರ ಆರ್ಯನ್‌ ಖಾನ್‌ ಸೇರಿದಂತೆ ಒಟ್ಟು 20 ಜನರ ಬಂಧನವಾದಂತಾಗಿದೆ.

ಮಾಹಿತಿಯನ್ನು ಆಧರಿಸಿ ಪ್ರಕರಣದಲ್ಲಿ ವಿದೇಶಿಯರ ಕೈವಾಡ ಇರುವುದರ ಪತ್ತೆಗೆ ಎನ್‌ಸಿಬಿ ಕಾರ್ಯತತ್ಪರವಾಗಿದೆ. ಮಹಾರಾಷ್ಟ್ರದ ಸಚಿವ ನವಾಬ್ ಮಲ್ಲಿಕ್‌ ಅವರು ‘ದಾಳಿಯಲ್ಲಿ ಇಬ್ಬರು ಹೊರಗಿನವರ ಪಾತ್ರವಿದೆ’ ಎಂದು ಆರೋಪಿಸಿದ್ದರು.

ಎನ್‌ಸಿಬಿ ಈ ಮೊದಲು ಗೋವಾ ಮೂಲದ ಹಡಗಿನ ಮೇಲೆ ಅಕ್ಟೋಬರ್ 2ಕ್ಕೂ ಹಿಂದೆ ದಾಳಿ ನಡೆಸಿದ್ದಾಗಲೇ ಈ ‘ಇಬ್ಬರ’ ಬಗ್ಗೆ ಎನ್‌ಸಿಬಿಗೆ ಮಾಹಿತಿ ಇತ್ತು. ಇಡೀ ದಾಳಿ ಕಾರ್ಯಾಚರಣೆಯಲ್ಲಿ 9 ಮಂದಿ ಸಾಕ್ಷ್ಯಗಳ ಪಾತ್ರವಿದೆ. ಇವರಲ್ಲಿ ಮನೀಶ್ ಭಾನುಶಾಲಿ ಮತ್ತು ಕೆ.ಪಿ.ಗೋಸವಿ ಅವರು ಸೇರಿದ್ದಾರೆ ಎಂದೂ ಸಚಿವರು ಹೇಳಿದ್ದರು.

ಇದೊಂದು ನಕಲಿ ದಾಳಿ. ಹೊರಗಿನ ಇಬ್ಬರ ಪಾತ್ರವಿದೆ ಎಂದು ಸಚಿವ ನವಾಬ್ ಮಲ್ಲಿಕ್‌ ಶನಿವಾರ ಆರೋಪಿಸಿದ್ದು, ಈ ಮೂಲಕ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು. ಗೋವಾ ಮೂಲದ ಹಡಗಿನ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಅಧಿಕಾರಿಗಳು ಒಟ್ಟು 11 ಜನರನ್ನು ಬಂಧಿಸಿದ್ದು, ಈ ಪೈಕಿ ಮೂವರನ್ನು ಬಿಟ್ಟಿದ್ದರು ಎಂದು ಆರೋಪಿಸಿದ್ದರು.

ಬಂಧಿತ ನೈಜೀರಿಯಾ ಪ್ರಜೆಯಿಂದ ಕೊಕೈನ್‌ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಈವರೆಗೆ ಬಾಲಿವುಡ್ ನಟ ಶಾರುಕ್‌ ಖಾನ್ ಪುತ್ರ ಆರ್ಯನ್‌ ಖಾನ್‌ ಸೇರಿದಂತೆ ಒಟ್ಟು 20 ಜನರ ಬಂಧನವಾದಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT