ನವದೆಹಲಿ: ಭಾರತೀಯ ವಾಯುಪಡೆಯ ಜಮ್ಮು ಮತ್ತು ಕಾಶ್ಮೀರದ ಲೆಹ್‌ನಲ್ಲಿರುವ ಕೇಂದ್ರಕ್ಕೆ ವಾಯುಪಡೆ ಮುಖ್ಯಸ್ಥ ವಿ.ಆರ್.ಚೌಧರಿ ಅವರು ಶನಿವಾರ ಭೇಟಿ ನೀಡಿದ್ದು, ಸೇವಾ ಘಟಕದ ಕಾರ್ಯನಿರ್ವಹಣೆ, ಸಿದ್ಧತೆಗಳನ್ನು ಪರಿಶೀಲಿಸಿದರು.

ಇದೇ ಸಂದರ್ಭದಲ್ಲಿ ಅವರು ಘಟಕದ ಸಿಬ್ಬಂದಿಯ ಜೊತೆಗೆ ಚರ್ಚಿಸಿ ಅಭಿಪ್ರಾಯಗಳನ್ನು ಪಡೆದರು ಎಂದು ವಾಯುಪಡೆಯು ಭಾನುವಾರ ಟ್ವೀಟ್ ಮಾಡಿದೆ.

ಗಡಿ ಭಾಗದಲ್ಲಿ ಭಾರತ ಮತ್ತು ಚೀನಾದ ಸೇನೆಯ ನಡುವೆ ಮೇ 5ರ ಹಿಂಸಾಚಾರದ ನಂತರ ಉದ್ಭವಿಸಿರುವ ಅನಿಶ್ಚಿತತೆ ಈಗಲೂ ಮುಂದುವರಿದಿದೆ. ಉಭಯ ಸೇನೆಗಳು ಗಡಿ ಭಾಗದಲ್ಲಿ ತಮ್ಮ ಸಿಬ್ಬಂದಿಯ ನಿಯೋಜನೆಯನ್ನು ಹೆಚ್ಚಿಸಿವೆ.

ಪರಿಸ್ಥಿತಿಯನ್ನು ತಿಳಿಗೊಳಿಸುವ ಯತ್ನವಾಗಿ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಮತ್ತು ಸೇನಾ ಮಟ್ಟದಲ್ಲಿ ಚರ್ಚೆಗಳು ಪ್ರಗತಿಯಲ್ಲಿವೆ. ವರದಿಗಳ ಪ್ರಕಾರ, ಉಭಯ ಸೇನೆಗಳು ವಾಸ್ತವ ಗಡಿ ರೇಖೆಯುದ್ದಕ್ಕೂ ಕ್ರಮವಾಗಿ 50 ಸಾವಿರ ಮತ್ತು 60 ಸಾವಿರ ಸಿಬ್ಬಂದಿಯನ್ನು ನಿಯೋಜಿಸಿವೆ.

ಇದೇ ಸಂದರ್ಭದಲ್ಲಿ ಅವರು ಘಟಕದ ಸಿಬ್ಬಂದಿಯ ಜೊತೆಗೆ ಚರ್ಚಿಸಿ ಅಭಿಪ್ರಾಯಗಳನ್ನು ಪಡೆದರು ಎಂದು ವಾಯುಪಡೆಯು ಭಾನುವಾರ ಟ್ವೀಟ್ ಮಾಡಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.